ಸುದ್ದಿಮೂಲ ವಾರ್ತೆ ಕೊಪ್ಪಳ, ಸೆ.28:
ಬಿಜೆಪಿಯವರು ಮತಗಳ್ಳತನ ಮಾಡಿ ಅಧಿಕಾರಕ್ಕೆೆ ಬಂದಿದ್ದಾಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ತಮಿಳುನಾಡಿನಲ್ಲಿ 39 ಜನ ಸಾವಾಗಿದೆ. ಈ ದುರಂತ ವಾಗಬಾರದಿತ್ತು. ಅಲ್ಲಿಯ ಮುಖ್ಯಮಂತ್ರಿಿ ಎಂ ಕೆ ಸ್ಟಾಾಲಿನ್ ರಾತ್ರಿಿಯೇ ಭೇಟಿ ನೀಡಿದ್ದಾಾರೆ. ಚಿತ್ರನಟ ವಿಜಯ ಮುಂಜಾಗ್ರತೆ ವಹಿಸಬೇಕಾಗಿತ್ತು ಎಂದು ಹೇಳಿದರು.
ಮಾಜಿ ಶಾಸಕ ಬಸವರಾಜ ದಡೇಸಗೂರು ಅವರು ವಿರುದ್ಧ ತಮ್ಮ ಹೇಳಿಕೆ ನೀಡಿರುವುದನ್ನು ಟೀಕಿಸಿದರು. ನಾನು ಕಾಂಗ್ರೆೆಸ್ಸಿಿನವರು ಹಣ ಪಡೆದಿದ್ದಾಾರೆ ಎಂದು ಆರೋಪಿಸಿದ್ದಾಾರೆ. ಆತನಿಗೆ ತನ್ನ ಅಧಿಕಾರ ಅವಧಿಯಲ್ಲಿ ನಡೆದುಕೊಂಡಿದ್ದು ನೆನಪಿಗೆ ಬಂದಿದೆ. ಈ ಪುಣ್ಯಾಾತ್ಮನೂ ಸಿಎಂ ಬಳಿ ಬಂದಿದ್ದ ಅದು ನೆನಪಿಲ್ಲ. ಕಾರ್ಖಾನೆಯ ವಿಷಯವಾಗಿ ಬಸವರಾಜ ದಡೇಸಗೂರು ಮಾತನಾಡುವಾಗ ಮುಖಂಡರು ಎದ್ದು ಹೋದರು. ಅವರೊಂದಿಗೆ ಇದ್ದವರು ನಗುತ್ತಿಿದ್ದರು ಅವರನ್ನು ಅಪಹಾಸ್ಯ ಮಾಡಿದ್ದಾಾರೆ.ದಡೇಸಗೂರು ಬುದ್ದಿಗೇಡಿ ಅದನಾ. ದಡೇಸಗೂರು ಮಾಡಿರುವ ಆರೋಪಕ್ಕೆೆ ಹುರುಳಿಲ್ಲ ಎಂದರು.
ಹಾಸ್ಟೆೆಲ್ ಗುತ್ತಿಿಗೆಯಲ್ಲಿ ಹಣ ಪಡೆದಿದ್ದಾಾರೆ ಎಂದು ಆರೋಪಿಸುತ್ತಾಾರೆ. ಆತ ಸೋತಿದ್ದಾಾನೆ ಮಾತನಾಡುತ್ತಾಾನೆ. ಆತನ ಬಗ್ಗೆೆ ಮಾತನಾಡೋದು ಹೊಲಸಿನ ಮೇಲೆ ಕಲ್ಲು ಒಗೆದಂತೆ. ಬಲ್ಡೋೋಟಾ ಕಂಪನಿ ಕಾರ್ಖಾನೆಗೆ ವಿರೋಧಿಸಿ ಹೋರಾಡುವ ಜನರ ಪರವಾಗಿ ನಾವಿದ್ದೇವೆ ಎಂದು ಹೇಳಿದರು.
ಅಕ್ರಮ ಮರಳು, ಮರಂ ಸಾಗಾಟಕ್ಕಾಾಗಿ ಕನಕಗಿರಿ ಇನ್ಸೆೆಕ್ಟರ್ ಮಾತನಾಡಿರುವ ಆಡಿಯೋ ಈ ಬಗ್ಗೆೆ ಸ್ಪಷ್ಠತೆ ನನಗೆ ಇಲ್ಲ ಎಂದರು.
ಸಮಿಕ್ಷೆಯಲ್ಲಿ ಎರಡು ತೊಂದರೆಯಾಗಿತ್ತು. ನಿನ್ನೆೆ ಸಿಎಂ ಡಿಸಿಗಳ ಸಭೆಯ ನಂತರ ಸರಿಪಡಿಸಲಾಗಿದೆ. ಈಗಾಗಲೇ 56 ಲಕ್ಷ ಜನ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊೊಳ್ಳುವದಿಲ್ಲ ಎಂದಿರುವ ಪ್ರಲ್ಹಾಾದ ಜೋಶಿಯವರಿಗೆ ಬಡವರ ಬಗ್ಗೆೆ ಕಾಳಜಿ ಇಲ್ಲ. ಈ ಕಾರಣಕ್ಕೆೆ ಈ ರೀತಿ ಹೇಳಿಕೆ ನೀಡಿದ್ದಾಾರೆ. ಬಿಜೆಪಿಯವರು ಸಣ್ಣತನ ಪ್ರದರ್ಶನ ಮಾಡಿದ್ದಾಾರೆ ಎಂದರು.
ಬಿಜೆಪಿಗರು ಮತಗಳ್ಳತನ ಮಾಡುವ ಕಳ್ಳರು – ತಂಗಡಗಿ
