ಸಂತೆಕೆಲ್ಲೂರು ಘನಮಠದಯ್ಯ ಲಿಂಗಸೂಗೂರು, ಜ.25:
ಪಟ್ಟಣದ ಎಪಿಎಂಸಿ ಪ್ರಾಾಗಂಣದ ಖಾಸಗಿ ವರ್ತಕರು ದಿಢೀರಾಗಿ 8 ಸಾವಿರ ರೂ. ಆಸುಪಾಸಿನಲ್ಲಿ ತೊಗರಿ ಬೆಲೆ ಏರಿಕೆ ಮಾಡಿದ ಸುದ್ದಿ ತಿಳಿದು ತಾಲೂಕು ಸುತ್ತಮುತ್ತಲ ರೈತರು ತೊಗರಿ ಮಾರಾಟಕ್ಕೆೆ ಖಾಸಗಿ ವರ್ತಕರ ಬಳಿ ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ದರಿಂದ ಎಪಿಎಂಸಿ ಪ್ರಾಾಗಂಣವಿಡಿ ರೈತರಿಂದ ತುಂಬಿ ತುಳುಕುವಂತಾಗಿದೆ. ಕೇಂದ್ರ ಸರಕಾರ 8 ಸಾವಿರ ರೂ. ಬೆಂಬಲ ಬೆಲೆ ನಿಗದಿಗೊಳಿಸಿದೆ. ಆದರೆ ರಾಜ್ಯ ಸರಕಾರ ನೀಡುತ್ತಿಿದ್ದ 500 ರೂ. ಪ್ರೋೋತ್ಸಾಾಹಧನ ಘೋಷಿಸದ ಪರಿಣಾಮ ತೆರೆಯಲಾದ ಖರೀದಿ ಕೇಂದ್ರಗಳ ಬಳಿ ರೈತರು ಬಾರದೆ ಭಣಗುಡುವಂತಾಗಿದೆ.
ನೊಂದಣಿ ಆರಂಭ : ಪ್ರಸಕ್ತ ವರ್ಷ ಕಳೆದ ವರ್ಷಕ್ಕಿಿಂತ ಹೆಚ್ಚಿಿನ ಪ್ರಮಾಣದಲ್ಲಿ ರೈತರು ತೊಗರಿ ಬಿತ್ತನೆ ಮಾಡಿದ್ದರೂ ಆದರೆ ವರುಣನ ಅವಕೃಪೆಯಿಂದ ತಾಲೂಕಿನ ಬಹುತೇಕ ಭಾಗದಲ್ಲಿ ತೊಗರಿ ಬೆಳೆ ಅತಿವೃಷ್ಠಿಿ ಮಳೆಗೆ ತುತ್ತಾಾಗಿ ಅಳಿದುಳಿದ ಬೆಳೆ ಉತ್ತಮ ಬೆಲೆಗೆ ಮಾರಾಟ ಮಾಡಲು ಕಾಯುತ್ತಿಿದ್ದ ರೈತರಿಗೆ ಬೆಲೆ 7 ಸಾವಿರ ರೂ. ಗಡಿ ದಾಟಿರಲಿಲ್ಲ ಪ್ರಸಕ್ತವರ್ಷ ಕೇಂದ್ರ ಸರಕಾರ ಕಳೆದ ವರ್ಷ 7,500 ರೂ. ಬೆಂಬಲಬೆಲೆ ಪರಿಷ್ಕರಿಸಿ ಈ ಬಾರಿ 500 ರೂ. ಏರಿಕೆ ಮಾಡಿ 8 ಸಾವಿರ ರೂ. ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳಲ್ಲಿ ನೊಂದಣಿಗೆ ಅವಕಾಶ ಕಲ್ಪಿಿಸಿದ್ದರಿಂದ ಲಿಂಗಸಗೂರು ಸೇರಿ ಬಹುತೇಕ ವ್ಯವಸಾಯ ಸೇವಾ ಕೇಂದ್ರಗಳಲ್ಲಿ ನೊಂದಣಿ ಕಾರ್ಯ ಆರಂಭಿಸಲಾಗಿತ್ತು.
