ಸುದ್ದಿಮೂಲ ವಾರ್ತೆ
ರಾಯಚೂರು,ಜೂ.17: ಜಿಂಕೆ ಕೊಂದ ಆರೋಪದಲ್ಲಿ ಮೂವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ತಲಾ 11 ಸಾವಿರ ರೂ ದಂಡ ವಿಧಿಸಿ ರಾಯಚೂರುನ ಪ್ರಧಾನ ಸಿಜೆ ಎಂ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಮಮತಾ ತೀರ್ಪು ನೀಡಿದ್ದಾರೆ.
ರಾಯಚೂರಿನ ನಗರದ ಅರಬ್ ಮೊಹಲ್ಲಾ ನಿವಾಸಿಗಳಾದ ಸೈಯದ್ ಹುಸೇನ್, ಸೈಯದ್ ಖಾಸಿಂ ಮತ್ತು ಸೈಯದ್ ರಸೂಲ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ.
ದಿನಾಂಕ 20-08-2009 ರಲ್ಲಿ ನಗರದ ಬೈಪಾಸ್ ಸಮೀಪ ಬರುವ ಮಂಚಲಾಪುರ ರೈಲ್ವೆ ಗೇಟ್ ಸಮೀಪದ ಅರಣ್ಯ ಪೊದೆಯ ಬಳಿ ರಾತ್ರಿ 2-15 ರ ಸುಮಾರಿಗೆ ಜಿಂಕೆ ಮರಿ ಕೊಂದು ಮಾಂಸ ತಯಾರುಮಾಡುವ ವೇಳೆ ಸದರ ಬಜಾರ್ ಠಾಣೆ ಪೊಲೀಸರು ದಾಳಿ ಮಾಡಿ ಆರೋಪಿಗಳ ಬಂಧಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಮಮತಾ ಇವರು ಆರೋಪಿಗಳಿಗೆ ದಂಡ ಸಹಿತ ಶಿಕ್ಷೆ ವಿಧಿಸುವ ಜೊತೆಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಡಿವೈಎಸ್ ಪಿ ಪಿ.ಶ್ರೀಧರ ಆರೋಪಿಗಳ ವಿರುದ್ದ ದೋಷಾರೋಪ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಎಸ್.ಬಿ.ಉಪಾಧ್ಯೆ ವಾದಿಸಿದ್ದರು.