ಸಿರುಗುಪ್ಪ,ನ.27: ಪತ್ರಿಕಾ ವರದಿಕಾರಿಕೆ ಎನ್ನುವುದು ಧೈರ್ಯದ ಕಾರ್ಯ ಅದನ್ನು ಪ್ರಮಾಣಿಕವಾಗಿ ನಿರ್ವಹಿಸಬೇಕು. ಅದೆಷ್ಟೋ ಪರ್ತಕರ್ತರು ವರದಿಯನ್ನು ಮಾಡಿ ಎದುರಿಸುವ ಶಕ್ತಿ ಇರುವುದಿಲ್ಲ. ಸೂಕ್ಮ್ಷತೆಯನ್ನು ಗಮನಿಸಿ ವರದಿ ಮಾಡಬೇಕೆಂಬ ಸಲಹೆ ನೀಡಿದರು.
ಈಗಿನ ವ್ಯವಸ್ಥೆಯಲ್ಲಿ ಪ್ರಮಾಣಿಕರಾಗಿ ಅಪ್ರಮಾಣಿಕರಂತೆ ವರ್ತಿಸಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾವುದನ್ನು ಅರಗಿಸಿಕೊಳ್ಳುವಂತಹ ಕಾರ್ಯಗಳು ಎಲ್ಲಾ ಪಕ್ಷಗಳು ಮಾಡಿಕೊಂಡು ಹೋಗಬೇಕು. ಎಂದು ವಿಧಾನ ಪರಿಷತ್ನ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದರು.
ಸಿರಿಗೇರಿ ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಅನ್ನಪೂರ್ಣ ಪ್ರಕಾಶನದಿಂದ ಆಯೋಜಿಸಿದ್ದ ವಿಧಾನಮಂಡಲದ ವರದಿಗಾರಿಕೆ ಎಂಬ ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು. ಹೊತ್ತಿಗೆಯನ್ನು ಸಂಪೂರ್ಣ ಓದಿ ಸಲಹೆ ನೀಡುತ್ತೇನೆ. ಹೊತ್ತಿಗೆಯನ್ನು ಗ್ರಂಥಾಲಯಕ್ಕೆ ನೀಡಿ ಎಂದರು.
ದೇವಸ್ಥಾನದ ಹೊರಗಡೆ ಬರುವ ಮುನ್ನ ಸೂಕ್ತ ಭದ್ರತೆ ಇಲ್ಲದ್ದನ್ನು ಕಂಡು ಪೋಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಹೊತ್ತಿಗೆಯ ಲೇಖಕ ಡಾ.ಈಶ್ವರ್ ದೈತೋಟ ಮಾತನಾಡಿ ವಿಧಾನ ಮಂಡಲದ ವರದಿಗಾರಿಕೆಯನ್ನು ಸಾಕಷ್ಟು ಲಭ್ಯ ಇರುವ ಮಾಹಿತಿಯನ್ನು ಪಡೆದು ಸೂಕ್ಷ್ಮ ವಾಗಿ ರಚಿಸಿದ್ದೇನೆ. ಸಭಾಪತಿಯವರು ಬಿಡುಗಡೆ ಮಾಡಿದ್ದು ನನ್ನ ಭಾಗ್ಯ ಎಂದರು.
ಅನ್ನಪೂರ್ಣ ಪ್ರಕಾಶನದ ಲೇಖಕ ಸಿರಿಗೇರಿ ಎರ್ರಿಸ್ವಾಮಿ ಮಾತನಾಡಿ ಸರಳತೆಯ ಇನ್ನೊಂದು ಹೆಸರು ಹೊರಟ್ಟಿಯವರು ಅವರ ಪ್ರಬುದ್ದತೆಯ ರಾಜಕಾರಣ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀ ನಾಗನಾಥೇಶ್ವರ ದೇವಸ್ಥಾನ ಮಂಡಳಿ ಮತ್ತು ಅನ್ನಪೂರ್ಣ ಪ್ರಕಾಶ ಸಂಸ್ಥೆಯವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅನ್ನಪೂರ್ಣ ಪ್ರಕಾಶನದ ಲೇಖಕ ಸಿರಿಗೇರಿ ಎರ್ರಿಸ್ವಾಮಿ, ಡಾ.ಬಸವರಾಜ್, ಜಿಲ್ಲಾ ಹಿಂದುಳಿದ ವರ್ಗದ ಜಿಲ್ಲಾ ಅಧಿಕಾರಿ ಜಲಾಲಪ್ಪ, ಅಮರೇಶ್ ಗೌಡ, ಬಕಾಡೆ ಈರಯ್ಯ, ಹೆಚ್.ಎಂ.ಶಶಿಧರ ಸ್ವಾಮಿ, ಚನ್ನಬಸಯ್ಯಸ್ವಾಮಿ ಇದ್ದರು.