ಹಳೆ ಮೈಸೂರು ಭಾಗದಿಂದ ತನ್ನ ರಾಜಕೀಯ ಅಸ್ತಿತ್ವ ಕಂಡುಕೊಂಡು, ಅತಂತ್ರ ವಿಧಾನ ಸಭೆ
ನಿರ್ಮಾಣವಾದಗಲೆಲ್ಲಾ ಕಿಂಗ್ ಮೆಕರ್ ಆಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೊಡನೆ ಅಧಿಕಾರ ಹಂಚಿಕೊಂಡಿದ್ದ ಜೆಡಿಎಸ್ ಈ ಚುನಾವಣೆಯಲ್ಲಿ ಈ ಭಾಗದ ವ್ಯಾಪ್ತಿಯಲ್ಲಿ ಬರುವ 9 ಜಿಲ್ಲೆಗಳಲ್ಲಿ 29 ಸ್ಥಾನಗಳನ್ನು ಪಡೆದಿದಿತ್ತು. ಈಗ 15 ಸ್ಥಾನಗಳನ್ನು ಮಾತ್ರ ಗಳಿಸಿದೆ.
2008 ರಲ್ಲಿ ಒಮ್ಮೆ ಮಾತ್ರ ಜೆಡಿಎಸ್ 24 ಸ್ಥಾನಕ್ಕೆ ಇಳಿದ್ದಿದ್ದನ್ನು ಬಿಟ್ಟರೆ, ನಂತರ ನಡೆದ ಎಲ್ಲಾ ಚುನಾವಣೆಗಳಲ್ಲಿ 30ರ ಗಡಿ ದಾಟಿದೆ. ಇದಕ್ಕೆ ಕಾರಣ ಒಕ್ಕಲಿಗ ಸಮುದಾಯ ಸಂಪೂರ್ಣವಾಗಿ
ಜೆಡಿಎಸ್ ಅನ್ನು ಹಳೆ ಮೈಸೂರು ಜಿಲ್ಲೆಗಳಲ್ಲಿ ಕೈ ಹಿಡಿದಿದ್ದು. ಈ ಚುನಾವಣೆಯಲ್ಲಿ ಹೀಗೆ ಸೋಲಲು ಹಲವು
ಕಾರಣಗಳಿವೆ. ಒಕ್ಕಲಿಗ ಸಮುದಾಯದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನನಗೂ ಮುಖ್ಯಮಂತ್ರಿ ಆಗುವ
ಅವಕಾಶವಿದೆ, ಕಾಂಗ್ರೆಸ್ ಬೆಂಬಲಿಸಿ ಎಂದು ಹೇಳಿದ್ದು ಒಂದು ಕಾರಣವಿದ್ದರೂ, ಈ ಚುನಾವಣೆಯಲ್ಲಿ ವಿಶೇಷವಾಗಿ ಹಾಸನ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಜೆಡಿಎಸ್ನ ಸಂಪ್ರದಾಯಿಕ ಮತಗಳಿಗೆ ಕೈ ಹಾಕಿದೆ. ಇದರಿಂದ ಒಕ್ಕಲಿಗರ ಶೇ. 12 ರಷ್ಟು ಮತಗಳು ಕಡಿಮೆ ಆಯಿತು. ಇದು ಕಾಂಗ್ರೆಸ್ ಗೆ ಅನುಕೂಲವಾಯಿತು. ಇದಲ್ಲದೆ ಅಲ್ಪಸ್ವಲ್ಪ ಮತಗಳನ್ನು ಜೆಡಿಎಸ್ಗೆ ಆಗುತ್ತಿದ್ದ ಮುಸ್ಲಿಂ ಮತ್ತು ಸಣ್ಣ ಸಣ್ಣ ಸಮುದಾಯಗಳ ಮತಗಳು ಗ್ಯಾಸ್ ಸಿಲಿಂಡರ್ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದರಿಂದ ಕಾಂಗ್ರೆಸ್ಗೆ ಮತ ಹಾಕಿದವು, ಅಡಳಿತ ರೂಢ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದಲೂ ಬೇಸತ್ತು ಕಾಂಗ್ರೆಸ್ಗೆ ಮತಗಳು ಹೋದವು. ಜೆಡಿಎಸ್ ಕೂಡ ಟಿಕೆಟ್ ಹಂಚಿಕೆ ವೇಳೆ ಎಡವಿತ್ತು ಎಂದು ಹೇಳಬಹುದು.
ಜೆಡಿಎಸ್ ಪ್ರಾಬಲ್ಯ ಇರುವ ಜಿಲ್ಲೆಗಳಾದ ಮೈಸೂರು, ಹಾಸನ, ಮಂಡ್ಯ, ತಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ,ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇರುವ 59 ಕ್ಷೇತ್ರಗಳ ಪೈಕಿ ಜೆಡಿಎಸ್ 29 ಸ್ಥಾನಗಳನ್ನು ಗಳಿಸಿತ್ತು. ಈಗ 14 ಸ್ಥಾನಗಳಿಗೆ ಕುಸಿದಿದೆ. ಆದರೆ ಕಾಂಗ್ರೆಸ್ ಕಳೆದ ಬಾರಿ 19 ಸ್ಥಾನಗಳನ್ನು ಪಡೆದಿತ್ತು. ಈ ಚುನಾವಣೆಯಲ್ಲಿ 37 ಸ್ಥಾನಗಳನ್ನು ಪಡೆಯುವುದರೊಂದಿಗೆ 18 ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ಪ್ರಾಬಲ್ಯ ಮೆರೆದಿದೆ. ಈ ಬಾರಿ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಕಾರ್ಡ್ ಕೂಡ ಹೆಚ್ಚು ಮತಗಳನ್ನು ಗಳಿಸಲು ಸಾಧ್ಯವಾಗಿದೆ. 2018 ರ
ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ ಹಾಸನ ಜಿಲ್ಲೆಯಲ್ಲಿ 7 ಕ್ಕೆ 7, ಮಂಡ್ಯ ಜಿಲ್ಲೆಗಳ ಎಲ್ಲಾ 7 ಸ್ಥಾನಗಳನ್ನು, ಮೈಸೂರಿನಲ್ಲಿ 11 ಕ್ಕೆ 5, ರಾಮನಗರದಲ್ಲಿ 4 ಕ್ಕೆ 3, ತಮಕೂರಿನಲ್ಲಿ 11 ಕ್ಕೆ 4, ಚಿಕ್ಕಬಳ್ಳಾಪುರದಲ್ಲಿ 5 ಕ್ಕೆ 1, ಕೋಲಾರದಲ್ಲಿ 6 ಕ್ಕೆ 1, ಬೆಂಗಳೂರು ಗ್ರಾಮಾಂತರಲ್ಲಿ 2 ಸ್ಥಾನಗಳನ್ನು ಗಳಿಸಿತ್ತು.ಕಳೆದ ಬಾರಿ ಶೂನ್ಯ ಸಂಪಾದನೆ ಮಾಡಿದ್ದ ಜೆಡಿಎಸ್ 1 ಸ್ಥಾನ ಗಳಿಸಿದೆ.