ಸುದ್ದಿಮೂಲ ವಾರ್ತೆ ನವದೆಹಲಿ, ಡಿ.26:
ರೈಲ್ವೇ ಸಚಿವಾಲಯ ರೈಲು ಪ್ರಯಾಣ ದರ ಏರಿಕೆ ಮಾಡಿ ಹೊರಡಿಸಿದ ಅಧಿಸೂಚನೆ ಹಿನ್ನೆೆಲೆಯಲ್ಲಿ ಡಿ.25ರ ಮಧ್ಯ ರಾತ್ರಿಿಯಿಂದಲೇ ಜಾರಿಯಾಗಿ ರೈಲು ಪ್ರಯಾಣ ದರ ಏರಿಕೆಯಾಗಿ ದುಬಾರಿಯಾಗಿದೆ.
ಡಿ.26ರಂದು ಅಥವಾ ನಂತರ ಬುಕ್ ಮಾಡಿದ ಟಿಕೆಟ್ಗಳಿಗೆ ಹೊಸ ಪರಿಷ್ಕೃತ ದರ ಅನ್ವಯವಾಗಲಿದೆ.
ಡಿ.26ರ ಮೊದಲು ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಮೊತ್ತವಿಲ್ಲ ಎಂದು ರೈಲ್ವೇ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
215 ಕಿ.ಮೀವರೆಗಿನ ಎರಡನೇ ದರ್ಜೆಯ ಸಾಮಾನ್ಯ ಪ್ರಯಾಣದ ದರಗಳು ಏರಿಕೆಯಾಗಿಲ್ಲ. ಅಂದರೆ ಪ್ರತಿದಿನ ಕಡಿಮೆ ದೂರ ಪ್ರಯಾಣಿಸುವ ಜನರು ಹೆಚ್ಚಿಿನ ಹಣ ಪಾವತಿಸಬೇಕಿಲ್ಲ. ಇದರ ಜತೆಗೆ, ಉಪನಗರ ರೈಲು ಸೇವೆಗಳು ಮತ್ತು ಸೀಸನ್ ಟಿಕೆಟ್ಗಳು, ಉಪನಗರ ಮತ್ತು ಉಪನಗರವಲ್ಲದ ಮಾರ್ಗಗಳನ್ನು ದರ ಪರಿಷ್ಕರಣೆಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ.
ದೀರ್ಘ ಪ್ರಯಾಣ ದರ ಏರಿಕೆ
ದರ ಪರಿಷ್ಕರಣೆಯಲ್ಲಿ ದೀರ್ಘ ಪ್ರಯಾಣ ಮತ್ತು ಉನ್ನತ ದರ್ಜೆಗಳ ದರಗಳನ್ನು ಮಾತ್ರ ಹೆಚ್ಚಿಿಸಲಾಗಿದೆ. ಇದರಿಂದ ಕಡಿಮೆ ದೂರ ಮತ್ತು ಆಯ್ದ ಪ್ರಯಾಣಿಕರ ವಿಭಾಗಗಳ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ರೈಲ್ವೇ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾಹಿತಿ ಮತ್ತು ಪ್ರಚಾರ) ದಿಲೀಪ್ ಕುಮಾರ್ ಅವರು ಮಾತನಾಡಿ, ಪರಿಷ್ಕೃತ ದರಗಳನ್ನು ಸಾಧ್ಯವಾದಷ್ಟು ಕಾರ್ಯಾಚರಣೆಯ ವೆಚ್ಚವನ್ನು ಬೆಂಬಲಿಸುವಂತೆ ವಿನ್ಯಾಾಸಗೊಳಿಸಲಾಗಿದೆ. ಕಾಯ್ದಿಿರಿಸಿದ ಸೀಟುಗಳ ಶುಲ್ಕಗಳು, ಸೂಪರ್ಾಸ್ಟ್ ರೈಲು ಶುಲ್ಕಗಳು, ತೆರಿಗೆಗಳು ಮತ್ತು ಇತರ ಹೆಚ್ಚುವರಿ ಶುಲ್ಕಗಳು ಒಂದೇ ಆಗಿರುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಾವುದು ಎಷ್ಟು ಏರಿಕೆಯಾಗಿದೆ
ಸ್ಲೀರ್ಪ ಮತ್ತು ಮೊದಲ ದರ್ಜೆ ಹಾಗೂ ಸಾಮಾನ್ಯ ದರ್ಜೆ ಪ್ರಯಾಣದ ದರಗಳು ಈಗ ಪ್ರತಿ ಕಿಲೋ ಮೀಟರಿಗೆ 1 ಪೈಸೆ ಹೆಚ್ಚಾಾಗಿದೆ.
