ಸುದ್ದಿಮೂಲ ವಾರ್ತೆ ರಾಯಚೂರು, ಅ.09:
ಕಾಂಗ್ರೆೆಸ್ ಪಕ್ಷದೊಳಗಿನ ಗುಂಪುಗಾರಿಕೆಯ ಪರಿಣಾಮ ಅಭಿವೃದ್ದಿ ಮೇಲೆ ಗ್ರಹಣ ಬಡಿದಿದ್ದುಘಿ, ರಾಯಚೂರು ನಗರಾಭಿವೃದ್ದಿ ಪ್ರಾಾಧಿಕಾರದಲ್ಲಿನ ಕೋಟಿಗಟ್ಟಲೆ ಮೊತ್ತದ ಟೆಂಡರ್ ಪೂರ್ಣಗೊಂಡಿದ್ದರೂ ಕೆಲಸ ಆರಂಭವಾಗುತ್ತಿಿಲ್ಲ ಎಂದು ಆರೋಪಿಸಿದ ಜೆಡಿಎಸ್ ಜಿಲ್ಲಾಾಧ್ಯಕ್ಷ ಎಂ.ವಿರೂಪಾಕ್ಷಿಿ ವಾರದಲ್ಲಿ ಸರಿ ಹೋಗದೆ ಹೋದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ನಗರದ ಅಭಿವೃದ್ದಿಗೆ ಸಭೆ ನಡೆಸಿದ ಜಿಲ್ಲಾಾಧಿಕಾರಿ, ಪಾಲಿಕೆ ಆಯುಕ್ತರು ಅದರಲ್ಲಿ ನಗರದ ಎಲ್ಲ ವೃತ್ತಗಳ ಸೌಂದರೀಕರಣ, ಸಾರ್ವಜನಿಕ ಉದ್ಯಾಾನಗಳ ಅಭಿವೃದ್ದಿಘಿ, ಕೆರೆ ಸಂರಕ್ಷಣೆ, ಐತಿಹಾಸಿಕ ಕೋಟೆ ನೀಲ ನಕ್ಷೆೆಯ ತೋರಿಸಿದ್ದು ಈಗ ಜಾತ್ರೆೆಯಲ್ಲಿ ಬಾಂಬೆ ತಾರೀಪು ಪ್ರಸ್ತುತ ಪಡಿಸಿದಂತೆ ನೆನಪಿಗೆ ಬರುತ್ತಿಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆೆಸ್ ಸರ್ಕಾರದಲ್ಲಿನ ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಬಣ ರಾಜಕೀಯ, ಗುಂಪುಗಾರಿಕೆಗೆ ಅಭಿವೃದ್ದಿ ಮರೀಚಿಕೆಯಾಗಿದೆ. ಸಭೆಗಳಾಗುತ್ತಿಿವೆ ವಿನಃ ಅನುಷ್ಠಾಾನ ಗೊಳ್ಳುತ್ತಿಿಲ್ಲ ಎಂದು ಕಿಡಿ ಕಾರಿದ ಅವರು ನಗರದ ಶಾಸಕ ಡಾ.ಶಿವರಾಜ ಪಾಟೀಲರ ಸಂಪೂರ್ಣ ನಿಷ್ಕ್ರಿಿಯೆಯೂ ಕೆಲಸಕ್ಕೆೆ ಅಡ್ಡಿಿಯಾಗಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್, ಬಸವೇಶ್ವರ ವೃತ್ತ ಸೇರಿ ಉದ್ಯಾಾನಗಳ ಸಮಗ್ರ ಅಭಿವೃದ್ದಿಗೆ ಸುಮಾರು 40 ಕೋಟಿ ವೆಚ್ಚದ ಕಾಮಗಾರಿಗಳಿಗೆ ನಗರಾಭಿವೃದ್ದಿ ಇಲಾಖೆ ಆಯುಕ್ತರು ಮೇ 16ರಂದು ಅನುಮೋದನೆ ನೀಡಿ ನಾಲ್ಕು ತಿಂಗಳಾಗಿದ್ದರೂ ಕೆಲಸವೇ ಆರಂಭವಾಗುತ್ತಿಿಲ್ಲ ಎಂದು ದೂರಿದರು.
