ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.1:
ಏಡ್ಸ್ ಅಪಾಯಕಾರಿ ಕಾಯಿಲೆಯಾಗಿದ್ದು, ಇದಕ್ಕೆೆ ಚಿಕಿತ್ಸೆೆಗಿಂತ ಮೊದಲು ಮುಂಜಾಗ್ರತೆ ಕ್ರಮವಹಿಸುವುದು ಅತ್ಯಾಾವಶ್ಯಕ ಎಂದು ಜಿಲ್ಲಾಾ ಕಾನೂನು ಸೇವೆಗಳ ಪ್ರಾಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಾಯಾಧೀಶ ರಾಜೇಶ್.ಎನ್ ಹೊಸಮನೆ ಅವರು ತಿಳಿಸಿದ್ದಾಾರೆ.
ರಾಜ್ಯ ಏಡ್ಸ್ ಪ್ರಿಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಾಡಳಿತ, ಜಿಲ್ಲಾಾ ಪಂಚಾಯತ್, ಜಿಲ್ಲಾಾ ಕಾನೂನು ಸೇವೆಗಳ ಪ್ರಾಾಧಿಕಾರ, ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ, ಬಳ್ಳಾಾರಿ ಜಿಲ್ಲಾಾ ಆಸ್ಪತ್ರೆೆ ಇವರ ಸಂಯುಕ್ತಾಾಶ್ರಯದಲ್ಲಿ ‘ಹೆಚ್ಐವಿ/ಏಡ್ಸ್ ಹರಡುವಿಕೆಯನ್ನು ನಿಯಂತ್ರಿಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ ಘೋಷವಾಕ್ಯದಡಿ ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ದಿನಾಚರಣೆಯನ್ನು ಉದ್ಘಾಾಟಿಸಿ ಅವರು ಮಾತನಾಡಿದರು.
ಮಾರಕ ರೋಗಗಳಲ್ಲಿ ಜಗತ್ತನ್ನೇ ಕಾಡಿದ ರೋಗಗಳಲ್ಲಿ ಏಡ್ಸ್ ರೋಗವು ಒಂದು. 1981 ರಲ್ಲಿ ಆಫ್ರಿಿಕಾ ಖಂಡದಲ್ಲಿ ಕಾಣಿಸಿಕೊಂಡ ಈ ರೋಗ ಕ್ರಮೇಣವಾಗಿ 1984ರಲ್ಲಿ ಭಾರತದಲ್ಲಿಯೂ ಕಂಡುಬಂದಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಗಳ ಈ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಿ ಹೆಚ್.ಐ.ವಿ ಸೋಂಕಿತರಿಗೆ ಹಲವು ರೀತಿಯ ಸೌಲಭ್ಯಗಳ ಮುಖಾಂತರ ನೆರವಾಗಲು ಮುಂದಾದವು ಎಂದು ಹೇಳಿದರು.
2013 ರ ಅಂಕಿ-ಸಂಖ್ಯೆೆಗಳ ಪ್ರಕಾರ ದೇಶದಲ್ಲಿ 38 ಲಕ್ಷ ಮಂದಿ ಹೆಚ್ಐವಿ ಸೋಂಕಿತರಿದ್ದು, ಪ್ರಪಂಚದಲ್ಲಿ 3.8 ಕೋಟಿ ಮಂದಿ ಏಡ್ಸ್ ರೋಗದಿಂದ ಬಳಲುತ್ತಿಿದ್ದಾಾರೆ. ಸಮಾಜದಲ್ಲಿರುವ ಎಲ್ಲರೂ ಒಂದಾಗಿ ಏಡ್ಸ್ ವಿರುದ್ಧ ಜಾಗೃತಿಯೊಂದಿಗೆ ಹೋರಾಡಿದರೆ ಹೆಚ್.ಐ.ವಿ ವೈರಸ್ ಅನ್ನು ಮುಕ್ತಗೊಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣಾಧಿಕಾರಿ ಡಾ. ಯಲ್ಲಾಾ ರಮೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ, ಹೆಚ್ಐವಿ/ಏಡ್ಸ್ ನಿರ್ಮೂಲನೆಗಾಗಿ ಶ್ರಮಿಸುತ್ತಿಿರುವ ಸರ್ಕಾರಿ ಮತ್ತು ಶಾಸಗಿ ಸಂಸ್ಥೆೆಗಳ ಸೇವೆ ಅಪಾರವಾಗಿದೆ ಎಂದು ಅಭಿನಂದಿಸಿದರು.
