ಸುದ್ದಿಮೂಲ ವಾರ್ತೆ ಮಾನ್ವಿ, ೆ.26:
ೆ.28 ರಂದು ಶನಿವಾರ ನೀರಮಾನ್ವಿಿ ಗ್ರಾಾಮದ
ಶ್ರೀ ಸಿದ್ಧಾಾರೂಢ ಮಠದಲ್ಲಿ 11 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಕಸಾಪ ಹಾಗೂ ಸ್ವಾಾಗತ ಸಮಿತಿಯ ಪದಾಧಿಕಾರಿಗಳು ಸಿದ್ದತಾ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಬಾರಿ ಗ್ರಾಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಉದ್ದೇಶದಿಂದ ಕಸಾಪ ಪದಾಧಿಕಾರಿಗಳು ನೀರಮಾನ್ವಿಿ ಗ್ರಾಾಮದಲ್ಲಿ ಸಮ್ಮೇಳನ ನಡೆಸಲು ನಿರ್ಣಯಿಸಿದ್ದಾರೆ.
ಅಂದು ಬೆಳಿಗ್ಗೆೆ 7-30 ಕ್ಕೆೆ ಸಂಪ್ರದಾಯದಂತೆ ಮುಖ್ಯ ವೇದಿಕೆಯ ಮುಂದೆ ರಾಷ್ಟ್ರಧ್ವಜವನ್ನು ಶಾಸಕ ಹಂಪಯ್ಯ ನಾಯಕ, ನಾಡಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಪರಿಷತ್ತು ಧ್ವಜವನ್ನು ಕಸಾಪ ತಾಲೂಕಾಧ್ಯಕ್ಷ ಶರಣಬಸವ ನೀರಮಾನ್ವಿಿ ನೆರವೇರಿಸುವರು.
ಬೆಳಿಗ್ಗೆೆ 8 ಗಂಟೆಗೆ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾಾನದಿಂದ ಶ್ರೀಸಿದ್ದಾರೂಢ ಮಠದವರೆಗೆ ಸಮ್ಮೇಳನಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಹಾಗೂ ನಾಡದೇವಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ತಹಸೀಲ್ದಾಾರ್ ಭೀಮರಾಯ ಬಿ.ರಾಮಸಮುದ್ರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆೆ 10 ಗಂಟೆಗೆ ಸಮ್ಮೇಳನದ ಉದ್ಘಾಾಟನೆ ಕಾರ್ಯಕ್ರಮ ನಡೆಯಲಿದೆ. ವಿವಿಧ ಧರ್ಮಗುರುಗಳು ಸಾನಿಧ್ಯ ವಹಿಸುವರು. ಸಚಿವರಾದ ಎನ್.ಎಸ್. ಬೋಸರಾಜು ಹಾಗೂ ಡಾ.ಶರಣ ಪ್ರಕಾಶ ಪಾಟೀಲ್ ಉಪಸ್ಥಿಿತಿಯಲ್ಲಿ ಶಾಸಕ ಹಂಪಯ್ಯ ನಾಯಕ ಅಧ್ಯಕ್ಷತೆ ವಹಿಸುವರು. ಶಹಪುರದ ಹೆಸರಾಂತ ಸಾಹಿತಿ ಸಿದ್ದರಾಮ ಹೊನ್ಕಲ್ ಸಮ್ಮೇಳನ ಉದ್ಘಾಾಟಿಸುವರು. ಪುಸ್ತಕ ಮಳಿಗೆಗಳನ್ನು ಸಂಸದ ಜಿ.ಕುಮಾರನಾಯಕ ಉದ್ಘಾಾಟಿಸುವರು ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆೆ ಗ್ರಾಾಮೀಣ ಶಾಸಕ ಬಸವನಗೌಡ ದದ್ದಲ ಪುಪ್ಪರ್ಚಾನೆ ಮಾಡುವರು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಆಶಯ ಭಾಷಣ ಮಾಡುವರು. ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು ಪ್ರಾಾಸ್ತಾಾವಿಕ ಹಾಗೂ ಕಸಾಪ ತಾಲೂಕಾಧ್ಯಕ್ಷ ಶರಣಬಸವ ನೀರಮಾನ್ವಿಿ ಸ್ವಾಾಗತ ಭಾಷಣ ಮಾಡುವರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ರಮೇಶಬಾಬು ಯಾಳಗಿ ಹಾಗೂ ಪ್ರಸ್ತುತ ಸಮ್ಮೇಳನಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಮಾತನಾಡುವರು. ಹೆಚ್.ಶರ್ುದ್ದೀನ್ ಪೋತ್ನಾಾಳ್ ಸಮ್ಮೇಳನಾಧ್ಯಕ್ಷರ ಪರಿಚಯ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಅನೇಕ ಗಣ್ಯರು ಭಾಗವಹಿಸುವರು.
