ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.4: ಸಾಮಾಜಿಕ ಜಾಲತಾಣದಲ್ಲಿ ಪ್ರಮುಖವಾಗಿರುವ ಟ್ವಿಟರ್ನ ಲೋಗೊ ಬದಲಾಗಿದೆ. ಇದುವರೆಗೆ ಜನರ ಮನಸ್ಸಿನಲ್ಲಿ ಬೇರೂರಿದ್ದ ‘ನೀಲಿ ಹಕ್ಕಿ’ಯನ್ನು ಬದಲಿಸಿ ನಾಯಿಯ ಫೋಟೋ ಬದಲಿಸಿದ್ದಾರೆ.
ಲೋಗೋ ಬದಲಿಸಿದ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಬಳಕೆದಾರರಿಗೆ ಕುತೂಹಲ ಮೂಡಿಸಿದ್ದಾರೆ.
ಹಕ್ಕಿಯ ಜಾಗಕ್ಕೆ ಡಾಗ್ಕಾಯಿನ್ನ ನಾಯಿಯ ಮೀಮ್ಸ್ ಫೋಟೋವನ್ನು ಬದಲಿಸಿದ್ದಾರೆ. ಲೋಗೋವನ್ನು ಡೋಜ್ ಮೆಮೆಗೆ ಬದಲಾಯಿಸಿದ ಸ್ವಲ್ಪ ಸಮಯದ ನಂತರ ಕ್ರಿಪ್ಟೋಕರೆನ್ಸಿಯ ಮೌಲ್ಯವು 30 ಪ್ರತಿಶತದಷ್ಟು ಸೇರ್ಪಡೆಯಾಗಿದೆ.
ಅಷ್ಟೇ ಅಲ್ಲದೆ ಸ್ವತಃ ಅವರೇ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಲೋಗೋ ಕೇವಲ ವೆಬ್ ಬಳಕೆ ದಾರರಿಗೆ ಮಾತ್ರ ಕಾಣ ಸಿಗಲಿದ್ದು, ಮೊಬೈಲ್ ಬಳಕೆ ದಾರಿಗೆ ಹಕ್ಕಿ ಚಿತ್ರವೇ ಕಾಣಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.