ಸುದ್ದಿಮೂಲ ವಾರ್ತೆ ಮಸ್ಕಿ, ನ.26:
ಗುತ್ತಿಿಗೆದಾರ ನಿರ್ಲಕ್ಷದಿಂದ ಬೇಕಾಬಿಟ್ಟಿಿಯಾಗಿ ಕಾಮಗಾರಿ ನಡೆಸಿದ್ದರಿಂದ ಮಸ್ಕಿಿ ಪಟ್ಟಣದ ಗಾಂಧಿನಗರದ ಬಿಸಿಎಂ ಹಾಸ್ಟೆೆಲ್ ಮೆಟ್ರಿಿಕ್ ಪೂರ್ವ ಆವರಣದಲ್ಲಿ ನಿರ್ಮಿಸಿರುವ ವಿದ್ಯಾಾರ್ಥಿಗಳ ಊಟದ ಮನೆ (ಭೋಜನಾಲಯ) ಉದ್ಘಾಾಟನೆ ಮೊದಲೇ ಕುಸಿಯುವ ಹಂತದಲ್ಲಿದೆ .
ಜಿಲ್ಲಾ ಪಂಚಾಯತ್ ರಾಯಚೂರು 2024-25ನೇ ಹಣಕಾಸು ವರ್ಷಕ್ಕೆೆ ಸಂಬಂಧಿಸಿದ 7 ಲಕ್ಷ ಹಿಂದುಳಿದ ವರ್ಗಗಳ ಕಲ್ಯಾಾಣ ಇಲಾಖೆಯ ಅನುದಾನದಲ್ಲಿ ಈ ವರ್ಷ ಕೆಲಸ ಆರಂಭಿಸಿದ್ದು 04ತಿಂಗಳ ಹಿಂದಷ್ಟೇ ಪೂರ್ಣಗೊಳಿಸಿದೆ. ಕಳಪೆ ಕಾಮಗಾರಿ ನಡೆದಿರುವುದರಿಂದ ಕಟ್ಟಡದ ಅಡಿಪಾಯ ಅಲ್ಲಲ್ಲಿ ಬಿರುಕು ಬಿಟ್ಟಿಿದ್ದು ಹಾಗೂ ನೆಲ ಹಾಸು ಬಂಡೆಗಳು ಮಧ್ಯೆೆ ಇಲಿ, ಹೆಗ್ಗಣಗಳು ಬರುವದರಿಂದ ಮಣ್ಣು ತಂದು ಒಳಗಡೆ ಹಾಕುತ್ತವೆ. ಗುತ್ತಿಿಗೆದಾರರು ತಮಗೆ ತೋಚಿದ ರೀತಿಯಲ್ಲಿ ಹಣ ಖರ್ಚು ಮಾಡಿದ್ದಾರೆ ಎಂದು 22ನೇ ವಾರ್ಡಿನ ನಿವಾಸಿಗಳು ತಿಳಿಸಿದ್ದಾರೆ.
ಕಾಮಗಾರಿ ಮನೆಯಲ್ಲಿಯೇ ಕುಳಿತು ಅಂದಾಜು ಪತ್ರಿಿಕೆ ಸಿದ್ಧಪಡಿಸಿದ ಎಂಜಿನಿಯರ್ ಕಾಮಗಾರಿಯನ್ನು ಒಮ್ಮೆೆಯೂ ಪರಿಶೀಲಿಸದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಮಸ್ಕಿಿ ತಾಲೂಕು ಕರವೇ ಅಧ್ಯಕ್ಷ ಆರ್ ಕೆ ನಾಯಕ್ಆರೋಪವಾಗಿದೆ.
ಕಳಪೆ ಸಿಮೆಂಟ್ ಬ್ರಿಿಕ್ಸ್ ಮತ್ತು ತಗಡಿನ ಚಾವಣಿಯನ್ನು ಒಳಗೊಂಡಿರುವ ಕಟ್ಟಡ ಸದ್ಯ ಅಪಾಯದ ಸ್ಥಿಿತಿಯಲ್ಲಿದ್ದು ಒಳಗಿನ ನೆಲಹಾಸುಗಳೂ ಕಿತ್ತು ಹೋಗಿವೆ. ಹಾಗಾಗಿ ಮಕ್ಕಳನ್ನು ಒಳಗೆ ಕಳಿಸುವುದಕ್ಕೆೆ ವಾರ್ಡನ್ ಹೆದರುತ್ತಿಿದ್ದಾರೆ.ಈ ಕಾರಣಕ್ಕೆೆ ಬಿ ಸಿ ಎಮ್ ಇಲಾಖೆ ಕಟ್ಟಡವನ್ನು ಸುಪರ್ದಿಗೆ ಪಡೆದುಕೊಂಡಿಲ್ಲ.
ಮಸ್ಕಿ: ಬಳಕೆಗೆ ಮುನ್ನವೇ ಕುಸಿಯುತ್ತಿದೆ ಭೋಜನಾಲಯ