ಮೇಲ್ ಮತ್ತು ಎಕ್ಸ್ಪ್ರೆೆಸ್ ರೈಲುಗಳು (ಹವಾನಿಕಯಂತ್ರಿಿತ ಅಲ್ಲದ ಹಾಗೂ ಹವಾನಿಯಂತ್ರಿಿತ ದರ್ಜೆ, ಸ್ಲೀಪರ್, ಮೊದಲ ದರ್ಜೆ, ಎಸಿ ಚೇರ್ ಕಾರ್, ಎಸಿ 3-ಟೈರ್, ಎಸಿ 2-ಟೈರ್ ಮತ್ತು ಎಸಿ ಮೊದಲ ದರ್ಜೆ ಪ್ರತಿ ಕಿಲೋಮೀಟರ್ಗೆ 2 ಪೈಸೆ ಹೆಚ್ಚಾಾಗಿದೆ.
ಎಸಿ ರಹಿತ ಕೋಚ್ಗಳಲ್ಲಿ 500 ಕಿ.ಮೀ ಮೇಲ್ ಅಥವಾ ಎಕ್ಸ್ಪ್ರೆೆಸ್ ಪ್ರಯಾಣಕ್ಕೆೆ ಪ್ರಯಾಣಿಕರಿಗೆ ಕೇವಲ 10 ರೂಪಾಯಿ ಹೆಚ್ಚುವರಿ ವೆಚ್ಚವಾಗುತ್ತದೆ.
ಹೊಸ ದರಗಳು ರಾಜಧಾನಿ, ಶತಾಬ್ದಿಿ, ಡ್ಯುರಂಟೊ, ವಂದೇ ಭಾರತ್, ತೇಜಸ್, ಹಮ್ಸರ್, ಅಮೃತ್ ಭಾರತ್, ಗರೀಬ್ ರಥ, ಜನ ಶತಾಬ್ದಿಿ, ಗತಿಮಾನ್, ಅಂತ್ಯೋೋದಯ, ಯುವ ಎಕ್ಸ್ಪ್ರೆೆಸ್ ಮತ್ತು ನಮೋ ಭಾರತ್ ರಾಪಿಡ್ ರೈಲ್ನಂತ ಪ್ರಮುಖ ರೈಲುಗಳಿಗೂ ಅನ್ವಯಿಸುತ್ತವೆ.
ಬಾಕ್ಸ್
ಎಷ್ಟು ಹೆಚ್ಚಳ
215-ಯಾವುದೇ ಹೆಚ್ಚಳ ಇಲ್ಲ
216-750- 5 ರೂ.
751-1,250- 10 ರೂ.
1251-1750- 15 ರೂ.
1751-2250- 20 ರೂ.
ಉಪನಗರ ರೈಲು ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಸೀಸನ್ ಟಿಕೆಟ್ ದರದಲ್ಲಿ ಬದಲಾವಣೆ ಇಲ್ಲ. ಮೀಸಲಾತಿ ಶುಲ್ಕ ಅಥವಾ ಸೂಪರ್ಾಸ್ಟ್ ಸರ್ಚಾರ್ಜ್ನಲ್ಲಿ ಬದಲಾವಣೆ ಇಲ್ಲ. ಜಿಎಸ್ಟಿಿ ಅನ್ವಯಿಕೆ ಹಾಗೆಯೇ ಉಳಿದಿದೆ.

