ಸುದ್ದಿಮೂಲ ವಾರ್ತೆ ರಾಯಚೂರು, ಜ.31:
ತೆಲಂಗಾಣದ ವಾರಂಗಲ್ಲಿನಲ್ಲಿ ಜರುಗಿದ ತೆಲಂಗಾಣ – ಕರ್ನಾಟಕ ಸಾಂಸ್ಕೃತಿಕ ವಿನಿಮಯ ಸಮಾರಂಭದಲ್ಲಿ ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮೈಭಾರತ್ ಎನ್ಎಸ್ಎಸ್ ಸ್ವಯಂ ಸೇವಕಿಯರು ಕನ್ನಡ ಜಾನಪದ ನೃತ್ಯ ಪ್ರದರ್ಶಿಸಿ ಕನ್ನಡದ ಕಂಪು ಹರಡಿದರು.
ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳ ಅಂತರ ರಾಜ್ಯ ಯುವಜನ ವಿನಿಮಯ ಕಾರ್ಯಕ್ರಮದ ಭಾಗವಾಗಿ ಹಮ್ಮಿಿಕೊಳ್ಳಲಾಗಿದ್ದ ಪರಸ್ಪರ ರಾಜ್ಯಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಕನ್ನಡದ ಗ್ರಾಾಮೀಣ ಸೊಗಡಿನ ಜಾನಪದ ಗೀತೆಗಳಿಗೆ ಆಕರ್ಷಕ ಲಯಬದ್ಧ ನೃತ್ಯ ಪ್ರದರ್ಶಿಸುವ ಮೂಲಕ ಸ್ವಯಂ ಸೇವಕಿಯರು ಕಾರ್ಯಕ್ರಮದಲ್ಲಿ ನೆರೆದಿದ್ದ ಅಪಾರ ಪ್ರೇೇಕ್ಷಕರ ಮನಸೂರೆಗೊಳಿಸಿದರು.
ಭಾರತ ಸರಕಾರದ ಯುವಜನ ವ್ಯವಹಾರ ಮತ್ತು ಕ್ರೀೆಡಾ ಸಚಿವಾಲಯದಿಂದ ಪ್ರಾಾಯೋಜಿತಗೊಂಡ ತೆಲಂಗಾಣ ಮತ್ತು ಕರ್ನಾಟಕ ಜೋಡಿ ರಾಜ್ಯಗಳ ನಡುವಿನ ಯುವಜನ ವಿನಿಮಯ ಕಾರ್ಯಕ್ರಮ ವಾರಂಗಲ್ ನಗರದ ತಲ್ಲಾ ಪದ್ಮಾಾವತಿ ಾರ್ಮಸಿ ಕಾಲೇಜಿನಲ್ಲಿ ಆ ಕಾಲೇಜಿನ ವಿದ್ಯಾಾರ್ಥಿನಿಯರು ಮತ್ತು ಕರ್ನಾಟಕದ ಪ್ರತಿನಿಧಿ ಸ್ವಯಂ ಸೇವಕಿಯರ ಮಧ್ಯೆೆ ಏರ್ಪಡಿಸಲಾಗಿತ್ತು.
ಕರ್ನಾಟಕ ರಾಜ್ಯದ ಬೀದರ, ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಿಂದ ಆಯ್ಕೆೆಗೊಂಡ 37 ಮೈಭಾರತ್ ಸ್ವಯಂ ಸೇವಕ , ಸೇವಕಿಯರು ನಮ್ಮ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಿದ್ದರು. ಆ ಪೈಕಿ ರಾಯಚೂರಿನ ವಿವಿಧ ತಾಲೂಕುಗಳನ್ನು ಪ್ರತಿನಿಧಿಸಿದ್ದ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕು. ಸಂಗೀತಾ ಪ್ರಕಾಶ್ ನೇತೃತ್ವದ ಎಂಟು ಸ್ವಯಂ ಸೇವಕಿಯರು ನೃತ್ಯ ಪ್ರದರ್ಶನದಲ್ಲಿ ಕನ್ನಡ ಗ್ರಾಾಮೀಣ ಸೊಗಡಿನ ಸುಗ್ಗಿಿಕಾಲ ಹಿಗ್ಗಿಿ ಬಂದಿತೋ, ಚೆಲುವಯ್ಯ ಚೆಲುವೊ ತಾನಿತಂದಾನ, ಕ್ವಾಾರಣ್ಯ ನೀಡವ್ವ, ಮಾದೇಶ್ವರ ಮುಂತಾದ ಜಾನಪದ ಗೀತೆಗಳಿಗೆ ಚಿತ್ತಾಾಕರ್ಷಕ ಮತ್ತು ಲಯಬದ್ಧ ನೃತ್ಯ ಪ್ರದರ್ಶಿಸುವ ಮೂಲಕ ತೆಲುಗು ನಾಡಿನಲ್ಲಿ ಕನ್ನಡದ ಕಂಪು ಹರಡಿ ಪ್ರೇೇಕ್ಷಕರಿಂದ ವ್ಯಾಾಪಕ ಮೆಚ್ಚುಗೆಗೆ ಪಾತ್ರರಾದರು.
ವಾರಂಗಲ್ : ಜಾನಪದಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದ ವಿದ್ಯಾರ್ಥಿನಿಯರು

