ಪ್ರಶಾಂತ್ ಕುಮಾರ್ ಎಂ.ಎನ್. ಬೆಳಗಾವಿ, ಡಿ.09:
ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಾಣ ಕರ್ನಾಟಕ ಭಾಗದ ರೈತರ ಸಮಸ್ಯೆೆಗಳು, ಈ ಭಾಗದ ನೀರಾವರಿ ಯೋಜನೆಗಳು, ಕಬ್ಬು ಬೆಳೆಗಾರರ ಸಮಸ್ಯೆೆ, ಬೆಳೆದ ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ರಾಜ್ಯದ ಉತ್ತರ ಭಾಗದ ಸಮಸ್ಯೆೆಗಳಿಗೆ ರಾಜ್ಯದ ಆಡಳಿತ ವ್ಯವಸ್ಥೆೆ ಸ್ಪಂದಿಸಬೇಕು, ಈ ಕುರಿತು ವಿಪಕ್ಷಗಳು ಆಡಳಿತದ ಚುಕ್ಕಾಾಣಿ ಹಿಡಿದಿರುವವರ ಕಿವಿ ಹಿಂಡಬೇಕೆಂಬ ನಿರ್ಧಾರದೊಂದಿಗೆ ಚಳಿಗಾಲದ ಅಧಿವೇಶನದ ಆರಂಭದ ದಿನಗಳಲ್ಲೇ ಈ ವಿಚಾರಗಳಿಗೆ ಸದನದ ಕಲಾಪದ ವೇದಿಕೆ ಅವಕಾಶ ಒದಗಿಸಿಕೊಟ್ಟಿಿದೆ.
ಈ ಹಿನ್ನೆೆಲೆಯಲ್ಲಿ ಮಂಗಳವಾರ ವಿಧಾನಪರಿಷತ್ನ ಮಧ್ಯಾಾಹ್ನದ ಕಲಾಪದಲ್ಲಿ ಆರಂಭಗೊಂಡ ಚರ್ಚೆಯಲ್ಲಿ ಬೆರಳೆಣಿಕೆಯಷ್ಟಿಿದ್ದ ಆಡಳಿತ ಮತ್ತು ವಿರೋಧ ಪಕ್ಷದ ಮುಖಂಡರು, ಸದಸ್ಯರು ಸರ್ಕಾರದ ಮೇಲೆ ಆರೋಪ ಮಾಡಿದರೆ ವಿರೋಧ ಪಕ್ಷದ ಬಾಯಿ ಮುಚ್ಚಿಿಸಲು ಮುಗಿ ಬಿದ್ದ ಆಡಳಿತ ಪಕ್ಷದ ಸಚಿವರು, ಸದಸ್ಯರು ಪ್ರತ್ಯಾಾರೋಪಗಳನ್ನು ಮಾಡಿದರು.
ಬೆಳಗಿನ ಪ್ರಶ್ನೋೋತ್ತರ, ಗಮನ ಸೆಳೆಯುವ ಸೂಚನೆಗಳು ಹಾಗೂ ಶೂನ್ಯ ವೇಳೆ ಬಳಿಕ ಮಧ್ಯಾಾಹ್ನ ಕಲಾಪ ಆರಂಭಗೊಳ್ಳುತ್ತಿಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿಿ ಅನುಪಸ್ಥಿಿತಿಯಲ್ಲಿ ಕಲಾಪ ಮುನ್ನಡೆಸುತ್ತಿಿರುವ ಉಪ ಸಭಾಪತಿ ಎಂ.ಕೆ.ಪ್ರಾಾಣೇಶ್ ನಿಯಮ 68ರ ಅಡಿಯಲ್ಲಿ ವಿಷಯ ಕೈಗೆತ್ತಿಿಕೊಂಡು ಸದಸ್ಯರಿಂದ ವಿಷಯ ಮಂಡನೆಗೆ ಅವಕಾಶ ನೀಡಿದರು. ಮೊದಲು ಮಾತನಾಡಿದ ಪರಿತ್ನಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಾಮಿ ರಾಜ್ಯದ ಉತ್ತರ ಭಾಗದ ಅಭಿವೃದ್ಧಿಿಯ ಮನಸ್ಥಿಿತಿಯೇ ನಾಯಕರಲ್ಲಿ ಇದ್ದಂತಿಲ್ಲ. ಸುವರ್ಣ ವಿಧಾನ ಸೌಧ ಆರಂಭಿಸಿದ ಆಶಯವೇ ಇದುವರೆಗೂ ಈಡೇರಿಲ್ಲ. ಉತ್ತರ ಕರ್ನಾಟಕ ಭಾಗದ ನಿರ್ಲಕ್ಷ್ಯ ಮಾಡಬಾರದು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ಯಾವೊಂದು