ಸುದ್ದಿಮೂಲ ವಾರ್ತೆ ಬೀದರ್ , ಜ.06:
ಮಹಾನಗರ ಪಾಲಿಕೆಯಲ್ಲಿ ಕಳೆದ 6 ತಿಂಗಳಿನಿಂದ ಸಾರ್ವಜನಿಕರಿಗೆ ಡಿಜಿಟಲ್ ಖಾತಾ, ಮುಟೇಷನ್ ಮುಂತಾದ ಸೇವೆಗಳು ಸಕಾಲಕ್ಕೆೆ ದೊರಕದೆ ಸಾರ್ವಜನಿಕರು ಪರದಾಡುತ್ತಿಿದ್ದು, ಕೂಡಲೇ ಈ ಅವ್ಯವಸ್ಥೆೆ ಸರಿಪಡಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖುಬಾ ಪೌರಾಡಳಿತ ಇಲಾಖೆ ನಿರ್ದೇಶಕ ರವೀಂದ್ರ ಪಿಎನ್ ಅವರಿಗೆ ಒತ್ತಾಾಯಿಸಿದ್ದಾರೆ.
ಸಾರ್ವಜನಿಕ ದೂರುಗಳ ಹಿನ್ನಲೆ ಮಂಗಳವಾರ ದೂರವಾಣಿ ಮೂಲಕ ಪೌರಾಡಳಿತ ನಿರ್ದೇಶಕರಿಗೆ ಸಂಪರ್ಕಿಸಿ ಪಾಲಿಕೆಯಲ್ಲಿ ಉಂಟಾಗಿರುವ ಅವ್ಯವಸ್ಥೆೆ ಗಮನಕ್ಕೆೆ ತಂದಿದ್ದಾರೆ. ಸರ್ವರ ಡೌನ್ ನೆಪದಲ್ಲಿ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಿಲ್ಲ. ಈ ಅವ್ಯವಸ್ಥೆೆ ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಈ ಬಗ್ಗೆೆ ನಿರ್ದೇಶಕ ರವೀಂದ್ರ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಖುಬಾ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಪಾಲಿಕೆಯಲ್ಲಿ ಸರ್ವರ್ ಡೌನ್ದಿಂದ ಪರದಾಟ : ಪೌರಾಡಳಿತ ನಿರ್ದೇಶಕರಿಗೆ ಕ್ರಮಕ್ಕೆ ಖುಬಾ ಒತ್ತಾಯ