ಮಧ್ಯಾಾಹ್ನ 12 ಗಂಟೆಗೆ ನಡೆಯುವ ಮೊದಲ ಗೋಷ್ಠಿಿಯಲ್ಲಿ ರೈತರ ಅತ್ಮಹತ್ಯೆೆ ಹಾಗೂ ಪರಿಹಾರ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಬೆಟ್ಟದೂರು ಉಪನ್ಯಾಾಸ ನೀಡುವರು. ಮಾನ್ವಿಿ ತಾಲೂಕಿನ ಸಾಹಿತ್ಯ ಕುರಿತು ಚಂದ್ರಕಲಾ ಹಾಗೂ ತಾಲೂಕಿನ ಶಿಲಾ ಶಾಸನಗಳ ಇತಿಹಾಸ ಕುರಿತು ಡಾ.ಚನ್ನಬಸವಪ್ಪ ಮಲ್ಕಂದಿನ್ನಿಿ ಉಪನ್ಯಾಾಸ ನೀಡುವರು. ಕೆ.ಈ.ನರಸಿಂಹ ಅಧ್ಯಕ್ಷತೆ ವಹಿಸುವರು.
ಎರಡನೇ ಗೋಷ್ಠಿಿಯಲ್ಲಿ 11ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕೃಷಿಯ ಕುರಿತು ಡಾ. ಚಂದ್ರಶೇಖರಯ್ಯ ಸುವರ್ಣಗಿರಿಮಠ ಹಾಗೂ ಗಡಿನಾಡು ಕನ್ನಡ ಶಾಲೆಗಳ ಸ್ಥಿಿತಿಗತಿ ಕುರಿತು ಹಿರಿಯ ವರದಿಗಾರ ಪಿ.ಪರಮೇಶ, ದಲಿತ ಚಳುವಳಿಗಳ ಹುಟ್ಟು ಮತ್ತು ಬೆಳವಣಿಗೆ ಕುರಿತು ಎಂ.ಆರ್.ಭೇರಿ ಉಪನ್ಯಾಾಸ ನೀಡುವರು.
ಸಾಹಿತಿ ಬಾಬು ಭಂಡಾರಿಗಲ್ ಅಧ್ಯಕ್ಷತೆ ವಹಿಸುವರು.
ಮಧ್ಯಾಾಹ್ನ 3 ಗಂಟೆಯಿಂದ ಕವಿಗೋಷ್ಠಿಿ, ನಂತರ ಬಹಿರಂಗ ಅಧಿವೇಶನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಹಾಗೂ ನೂತನ ದತ್ತಿಿ ದಾನಿಗಳಿಗೆ ಸನ್ಮಾಾನ ಕಾರ್ಯಕ್ರಮ ನಡೆಯಲಿದೆ.
ಸಾಯಂಕಾಲ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಹಂಪಿ ಕನ್ನಡ ವಿಶ್ವವಿದ್ಯಾಾಲಯದ ಅಧ್ಯಾಾಯನಾಂಗ ನಿರ್ದೇಶಕರಾದ ಡಾ.ಅಮರೇಶ ಯತಗಲ್ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಗಣ್ಯರು ಭಾಗವಹಿಸುವರು.
ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಲಿದೆ.

