ಸುದ್ದಿಮೂಲವಾರ್ತೆ
ಕೊಪ್ಪಳ ಆ 14: ನಿಧನರಾದ ಸ್ವತಂತ್ರ್ಯ ಯೋಧರ ಕುಟುಂಬಕ್ಕೆ ಭೂಮಿ ನೀಡಲು ಕೊಪ್ಪಳ ತಾಲೂಕಾಡಳಿತ ವಿಫಲವಾಗಿದೆ ಎಂದು ಕರ್ನಾಟಕ ದಲಿತ ರಕ್ಷಣಾ ವೇದುಕೆಯ ಶಂಕರ ನಂದಿಹಾಳ ಆರೋಪಿಸಿದ್ದಾರೆ.
ಈ ಕುರಿತು ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಟಿಬಿ ಡ್ಯಾಮಿನಲ್ಲಿದ್ದ ಸ್ವತಂತ್ರ್ಯ ಹೋರಾಟಗಾರ ಪೊನ್ನಸ್ವಾಮಿಯರ ಪತ್ನಿ ಹುಲಿಗೆಮ್ಮರಿಗೆ 1978 ರಲ್ಲಿ ಶಿವಪುರ ಬಳಿಯಲ್ಲಿ 2 ಎಕರೆ ಭೂಮಿ ಮಂಜೂರು ಮಾಡಿದ್ದಾರೆ. ಆದರೆ ಕೊಪ್ಪಳ ತಹಸೀಲ್ದಾರ ಇಲ್ಲಿಯವರೆಗೂ ಭೂಮಿ ಯಾವುದು. ಹುಲಿಗೆಮ್ಮರಿಗೆ ಹಕ್ಕು ಪತ್ರ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಸ್ವತಂತ್ರ ಹೋರಾಟಗಾರರ ಕುಟುಂಬಕ್ಕೆ ನ್ಯಾಯ ಒದಗಿಸಲು ಕೊಪ್ಪಳ ಜಿಲ್ಲಾಧಿಕಾರಿಗಳು ವಿಫಲವಾಗಿದ್ದಾರೆ. ಹೀಗಾಗಿ ಅವರು ಸ್ವತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗುವ ನೈತಿಕತೆ ಇಲ್ಲ ಎಂದು ಆರೋಪಿಸಿದರು.
ಪ್ರತಿ ಬಾರಿಯೂ ಅಧಿಕಾರಿಗಳ ಬಳಿ ತಿರುಗಾಡಿ ಸಾಕಾಗಿದೆ. ಈ ಕುಟುಂಬಗಳಿಗೆ ನ್ಯಾಯ ಕೊಟ್ಟರೆ ಮಾತ್ರ ಸ್ವತಂತ್ರ ದಿನಕ್ಕೆ ಅರ್ಥ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ, ಚನ್ನಬಸವ ಮಾನ್ವಿ, ರಮೇಶ, ಶಂಕರ ಇದ್ದರು.