ಜಿಲ್ಲಾಾ ಕ್ಷಯರೋಗ ನಿರ್ಮೂಲನಾಧಿಕಾರಿ ಮತ್ತು ಜಿಲ್ಲಾಾ ಏಡ್ಸ್ ನಿಯಂತ್ರಣಾಧಿಕಾರಿಯೂ ಆದ ಡಾ.ಇಂದ್ರಾಾಣಿ ವಿ ಅವರು ಪ್ರಾಾಸ್ತಾಾವಿಕವಾಗಿ ಮಾತನಾಡಿ, ಜಿಲ್ಲೆೆಯಲ್ಲಿ 4,53,000 ಜನರಿಗೆ ಹೆಚ್ಐವಿ ಪರೀಕ್ಷೆ ನಡೆಸಲಾಗಿದ್ದು,
13,692 ಮಂದಿಗೆ ಸೋಂಕು ಇರುವುದು ದೃಢವಾಗಿದೆ. 2,127 ಗಂಡು, 2,704 ಹೆಣ್ಣು, 34 ಲಿಂಗತ್ವ ಅಲ್ಪಸಂಖ್ಯಾಾತರು, 329 ಮಕ್ಕಳು ಒಳಗೊಂಡು 5194 ಮಂದಿ ಎಆರ್ಟಿ ಚಿಕಿತ್ಸಾಾ ಕೇಂದ್ರದಲ್ಲಿ ಚಿಕಿತ್ಸೆೆ ಪಡೆದುಕೊಳ್ಳುತ್ತಿಿದ್ದಾಾರೆ ಎಂದು ಹೇಳಿದರು.
ಅದೇರೀತಿಯಾಗಿ 2025ರ ಏಪ್ರಿಿಲ್ ನಿಂದ ಇಲ್ಲಿಯವರೆಗೆ 25,099 ಗರ್ಭಿಣಿ ಮಹಿಳೆಯರನ್ನು ಹೆಚ್ಐವಿ ಪರೀಕ್ಷೆಗೆ ಒಳಪಡಿಸಿದ್ದು, ಹೊಸದಾಗಿ 06 ಮಂದಿ ಗರ್ಭೀಣಿ ಮಹಿಳೆಯರಲ್ಲಿ ಸೋಂಕು ಪಾಸಿಟಿವ್ ಆಗಿದೆ. ಎಆರ್ಟಿ ಕೇಂದ್ರದಲ್ಲಿ 28 ಗರ್ಭಿಣಿ ಮಹಿಳೆಯರಿದ್ದು 15 ಜನರ ಮಕ್ಕಳಿಗೆ ಪರೀಕ್ಷೆ ಕೈಗೊಂಡಿದ್ದು, 02 ಮಕ್ಕಳಿಗೆ 18 ತಿಂಗಳ ಕಳೆದ ಮೇಲೆ ಸೋಂಕು ದೃಢಪಟ್ಟಿಿದೆ. ಇದರಿಂದ ಮುಂದಿನ ದಿನಗಳಲ್ಲಿ ತಾಯಿಯಿಂದ ಮಗುವಿಗೆ ಹರಡುವ ಸೋಂಕನ್ನು ತಡೆಯಬೇಕಿದೆ. ಅದೇರೀತಿಯಾಗಿ 2030ರ ವೇಳೆಗೆ ಹೊಸ ಹೆಚ್ಐವಿ ಸೋಂಕು ಪ್ರಕರಣಗಳನ್ನು ಶೂನ್ಯಕ್ಕೆೆ ತರಲು ಶ್ರಮಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲಾಾ ಶಸಚಿಕಿತ್ಸಕ ಡಾ.ಎನ್.ಬಸರೆಡ್ಡಿಿ ಅವರು, ಏಡ್ಸ್ ವ್ಯಕ್ತಿಿಯ ರೋಗನಿರೋಧಕ ಶಕ್ತಿಿಯನ್ನು ಎಷ್ಟರ ಮಟ್ಟಿಿಗೆ ದುರ್ಬಲಗೊಳಿಸುತ್ತದೆಯೆಂದರೆ ದೇಹವು ಸಣ್ಣ ಸೋಂಕುಗಳ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಇದು ಸೋಂಕುಗಳ ಹೆಚ್ಚಳಕ್ಕೆೆ ಮತ್ತು ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ. ಹಾಗಾಗಿ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣವು ನಿರ್ಣಾಯಕವಾಗಿದೆ ಎಂದು ಹೇಳಿದರು.
