ಸುದ್ದಿಮೂಲವಾರ್ತೆ
ಕೊಪ್ಪಳ ಜು 20:ಕಾಂಗ್ರೆಸ್ ಪಕ್ಷದ ಗ್ಯಾರಂಟಿಯಲ್ಲೊಂದಾಗ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿದೆ. ಇಂದಿನಿಂದ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದ್ದು. ಕೊಪ್ಪಳ ಜಿಲ್ಲೆಯಲ್ಲಿಯೂ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದೆ.
ಇಂದು ಬೆಳಿಗ್ಗೆಯಿಂದ ಅರ್ಜಿ ಹಾಕುವ ಪ್ರಕ್ರಿಯೆ ಆರಂಭವಾಗಿದ್ದು. ಬೇಗನೆ ಅರ್ಜಿ ಹಾಕಲು ಮಹಿಳೆಯರು ಬಂದಿದ್ದರು.ಸರದಿ ಸಾಲಿನಲ್ಲಿ ನಿಂತು ಅರ್ಜಿ ಹಾಕಿದರು.
ಕೊಪ್ಪಳ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಜಿಲ್ಲೆಯಲ್ಲಿ 3,56,566 ಫಲಾನುಭವಿಗಳಿದ್ದಾರೆ. ಅದರಲ್ಲಿ 27,284 ಎಪಿಎಲ್ ಕಾರ್ಡ್ ಫಲಾನುಭವಿಗಳು,2,91,699 ಬಿಪಿಎಲ್ ಕಾರ್ಡ್ ಫಲಾನುಭವಿಗಳಿದ್ದಾರೆ. ಅರ್ಜಿ ಹಾಕಲು ಜಿಲ್ಲೆಯಲ್ಲಿ 389 ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.ಗ್ರಾಮ ಒನ್,ಕರ್ನಾಟಕ ಒನ್,ಬಾಪೂಜಿ ಕೇಂದ್ರ,ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಸರಕಾರ 2000 ರೂಪಾಯಿಯಿಂದ ನಮಗೆ ಅನಕೂಲವಾಗಲಿದೆ.ಮನೆಯ ಖರ್ಚುಗಳನ್ನು ನಿಭಾಯಿಸಬಹುದು.ನಾವು ಮತ್ತೇ ಸಿದ್ದರಾಮಯ್ಯ ಗೆ ಮತ ಹಾಕುತ್ತೇವೆ ಎಂದ ಮಹಿಳೆಯರು ಹೇಳಿದ್ದಾರೆ.