ಸುದ್ದಿಮೂಲ ವಾರ್ತೆ ಕೊಪ್ಪಳ, ನ.08:
ಕೊಪ್ಪಳ ಜಿಲ್ಲೆೆಯ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಿಸಿದ್ದ ಹೆಬ್ಬಾಾವನ್ನು ಸ್ಥಳೀಯ ಯುವಕರು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆೆ ಬಿಟ್ಟಿಿದ್ದಾಾರೆ.
ಕೊಪ್ಪಳದ ಬಸಾಪುರ ಸಮೀಪದ ಮೌಲಾಲಿ ದರ್ಗಾ ಬಳಿ ಇರುವ ವಿಜಯನಗರ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆೆ ತುಂಗಾಭದ್ರ ಎಡದಂಡೆ ಕಾಲುವೆ ಪ್ರದೇಶದಲ್ಲಿ ಕೋತಿಯೊಂದರ ಮೇಲೆ ಹೆಬ್ಬಾಾವು ದಾಳಿ ಮಾಡಿ, ಅದನ್ನು ಸುತ್ತಿಿಕೊಂಡಿರುವ ದೃಶ್ಯ ಕಂಡುಬಂದಿತ್ತು.ದಾಳಿ ನಡೆಸಿದ ಬಳಿಕ ಈ ಹೆಬ್ಬಾಾವು ಕಾಲುವೆಯ ನೀರಿನಲ್ಲಿ ಅವಿತುಕೊಂಡಿತ್ತು. ಇದರಿಂದಾಗಿ ಈ ಭಾಗದಲ್ಲಿ ಓಡಾಡುವ ರೈತರು ಮತ್ತು ದನಗಾಯಿಗರಲ್ಲಿ ತೀವ್ರ ಆತಂಕ ಮನೆ ಮಾಡಿತ್ತು.
ಹೆಬ್ಬಾಾವಿನ ಉಪಸ್ಥಿಿತಿಯಿಂದಾಗಿ ಜನರು ಓಡಾಡಲು ಭಯಪಡುವಂತಾಗಿತ್ತು.ಆದರೆ ಆತಂಕಗೊಂಡಿದ್ದ ಜನರ ಮೊರೆಯನ್ನು ಆಲಿಸಿದ ಸ್ಥಳೀಯ ಯುವಕರು, ಸಮಯ ವ್ಯರ್ಥ ಮಾಡದೆ ಧೈರ್ಯದಿಂದ ಹೆಜ್ಜೆೆ ಇಟ್ಟಿಿದ್ದಾಾರೆ. ನೀರಿನಲ್ಲಿ ಅವಿತುಕೊಂಡಿದ್ದ ಭಾರೀ ಗಾತ್ರದ ಹೆಬ್ಬಾಾವನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಬಹಳ ಎಚ್ಚರಿಕೆಯಿಂದ ಹಿಡಿದಿದ್ದಾಾರೆ.
ನಿನ್ನೆೆ ರಾತ್ರಿಿ ಈ ಕಾರ್ಯಾಚರಣೆ ಯಶಸ್ವಿಿಯಾಗಿ ಮುಗಿಸಿದ ಯುವಕರು ನಂತರ ಈ ಹೆಬ್ಬಾಾವನ್ನು ಸುರಕ್ಷಿತವಾಗಿ ಅರಣ್ಯ ಭಾಗದಲ್ಲಿ ಬಿಟ್ಟಿಿದ್ದಾಾರೆ.ಯುವಕರ ಈ ಸಮಯಪ್ರಜ್ಞೆ ಮತ್ತು ಧೈರ್ಯದ ಕಾರ್ಯದಿಂದಾಗಿ ಹೆಬ್ಬಾಾವು ಸೆರೆಯಾಗಿದ್ದು, ದನಗಾಯಿಗರು ಮತ್ತು ರೈತರು ಸೇರಿದಂತೆ ಸ್ಥಳೀಯ ಜನರು ನಿಟ್ಟುಸಿರು ಬಿಟ್ಟಿಿದ್ದಾಾರೆ. ವನ್ಯಜೀವಿಗಳ ರಕ್ಷಣೆಯ ಜೊತೆಗೆ ಮಾನವ-ವನ್ಯಜೀವಿ ಸಂಘರ್ಷವನ್ನು ತಪ್ಪಿಿಸಿದ ಈ ಯುವಕರ ಕಾರ್ಯ ಶ್ಲಾಾಘನೀಯವಾಗಿದೆ.