ಖಾಸಗಿ ವರ್ತಕರ ಬಳಿ ಲಗ್ಗೆೆ : ಇತ್ತೀಚೆಗೆ ಲಿಂಗಸುಗೂರು ಎಪಿಎಂಸಿ ಪ್ರಾಾಂಗಣಗಳಲ್ಲಿ ಶಾಸಕ ಮಾನಪ್ಪ ವಜ್ಜಲ್ ಹಾಗೂ ವಿಧಾನ ಪರಿಷತ್ ಸದಸ್ಯ ಶರಣಗೌಡ ಭಯ್ಯಾಾಪೂರ ಪ್ರತ್ಯೇಕವಾಗಿ ಎರಡು ಖರೀದಿ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಚಾಲನೆ ನೀಡಿದ್ದರು. ಇನ್ನೇನು ಗ್ರಾಾಮೀಣ ಕೇಂದ್ರಗಳನ್ನು ಆರಂಭಿಸಬೇಕು ಎನ್ನುವಷ್ಟರಲ್ಲಿ ಎಪಿಎಂಸಿಯಲ್ಲಿ ಖಾಸಗಿ ವರ್ತಕರು 7 ಸಾವಿರ ರೂ. ಆಸುಪಾಸಿನಲ್ಲಿದ್ದ ತೊಗರಿ ಬೆಲೆಯನ್ನು 8 ಸಾವಿರ ರೂ. ಆಸುಪಾಸಿಗೆ ತಂದು ನಿಲ್ಲಿಸಿದ್ದು ಉತ್ತಮ ತೊಗರಿಯನ್ನು 8200 ರೂ.ಗೆ ಉಳಿದ ಮಾಲನ್ನು 7800 ರೂ.ಗೆ ಖರೀದಿಸಲು ಮುಂದಾಗಿದ್ದರಿಂದ ರೈತರು ಖಾಸಗಿ ವರ್ತಕರ ಬಳಿ ಲಗ್ಗೆೆ ಇಟ್ಟಿಿದ್ದಾಾರೆ.
ಕಮಿಷನ್ ಸೂಟ್ ಕಡಿತ ನಿಂತಿಲ್ಲ : ಖಾಸಗಿ ವರ್ತಕರು ಪ್ರತಿ ಕ್ವಿಿಂಟಲ್ ತೊಗರಿಗೆ ಎರಡು ಕೆ.ಜಿ. ಸೂಟ್ ಹಾಗೂ ಶೇ.2 ಕಮಿಷನ್ ಮುರಿಯುವುದು ಹಾಗೂ ರೈತರ ಮಾಲು ತೂಕದ ವೇಳೆ ಮೋಸ ಮಾಡಲಾಗುತ್ತದೆಂದು ಹಲವು ಬಾರಿ ರೈತ ಸಂಘ ಹೋರಾಟ ಮಾಡಿದ್ದರೂ ಸಹ ಇಂದಿಗೂ ತೂಕದಲ್ಲಿ ಸೂಟ್ ಮುರಿಯುವುದು ಮಾತ್ರ ಎಗ್ಗಿಿಲ್ಲದೆ ನಡೆದಿದೆ ಎಂದು ಹೆಸರು ಹೇಳಲು ಇಚ್ಚಿಿಸದೆ ಆರೋಪಿಸಿದ ರೈತರು ಒಂದು ತಿಂಗಳ ತಡವಾಗಿ ಹಣ ಪಡೆದರೆ ಇನ್ನು 200 ರೂ. ಹೆಚ್ಚಿಿಗೆ ನೀಡುವುದಾಗಿ ವರ್ತಕರು ಹೇಳುತ್ತಿಿರುವ ಕಾರಣ ಅನಿವಾರ್ಯವಾಗಿ ಮಾರಾಟ ಮಾಡಲು ಮುಂದಾಗಿರುವುದು ಕಂಡು ಬಂದಿತು.