ಸ್ಥಳವೂ ಇನ್ನೂ ನೂರು ವರ್ಷ ಕಳೆದರೂ ಬೆಂಗಳೂರಿಗೆ ಸಮನಾಗುವುದಿಲ್ಲ. ಹೀಗೆ ಮಾಡುವ ಇಚ್ಛಾಾ ಶಕ್ತಿಿಯೂ ನಾಯಕರಲ್ಲಿಲ್ಲ. ಈ ಭಾಗ ಬದಲಾವಣೆಯೂ ಆಗುವುದಿಲ್ಲ. ಈ ತಾರತಮ್ಯ ಏಕೆ ಎಂದು ಪ್ರಶ್ನಿಿಸಿದ ಅವರು 46,860 ಕೋಟಿ ರೂ ಅನುದಾನದಲ್ಲಿ 40,510 ಕೋಟಿ ಬಿಡುಗಡೆಯಾಗಿ 36,866 ಕೋಟಿ ಖರ್ಚು ಮಾಡಿದ್ದರೂ ಈ ಭಾಗ ಏಕೆ ಅಭಿವೃದ್ಧಿಿ ಆಗುತ್ತಿಿಲ್ಲ? ಇದಕ್ಕೆೆ ಉತ್ತರಿಸುವರು ಯಾರು? ಹೀಗಾಗಿಯೇ ಪ್ರತ್ಯೇಕತೆಯ ಕೂಗೆದ್ದಿರುವುದು. ಇದಕ್ಕಾಾಗಿ ನಾವು ಈ ಭಾಗದ ಜನರನ್ನು ದೂಷಿಸಿ ಪ್ರಯೋಜನವಿಲ್ಲ. ಇನ್ನೂ ಬಳ್ಳಾಾರಿಯಿಂದ ಬೀದರವರೆಗಿನ ಈ ಭಾಗದ ಜನರು ಉದ್ಯೋೋಗ ಅರಸಿ ಮುಂಬೈಗೆ ಹೋಗುತ್ತಿಿದ್ದಾರೆ. ಪ್ರತ್ಯೇಕತೆ ಕೂಗು ಅಡಗಿಸಲು 371 ಜೆ ತಂದರೂ ಪ್ರಯೋಜನವಾಗಿಲ್ಲವೆಂದರು.
ಕೆಐಡಿಬಿ ಕೂಡ ಈ ಭಾಗದಲ್ಲಿ ಭೂ ಸ್ವಾಾಧೀನ ಮಾಡಿದರೂ ಕೈಗಾರಿಕಾ ಬೆಳವಣಿಗೆ ಆಗದೇ ಉದ್ಯೋೋಗ ಅರಸಿ ಜನರು ಬೆಂಗಳೂರು, ಮುಂಬೈ ಕಡೆಗೆ ಮುಖ ಮಾಡುವುದು ತಪ್ಪಿಿಲ್ಲ ಎಂದಾಗ ಆಡಳಿತ ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ಷೇಪಿಸಿ ಕೆ.ಐ.ಎಡಿ.ಬಿ ಭೂ ಸ್ವಾಾಧೀನ ಮಾಡಿ ಭೂಮಿಯನ್ನು ಖಾಸಗಿಯವರಿಗೆ ಕೊಟ್ಟಿಿದ್ದು ಯಾವ ಸರ್ಕಾರ. ಚಾಣಕ್ಯ ವಿವಿಗೆ ಭೂಮಿ ಕೊಟ್ಟವರು ಯಾರು. ನೀವು ಕೊಟ್ಟಿಿದ್ದನ್ನು ದಾಖಲೆ ಕೊಡುತ್ತೇವೆ. ನೀವು ಬರೀ ಮಾತನಾಡಬೇಡಿ. ಉದ್ಯೋೋಗ ಖಾತರಿ ಯೋಜನೆಗೆ ಕೇಂದ್ರದಿಂದ ಹಣಕೊಡಿಸಿ. ಅಲ್ಲಿ ಹೋಗಿ ಪ್ರತಿಭಟಿಸಿ. ಆಗ ಎಲ್ಲವೂ ಸರಿ ಹೋಗುತ್ತದೆ ಎಂದು ಏರು ದನಿಯಲ್ಲಿ ಪ್ರತಿಕ್ರಿಿಯಿಸಿದರು. ನೆರೆ ಪೀಡಿತ ಸ್ಥಳಗಳ ಸ್ಥಳಾಂತರ ಆಗುತ್ತಿಿಲ್ಲ. ಈ ಭಾಗದ ಶಾಲೆಗಳು ಇನ್ನೂ ಅದೇ ಸ್ಥಿಿತಿಯಲ್ಲಿದೆ. ರಸ್ತೆೆಗಳ ಸ್ಥಿಿತಿ ದಯನೀಯವಾಗಿದೆ ಎಂದು ಛಲವಾದಿ ಮುಂದುವರೆಸಿದಾಗ ಕ್ರಿಿಯಾ ಲೋಪ ಎತ್ತಿಿದ ಬಿ.ಕೆ.