ಸುದ್ದಿಮೂಲ ವಾರ್ತೆ ಕಲಬುರಗಿ, ನ.28:
ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಆಯೋಗದ ಸದಸ್ಯರೊಂದಿಗೆ ಇಲ್ಲಿನ ಜಿಮ್ಸ್ ಆಸ್ಪತ್ರೆೆಗೆ ಭೇಟಿ ನೀಡಿ ತಪಾಸಣೆ ನಡೆಸಿದ ಅವರು, ಒಳ ರೋಗಿಗಳಿಗೆ ನಿಯಮಿತವಾಗಿ ಮೊಟ್ಟೆೆ, ಕಾಫಿ-ಚಹಾ ಕೊಡದಿರುವುದಕ್ಕೆೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆೆಯ ಲೇಬರ್, ಕಿಚನ್ ಕೋಣೆ, ಡೈನಿಂಗ್ ಹಾಲ್, ಮಹಿಳಾ ಲೇಬರ್ ವಾರ್ಡ್, ಓ.ಟಿ, ಐ.ಸಿ.ಯು, ಎನ್.ಆರ್.ಸಿ.ಯು ವಿಭಾಗಕ್ಕೆೆ ಭೇಟಿ ನೀಡಿದ ಅವರು, ಒಳ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು ಆಸ್ಪತ್ರೆೆಯಲ್ಲಿ ಒಳ ರೋಗಿಗಳಿಗೆ ನೀಡಲಾಗುತ್ತಿಿರುವ ಊಟೋಪಚಾರದ ಕುರಿತು ಆಸ್ಪತ್ರೆೆಯ ನಿರ್ದೆಶಕರು ಮತ್ತು ಇತರೆ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಅಲ್ಲದೆ ಅಡುಗೆ ಕೋಣೆಯ ಸ್ಟಾಾಕ್, ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು.
ಗುತ್ತಿಿಗೆ ಪದ್ದತಿಯಲ್ಲಿ ಕಾರ್ಯನಿರ್ವಹಿಸುವ ಊಟ ಬಡಿಸುವ ಸಿಬ್ಬಂದಿಗಳಿಗೆ ಕೆಲಸಕ್ಕೆೆ ತೆಗೆದುಕೊಳ್ಳುವ ಮುನ್ನ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಬೇಕೆಂದು ನಿಯಮವಿದ್ದರೂ ಏಕೆ ಮಾಡಿಲ್ಲ ಎಂದು ಪ್ರಶ್ನಿಿಸಿದರು. ಕಿಚನ್ ಕೋಣೆಯ ಲೆಕ್ಕ ಮತ್ತು ದಾಖಲಾತಿಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದಕ್ಕೆೆ ತೀವ್ರ ಅತೃಪ್ತಿಿ ವ್ಯಕ್ತಪಡಿಸಿ ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಜಿಮ್ಸ್ ನಿರ್ದೇಶಕರಿಗೆ ಸೂಚಿಸಿದರು.
ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಜಿಮ್ಸ್ ನಿರ್ದೇಶಕಿ ಡಾ.ಉಮೇಶ್ ಎಸ್.ಆರ್., ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ., ಜಿಮ್ಸ್ ಆಸ್ಪತ್ರೆೆಯ ಜಿಲ್ಲಾ ಶಸಜ್ಞರು ಡಾ.ಅಸ್ನಾಾ ರುಕಿಯಾ ರಬಾ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮುನಾವರ ದೌಲಾ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾಾತನಾಳ, ಕಾನೂನು ಮಾಪನಶಾಸ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಆಹಾರ ಆಯೋಗದ ಅಧ್ಯಕ್ಷರಿಂದ ಜಿಮ್ಸ್ ಭೇಟಿ: ರೋಗಿಗಳಿಗೆ ಮೊಟ್ಟೆೆ, ಕಾಫಿ-ಟೀ ಕೊಡದಿದ್ದಕ್ಕೆೆ ಅಸಮಾಧಾನ

