ಸುದ್ದಿಮೂಲ ವಾರ್ತೆ ದೋಟಿಹಾಳ, ಏ.02:
ಪ್ರಸ್ತುತ ದಿನಗಳಲ್ಲಿ ಟಿವಿ, ಮೊಬೈಲ್ ಹಾವಳಿಯಿಂದ ಪೌರಾಣಿಕ ನಾಟಕ ಕಲೆ ಪ್ರದರ್ಶನ ಹಿನ್ನಡೆಯಾಗಿದೆ. ಗ್ರಾಮೀಣ ಭಾಗದವರು ಪೌರಾಣಿಕ ನಾಟಕಗಳನ್ನು ಉಳಿಸಿ ಬೆಳೆಸಲು ಕೈ ಜೋಡಿಸಬೇಕೆಂದು ಮಾಜಿ ತಾಪಂ ಸದಸ್ಯರಾದ ನ್ಯಾಯವಾದಿ ಮಹಾಂತೇಶ ಬಾದಾಮಿ ಅವರು ಮಾಡಿದರು.
ಇಲ್ಲಿಗೆ ಸಮೀಪದ ಜಾಲಿಹಾಳ ಗ್ರಾಮದಲ್ಲಿ ಶ್ರೀದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಇಂದ್ರಜೀತ ಕಾಳಗ ಎಂಬ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಟಕ ಕೇವಲ ಮನರಂಜನೆಗಾಗಿ ನೋಡದೆ ಅದರಲ್ಲಿ ಬರುವ ಸನ್ನಿವೇಶಗಳ ಹಿಂದಿನ ಒಳ್ಳೆಯ ಅಂಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವಾಗಬೇಕು ಎಂದರು.
ದೋಟಿಹಾಳ ಮುಖಂಡ ಲಾಡಸಾಬ ಕೊಳ್ಳಿ ಮಾತನಾಡಿ, ಇತ್ತೀಚೆಗೆ ಯುವಕರು ಮನರಂಜನೆಗಾಗಿ ಆರ್ಕೆಸ್ಟ್ರಾ ಟಿವಿ, ಸಿನಿಮಾ ಮನೋರಂಜನೆಗೆ ಹೋಗುತ್ತಿರುವುದೇ ರಂಗಭೂಮಿ ಕಲೆ ನಶಿಸಿ ಹೋಗುತ್ತಿದೆ ಎಂದು ಹೇಳಿದರು
ಈ ವೇಳೆ ದೊಡ್ಡಬಸವನಗೌಡ ಪಾಟೀಲ್, ಎಪಿಎಂಸಿ ಸದಸ್ಯ ಶಂಕರಗೌಡ ಪಾಟೀಲ್, ದೇವರಾಜ ಕಟ್ಟಿಮನಿ, ಕರಿಯಪ್ಪ ಪೂಜಾರ, ಬಸನಗೌಡ ಮಾಸ್ತರ, ಅಂದಯ್ಯ ಸ್ವಾಮಿ ಯಂಕನಗೌಡ ಇತರರು ಇದ್ದರು.