ಸುದ್ದಿಮೂಲ ವಾರ್ತೆ ಕೊಪ್ಪಳ, ಅ.12:
ಕುರುಬ ಸಮುದಾಯ ಎಸ್ಟಿ ಸಮುದಾಯಕ್ಕೆೆ ಸೇರಿಸುವ ವಿಚಾರವಾಗಿ ಮಾಜಿ ಸಂಸದ ವಿ. ಎಸ್ .ಉಗ್ರಪ್ಪ ಮುಖ್ಯಮಂತ್ರಿಿಗಳಿರುವ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಅವರು ಸಾಮಾಜಿಕ ನ್ಯಾಾಯದ ತಳಹದಿಯಲ್ಲಿ ಬಂದವರು. ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಅವರಿಗೆ ಆ ರೀತಿ ಮಾತನಾಡಿದ್ದು ಸರಿಯಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಆಯುಕ್ತ ಜಿ.ಎಸ್. ಸಂಗ್ರೇೇಶಿ ಹೇಳಿದ್ದಾಾರೆ.
ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ , ಬೇರೆ ವೇದಿಕೆ ಇದ್ದವು ಅಲ್ಲಿ ಹೇಳಬಹುದಿತ್ತು. ಒಬ್ಬ ಸಾಮಾಜಿಕ ನ್ಯಾಾಯ ಕೊಡುವ ಸಿದ್ದರಾಮಯ್ಯ ಅವರು ಇದ್ದ ವೇದಿಕೆಯಲ್ಲಿ ಹೇಳಿದ್ದಾಾರೆ. ನನಗೆ ವೈಯಕ್ತಿಿಕವಾಗಿ ಸರಿ ಅನ್ನಿಿಸಲಿಲ್ಲ.
ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ಪ್ರತಿಕ್ರಿಿಯಿಸಿ ಎಲ್ಲಾಾ ವರ್ಗದವರಿಗೆ ಅನುಕೂಲವಾಗುತ್ತೆೆ ನಮ್ಮ ಮನೆಗೆ ಇನ್ನು ಬಂದಿಲ್ಲ, ಬಂದ್ರೆೆ ನಾನು ಹೇಳುತ್ತೇನೆ. ಇದು ನನ್ನ ವೈಯಕ್ತಿಿಕ ಅಭಿಪ್ರಾಾಯ ಎಂದರು.
ಮತದಾರರ ಪಟ್ಟಿಿ ಪರಿಷ್ಕರಣೆ ನವೆಂಬರ್ 1 ರಿಂದ ಮಾಡುತ್ತೇವೆ. ಸುಪ್ರೀೀಂ ಕೋರ್ಟ್ ಆದೇಶವಿದೆ. ಗ್ರೇೇಟರ್ ಬೆಂಗಳೂರಿನ 368 ವಾರ್ಡ್ ಐದು ಪಾಲಿಕೆಗೆ ಚುನಾವಣೆ ಜರುಗಲಿದೆ. ಸಭೆ ನಡೆಸಿ ಕೆಲಸ ಶುರು ಮಾಡಿದ್ದೇವೆ ಎಂದರು.
ಸ್ಥಳೀಯ ಸಂಸ್ಥೆೆಗಳ ಚುನಾವಣೆ ಮತಪತ್ರಗಳ ಮೂಲಕ ನಡೆಸಲಾಗುವುದು. ಅಲ್ಲದೆ ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಿ ಪರಿಷ್ಕರಣೆ ಮಾಡುತ್ತಿಿದೆ. ಈ ಕುರಿತು ಭಾರತ ಚುನಾವಣಾ ಆಯೋಗಕ್ಕೆೆ ನಾನು ಪತ್ರ ಬರೆದಿರುವೆ. ಸ್ಥಳೀಯ ಸಂಸ್ಥೆೆ ಚುನಾವಣೆ ಇರುವೆಡೆ ಮತದಾರರ ಪರಿಷ್ಕರಣೆ ಮಾಡುವುದಿಲ್ಲವೆಂದು ತಿಳಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಜಿಪಂ, ತಾಪಂ ಚುನಾವಣೆ ನಡೆಸಬೇಕು. ಕೋರ್ಟ್ ಗೆ ಹೋಗಿದ್ದೇವೆ.ಅಲ್ಲದೆ ರಾಜ್ಯ ಸರಕಾರವು ರೋಸ್ಟರ್ ಪದ್ದತಿಯಂತೆ ಮೀಸಲಾತಿ ನೀಡಬೇಕು. ಈಗ ಕೆಲವು ಕಡೆ ಗ್ರಾಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗಿವೆ. ಇಲ್ಲಿ ಸರಕಾರ ರೀಡೂ ನೋಟಿಫಿಕೇಷನ್ ಮಾಡಬೇಕು. ಈ ಪಟ್ಟಿಿ ಸಿದ್ದವಾದರೆ ಚುನಾವಣೆ ನಡೆಸಲಾಗುವುದು ಎಂದರು.
ಗ್ರೇೇಟರ್ ಬೆಂಗಳೂರು ಪ್ರಾಾಧಿಕಾರ ವ್ಯಾಾಪ್ತಿಿಯಲ್ಲಿ ಮತದಾರರ ಪರಿಷ್ಕರಣೆ ಮಾಡುತ್ತೇವೆ. ನವೆಂಬರ್ 1 ರಿಂದ ಮಾಡುತ್ತೇವೆ. ತರಬೇತಿ ಆರಂಭಿಸುತ್ತೇವೆ. ಡ್ರಾ್ಟಾ , ೈನಲ್ ವೋಟರ್ ಲಿಸ್ಟ್ ಮಾಡುತ್ತೇವೆ. ಬಳಿಕ ಗ್ರೇೇಟರ್ ಬೆಂಗಳೂರು ಚುನಾವಣೆ ನಡೆಯಲಿದೆ ಎಂದರು.
ಕುರುಬರು ಎಸ್ಟಿಗೆ ಸೇರ್ಪಡೆ ವಿಚಾರ ಉಗ್ರಪ್ಪ ಆ ರೀತಿ ಹೇಳಬಾರದಿತ್ತು- ಸಂಗ್ರೇೇಶಿ
