ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.20:
ವಿಶ್ವವಿಖ್ಯಾಾತ ಹಂಪಿಯ ಗಜಶಾಲಾ ಆವರಣದಲ್ಲಿ ಶನಿವಾರ ರಾತ್ರಿಿ ಹಮ್ಮಿಿಕೊಂಡಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಜಾನಪದ ಕಲಾಪ್ರದರ್ಶನ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಕಣ್ತುಂಬಿಕೊಂಡರು.
ಸ್ಮಾಾರಕಗಳ ನಡುವೆ ಸಿದ್ದ ಪಡಿಸಿದ್ದ ವೇದಿಕೆಯಲ್ಲಿ ವಿವಿಧ ಕಲಾತಂಡಗಳ ಸದಸ್ಯರು ಪ್ರದರ್ಶನ ನೀಡಿ ಗಮನ ಸೆಳೆದರು. ಒಂದೇ ವೇದಿಕೆಯಲ್ಲಿ ಯಕ್ಷಗಾನ ಹಾ ಗೂ ಭರತನಾಟ್ಯ ಪ್ರದರ್ಶಿಸಿದ ನೃತ್ಯ ಕಲಾ ವಿದರ ಗಣ್ಯರಿಂದ ಪ್ರಂಶಸೆಯ ನ್ನು ಗಿಟ್ಟಿಿಸಿಕೊಂಡರು.
ಈ ಸಂದರ್ಭದಲ್ಲಿ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಹೆಚ್.ಡಿ. ಮಲ್ಹೋೋತ್ರ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ಇಲಾಖೆಯ ಎಲ್ಲಾ ಕಾರ್ಯ ದರ್ಶಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ಪಿ.ವಿವೇಕಾನಂದ ಮತ್ತಿಿತರರು ಇದ್ದರು.
ಸ್ಮಾರಕಗಳ ನಡುವೆ ಜಾನಪದ ಕಲಾ ಪ್ರದರ್ಶನ ಕಣ್ತುಂಬಿಕೊಂಡ ಕೇಂದ್ರ ಸಚಿವೆ

