ಸುದ್ದಿಮೂಲವಾರ್ತೆ
ಕೊಪ್ಪಳ ಜು 23: ಮಳೆಗೆ ಕೆಸರು ಗದ್ದೆಯಂತಾದ ರಸ್ತೆಗಳಾಗುವ ಸ್ಥಿತಿ ಕೊಪ್ಪಳ ತಾಲೂಕಿನ ಹಿರೇಬಗನಾಳದಲ್ಲಿದೆ. ಇದರಿಂದ ಬಗನಾಳ ಗ್ರಾಮಸ್ಥರು ಸೋಮುವಾರ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಕೈಗಾರಿಕಾ ಪ್ರದೇಶವಾದ ಬಗನಾಳ ಭಾಗದ ಬಳಿಯ ರಸ್ತೆಗಳ ದುಸ್ಥಿತಿ ದೇವರಿಗೆ ಪ್ರೀತಿ. ಪ್ರತಿ ಮಳೆಗಾಲದಲ್ಲಿಯೂ ಇದೇ ಸ್ಥಿತಿ ಇರುತ್ತದೆ. ರಸ್ತೆ ಹಾಳಾಗಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆ ದುರಸ್ತಿ ಮಾಡದ ಲೋಕಪಯೋಗ ಇಲಾಖೆ ಶಾಸಕರ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.
ಬಗನಾಳದಿಂದ ಹಿರೇಕಾಸನಕಂಡಿ. ಬಗನಾಳದಿಂದ ಹಾಲವರ್ತಿಯವರಿಗಿನ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಇಲ್ಲಿ ಸುಮಾರು 15 ಬೃಹತ್ ಕೈಗಾರಿಕೆಗಳಿವೆ.ಕೈಗಾರಿಕಾ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಭಾರಿ ವಾಹನಗಳ ಓಡಾಟದಿಂದ ರಸ್ತೆ ಸಂಪೂರ್ಣ ಹಾಳಾಗಿದೆ.ಕಳೆದ ನಾಲ್ಕೈದು ವರ್ಷದಿಂದ ಇದೇ ಸ್ಥಿತಿ ಇದೆ. ಆದರೂ ರಸ್ತೆ ದುರಸ್ತಿಯಾಗಿಲ್ಲ.
ಈ ಮಧ್ಯೆ ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವು ಬಾರಿ ಗ್ರಾಮಸ್ಥರು ಹೋರಾಟ ಮಾಡಿದ್ದರು.ನಾಳೆ ಮತ್ತೆ ಪ್ರತಿಭಟನೆ ನಡೆಸಲಿದ್ದಾರೆ.ರಸ್ತೆ ದುರಸ್ತಿಯಾಗುವವರಿಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.