ಹರಿಪ್ರಸಾದ್ ನಿಯಮ 68 ರ ಅಡಿಯಲ್ಲಿ ವಿಷಯ ಪ್ರಸ್ತಾಾಪಿಸಿದ್ದು ವಿಷಯಾಂತರ ಆಗುತ್ತಿಿದೆ. ರಾಜ್ಯದಲ್ಲಿ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ, ಬೆಳೆ ಹಾನಿ ಪ್ರದೇಶಗಳಿಗೆ ಪರಿಹಾರದ ವಿಚಾರ ಹಳಿ ತಪ್ಪಿಿ ಎಲ್ಲೆಲ್ಲೋ ಹೋಗುತ್ತಿಿದೆ. ರಸ್ತೆೆ, ಶಾಲೆಗಳ ಕುರಿತು ವಿಷಯಾಂತರ ಮಾಡಿದರೆ ನಾವು ಉತ್ತರಿಸುವಾಗಲೂ ನಿಮ್ಮ ಮೇಲೆ ಆರೋಪ ಪಟ್ಟಿಿ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹರಿಪ್ರಸಾದ್ ಮಾತನ್ನು ಬೆಂಬಲಿಸಿ ಸಚಿವ ಭೋಸರಾಜ್, ಸದಸ್ಯ ಐವಾನ್ ಡಿಸೋಜಾ, ಸಚಿವ ಚೆಲುವರಾಯಸ್ವಾಾಮಿ,ಎಂಬಿ.ಪಾಟೀಲ್, ಸಂತೋಷ್ ಲಾಡ್ ಮೊದಲಾದವರು ಏರುದನಿಯಲ್ಲಿ ಛಲವಾದಿ ಮೇಲೆ ಮುಗಿಬಿದ್ದರು. ಅಣೆಕಟ್ಟುಗಳ ಬಗ್ಗೆೆ ಮಾತನಾಡಿ, ನೀರಿನ ಮಟ್ಟ ಎಷ್ಟಿಿದೆ, ಎಷ್ಟು ದಿನಗಳ ವರೆಗೆ ನೀರು ಸರಬರಾಜು ಮಾಡಬಹುದು ಎಂಬುದರ ಕುರಿತು ಮಾತನಾಡಿ. ಈ ಭಾಗದ ಎಷ್ಟು ಸಮಸ್ಯೆೆ ಬಗೆಹರಿಸಬಹುದು ಎಂಬುದರ ಕುರಿತು ಮಾತನಾಡಿ ಎಂದರು.
ಬೆಳೆ ನಾಶದ ವಿಚಾರ ಪ್ರಸ್ತಾಾಪಿಸಿದ ಛಲವಾದಿ ನಾವು ಸರ್ವೇ ಮಾಡಿಸಿದ ಪ್ರಕಾರ ಎಂದಾಗ ಸಚಿವರು ಮತ್ತು ಆಡಳಿತ ಪಕ್ಷದ ಸದಸ್ಯರು ಮತ್ತೆೆ ಆಕ್ಷೇಪಿಸಿದರು. ನೀವು ಹೇಗೆ ಸರ್ವೇ ಮಾಡಿಸುತ್ತೀರಿ. ವ್ಯವಸ್ಥೆೆ ಎಂಬುದಿಲ್ಲವೇ. ಸರ್ವೇ ಮಾಡುವ ಸಂದರ್ಭದಲ್ಲಿ ರಾಜಕೀಯ ಬೇಡ ಎಂದರು.
ಸದನದಲ್ಲಿ ಗದ್ದಲ ಕೋಲಾಹಲ ಹೆಚ್ಚಾಾದಾಗ ಉಪಸಭಾಪತಿ ಪ್ರಾಾಣೇಶ್ ವೈಯಕ್ತಿಿಕ ಆರೋಪ ಪ್ರತ್ಯಾಾರೋಪ ಬೇಡ. ಯಾವುದನ್ನೂ ಸದಸ್ಯರು ನಾಯಕರು ವೈಯಕ್ತಿಿಕವಾಗಿ ತೆಗೆದುಕೊಳ್ಳಬಾರದು. ರೈತರ ಸಮಸ್ಯೆೆ ಬಗೆಹರಿಸುವ ಕಳಕಳಿಯೊಂದಿಗೆ ಮಾತನಾಡಿ ಎಂದರು.
ಒಟ್ಟಾಾರೆ ಮೇಲ್ಮನೆಯಲ್ಲಿ ರಾಜ್ಯದ ಉತ್ತರ ಭಾಗದ ಸಮಸ್ಯೆೆಗಳ ಕುರಿತು ಚರ್ಚೆಯಂತೂ ಆರಂಭಗೊಂಡಿದೆ. ಆದರೆ ಉತ್ತರಭಾಗಕ್ಕೇನು ದಕ್ಕುತ್ತದೆ ಎಂಬುದು ಪ್ರಶ್ನೆೆಯಾಗಿದ್ದು ಬುಧವಾರ ದಿನವಿಡೀ ಉತ್ತರ ಭಾಗದ ವಿಚಾರವೇ ಮೇಲ್ಮನೆಯ ಕಲಾಪದಲ್ಲಿ ಪ್ರಸ್ತಾಾಪವಾಗಲಿದೆ.
ಉತ್ತರದ ರೈತರ ಸಮಸ್ಯೆ, ಬೆಳೆ ಹಾನಿ ಬೆಂಬಲ ಬೆಲೆ ಕುರಿತು ಕಲಾಪ: ಆರೋಪ, ಪ್ರತ್ಯಾರೋಪ

