ಸುದ್ದಿಮೂಲ ವಾರ್ತೆ
ನೆಲಮಂಗಲ, ಅ. 11: ಸೋಂಪು ರ ಹೋಬಳಿ ನರಸೀಪುರ ಗ್ರಾಮ ಪಂಚಾಯಿತಿ ಸುತ್ತಮು ತ್ತಲಿನ ಗ್ರಾಮಗಳಲ್ಲಿ ಒಂದೇ ದಿನ ರಾತ್ರಿ ಮೂರು ದೇ ವಸ್ಥಾನಗಳಲ್ಲಿ ಕಳ್ಳತನ ನಡೆದಿದೆ.
ದೇವಸ್ಥಾನಗಳಲ್ಲಿ ಹುಂಡಿ ಎತ್ತಿಕೊಂಡು ಹೋಗಿರುವ ಕಳ್ಳರು ಲಕ್ಷ್ಮಿಪುರ ಮುಳ್ಕಟ್ಟಮ್ಮ ದೇವಸ್ಥಾನದಲ್ಲಿ ದೇವರ ತಾಳಿ ಬೆಳ್ಳಿ ಡಾಬು ಹಾಗೂ ಹುಂಡಿ ಎತ್ತಿಕೊಂಡು ಹೋಗಿದ್ದಾರೆ.
ಮಾಕೇನಹಳ್ಳಿ ಗ್ರಾಮದಲ್ಲಿ ಶನಿಮಹಾತ್ಮ ದೇವಸ್ಥಾನವಿದ್ದು, ದೇವಸ್ಥಾನ ಜೀರ್ಣೋದ್ಧಾರದ ದುಡ್ಡನ್ನು ಗ್ರಾಮಸ್ಥರು ಹುಂಡಿಯಲ್ಲಿ ಇಟ್ಟಿರುವುದರಿಂದ ಕಳ್ಳರು ಹುಂ ಡಿಯನ್ನು ಎತ್ತಿಕೊಂಡು ಹೋಗಿ ಸುಮಾರು 200 ಅಡಿ ದೂರದಲ್ಲಿ ಹೋಗಿ ಹುಂಡಿ ಹೊ ಡೆದು ಹುಂಡಿಯಲ್ಲಿದ್ದ ಸಾವಿರಾರು ರೂಪಾಯಿ ಹಣವ0ನ್ನು ದೋಚಿಕೊಂಡು ಹೋಗಿದ್ದಾರೆ. ಹುಂಡಿ ಪಕ್ಕದಲ್ಲಿ ಕುಳಿತು ಮದ್ಯಪಾನ ಮಾಡಿ ಹಲವು ಸಮಯ ಕಳೆದು ಮುಂದಿನ ಊರಿಗೆ ಕಾಲಿಟ್ಟಿದ್ದಾರೆ. ಅಲ್ಲೂ ಕೂಡ ಕಳ್ಳರು ಶನಿಮಹಾತ್ಮ ದೇವಸ್ಥಾನದಲ್ಲಿ ಬೆಳ್ಳಿಯ ಹಲವಾರು ಮೂರ್ತಿಗಳಿದ್ದು ಯಾವುದನ್ನು ಮುಟ್ಟದೆ ಅಲ್ಲಿಂದ ಮುಂದೆ ನಡೆದಿದ್ದಾರೆ.
ಸಣ್ಣಪ್ಪನಪಾಳ್ಯ ಗ್ರಾಮದಲ್ಲೂ ಸಹ ಮುಳ್ಳಕಟ್ಟಮ್ಮ ದೇವಸ್ಥಾನವಿದ್ದು, ಯಥಾ ರೀತಿ ದೇವಸ್ಥಾನದ ಹುಂಡಿ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಕಳ್ಳರ ಕಾಟ ಗ್ರಾಮಗಳಲ್ಲಿ ಜಾಸ್ತಿ ಆಗುತ್ತಿರುವುದರಿಂದ ಗ್ರಾಮದಲ್ಲಿ ಹಾಗೂ ತೋಟದಲ್ಲಿ ವಾಸವಾಗಿರುವವರಿಗೆ ಕಳ್ಳರ ಬಯ ಶುರುವಾಗಿದೆ.
ನರಸೀಪುರ ಗ್ರಾಮಸ್ಥರ ಬೇಡಿಕೆ ನರಸೀಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಪೊಲೀಸ್ ಚೌಕ ಸ್ಥಾಪಿಸಬೇಕು. ಸುತ್ತಮುತ್ತಲಿನ ಗ್ರಾಮಗಳಿಗೆ ಸ್ವಲ್ಪನಾದರೂ ಭದ್ರತೆ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.