ಇಬ್ಬರು ಸಚಿವರು ಧೈರ್ಯವಿದ್ದರೆ ತಮ್ಮ ಆರೋಪ ಸುಳ್ಳು ಎಂದು ಹೇಳಲಿ ಎಂದು ಸವಾಲು ಹಾಕಿದ ಅವರು ಇಂತಹ ರಾಜಕಾರಣದಿಂದ ಅಭಿವೃದ್ದಿ ಸಾಧ್ಯವೆ ಎಂದು ಪ್ರಶ್ನಿಿಸಿದರು.
ಒತ್ತುವರಿ ತೆರವು ಮಾಡದೆ ಮಾವಿನಕೆರೆಯೊಳಗೆ ರಸ್ತೆೆ ಮಾಡುತ್ತಿಿದ್ದರೆ, ಕೃಷ್ಣಗಿರಿ ಲೇಔಟ್ನಲ್ಲಿ ಕೆರೆ ನುಂಗಿ ನಿವೇಶನಗಳಾಗಿಸಿದ್ದಾಾರೆ ಸಣ್ಣ ನೀರಾವರಿ ಸಚಿವ ಬೋಸರಾಜ್ ಇನ್ನೆೆಲ್ಲಿ ಕೆರೆ ಉಳಿಸುತ್ತಾಾರೆ ಎಂದು ಪ್ರಶ್ನಿಿಸಿದ ಅವರು ಇತ್ತ ನಗರದ ಶಾಸಕ ಡಾ.ಶಿವರಾಜ ಪಾಟೀಲ ತಮ್ಮ ಸರ್ಕಾರ ಇಲ್ಲ ಎಂದೇಳಿ ನುಣುಚಿಕೊಳ್ಳುತ್ತಿಿದ್ದಾಾರೆ ಹಾಗಾದರೆ ಶಾಸಕರಾಗಿ ಸಾರ್ಥಕವೇನು ಎಂದು ದೂರಿದರು.
ನಗರ ಪಾಲಿಕೆಯಿಂದಲೂ ಸ್ವಚ್ಛತೆ, ಬೀದಿ ದೀಪ ನಿರ್ವಹಣೆಯಾಗುತ್ತಿಿಲ್ಲ ನಗರದ ಪ್ರಮುಖ ಲೇಔಟ್ಗಳು ನಾರುತ್ತಿಿವೆ. ಅನೇಕ ಗಂಭೀರ ಸಮಸ್ಯೆೆಗಳು ಎದುರಿಸುವಂತಾಗಿದೆ. ನಗರದಲ್ಲಿ ಜ್ವಲಂತ ಸಮಸ್ಯೆೆಗಳು ಮತ್ತು ಮಹಾನಗರ ಪಾಲಿಕೆಯ ಕರ್ಮಕಾಂಡ ಬಗ್ಗೆೆ ವಾರಕ್ಕೊೊಮ್ಮೆೆ ದಾಖಲೆ ಸಮೇತ ಮಾಧ್ಯಮಗಳ ಮುಂದೆ ಇಡುವುದಾಗಿ ಹೇಳಿದರು. ಇಂತಹ ಜನಪರ ಹೋರಾಟಕ್ಕೆೆ ಪ್ರಗತಿಪರರು, ಜನ ಸಾಮಾನ್ಯರು ಬೆಂಬಲಿಸಿ ಭಾಗವಹಿಸಿದರೆ ಸಮಸ್ಯೆೆಗಳ ಪರಿಹಾರ ಆಗಲು ಸಾಧ್ಯ. ವಾರದಲ್ಲಿ ಆರ್ಡಿಎ ಕಾಮಗಾರಿ ಆರಂಭಿಸದೆ ಹೋದರೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮುಂದೆಯೇ ವಿನೂತನ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ನಾಗರಾಜಗೌಡ, ಹಂಪಯ್ಯಘಿ, ರಾಮು ಸೇರಿ ಇತರರಿದ್ದರು.
ಸಚಿವರ ಬಣ ರಾಜಕೀಯದಿಂದ ಅಭಿವೃದ್ದಿಗೆ ಗ್ರಹಣ 40 ಕೋಟಿ ವೆಚ್ಚದ ಆರ್ಡಿಎ ಕಾಮಗಾರಿ ವಾರದಲ್ಲಿ ಆರಂಭಿಸದಿದ್ದರೆ ಹೋರಾಟ-ವಿರೂಪಾಕ್ಷಿಿ