500 ರೂ. ಪ್ರೋೋತ್ಸಾಾಹಧನ ಭರವಸೆ ಕೊರತೆ : ಮಾರಾಟ ಕೇಂದ್ರದಲ್ಲಿ ತೊಗರಿ ಮಾರಾಟ ಮಾಡಿದರೆ 8 ಸಾವಿರ ರೂ. ಸಿಗುತ್ತದೆ. ಆದರೆ ಹಣ ಬರಲು ತಿಂಗಳಗಟ್ಟಲೆ ಕಾಯಬೇಕು ಎಂಬ ಆತಂಕ ಒಂದೆಡೆಯಾದರೆ ರಾಜ್ಯ ಸರಕಾರ 500 ರೂ. ಘೋಷಣೆ ಮಾಡುವುವ ಭರವಸೆ ಇಲ್ಲದ ಕಾರಣಕ್ಕೆೆ ಖಾಸಗಿ ವ್ಯಾಾಪಾರಿಗಳಿಗೆ ನೀಡಿದರೆ ಬೇಗನೆ ಹಣ ಕೈಸೇರುತ್ತದೆ. ಸ್ವಲ್ಪ ನಷ್ಟವಾದರು ಪರವಾಗಿಲ್ಲ ಎಂದು ಖಾಸಗಿ ವರ್ತಕರ ಬಳಿಯೇ ಸಾಲುಗಟ್ಟಿಿ ನಿಂತು ರೈತರು ವ್ಯಾಾಪಾರ ಮಾಡುವುದು ಕಂಡು ಬಂತು.
ವರ್ಷವಿಡಿ ಬೆವರು ಸುರಿಸಿ ಹಗಲುರಾತ್ರಿಿ ಕಷ್ಟಪಟ್ಟು ಖಾಸಗಿ ವರ್ತಕರ ಬೆಲೆ ಏರಿಕೆಯಿಂದಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೊಂದಾಯಿಸಿದ್ದರು ಸಹ ಎಪಿಎಂಸಿಯ ಖಾಸಗಿ ಖರೀದಿದಾರರ ಬಳಿ ಮಾರಾಟಕ್ಕೆೆ ಮುಂದಾಗಿದ್ದರಿಂದ ಸರಕಾರಿ ತೊಗರಿ ಖರೀದಿ ಕೇಂದ್ರದ ಮುಂದೆ ರೈತರು ಬಾರದೆ ಖರೀದಿ ಕೇಂದ್ರಗಳು ಬಣಗುಡುವಂತಾಗಿದ್ದು ಇನ್ನು ಗ್ರಾಾಮೀಣ ಭಾಗದಲ್ಲಿ ವ್ಯವಸಾಯ ಕೇಂದ್ರಗಳು ಖರೀದಿ ಕೇಂದ್ರ ಆರಂಭವಾಗುವುದು ಅನುಮಾನವಾಗಿದೆ. ಆದರೆ ರಾಜ್ಯ ಸರಕಾರ 500 ರೂ. ಪ್ರೋೋತ್ಸಾಾಹಧನ ಘೋಷಿಸಿದರೆ ಖರೀದಿ ಕೇಂದ್ರಗಳತ್ತ ರೈತರು ಮಾರಾಟಕ್ಕೆೆ ಮುಂದಾಗುವ ಸಾಧ್ಯತೆ ಇದೆ.
500 ರೂ.ಪ್ರೋತ್ಸಾಹಧನ ಘೋಷಿಸದ ರಾಜ್ಯ ಸರ್ಕಾರ ಬಣಗುಡುತ್ತಿರುವ ತೊಗರಿ ಖರೀದಿ ಕೇಂದ್ರ ತೊಗರಿಬೆಲೆ ಹೆಚ್ಚಳ ವರ್ತಕರ ಬಳಿ ಮುಗಿಬಿದ್ದ ರೈತರು