ಅಮೇರಿಕಾದ ಗಿಲಿಯಾಡ್ ಸೈನ್ಸಸ್ ಔಷಧ ಸಂಸ್ಥೆೆ ಲೆನಾಕಪವಿರ್ (ಯೆಜ್ಟುಗೊ) ಚುಚ್ಚುಮದ್ದನ್ನು ಅಭಿವೃದ್ಧಿಿಪಡಿಸಿದ್ದು, ಪ್ರಾಾಯೋಗಿಕ ಹಂತದಲ್ಲಿದೆ. ಈ ಕುರಿತು ದಿನಪತ್ರಿಿಕೆಯೊಂದರಲ್ಲಿ ವರದಿಯಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಬಳಿಕ ಕಾರ್ಯಕ್ರಮದಲ್ಲಿ ಜಿಲ್ಲೆೆಯಲ್ಲಿ ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಗಣನೀಯ ಸೇವೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡ ಕೆ.ಎಸ್.ಎ.ಪಿ.ಎಸ್ ಸಿಬ್ಬಂದಿಗಳು, ಸ್ವಯಂ ಸೇವಾ ಸಂಸ್ಥೆೆಗಳ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಜಿಲ್ಲಾಾ ಅಸಾಂಕ್ರಾಾಮಿಕ ಅಧಿಕಾರಿ ಡಾ.ವೀರೇಂದ್ರ ಕುಮಾರ್, ಎಆರ್ ಟಿ ವೈದ್ಯಾಾಧಿಕಾರಿ ಡಾ.ದಿನೇಶ್ ಗುಡಿ, ರಾಜ್ಯ ಸಂಯೋಜಕ ರಮೇಶ್, ನಿತ್ಯಜೀವನ ಸಂಸ್ಥೆೆಯ ಅಧ್ಯಕ್ಷರಾದ ಹೇಮಲತ, ಡ್ಯಾಾಪ್ಕುು ಜಿಲ್ಲಾಾ ಮೇಲ್ವಿಿಚಾರಕ ಬಿ.ಗಿರೀಶ್, ಪ್ರಭಾರ ಜಿಲ್ಲಾಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಬಿಎಂಸಿಆರ್ ಸಿ ವೈದ್ಯಾಾಧಿಕಾರಿ ಡಾ.ಸಂಗೀತ ಸೇರಿದಂತೆ ಮೈತ್ರಿಿ, ಸಂಗಮ, ಸೌಖ್ಯ ಬೆಳಕು ಸಂಸ್ಥೆೆಗಳ ಪದಾಧಿಕಾರಿಗಳು, ವಿವಿಧ ರಕ್ತಕೇಂದ್ರದ ಅಧಿಕಾರಿಗಳು, ಐಟಿಸಿಟಿ, ಎನ್ಟಿಪಿ, ಎಆರ್ಟಿ ಸಿಬ್ಬಂದಿ, ಇಲಾಖೆಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿಿತರಿದ್ದರು.
ಗಮನ ಸೆಳೆದ ಜಾಥಾ:
ಏಡ್ಸ್ ತಡೆಗಟ್ಟಲು ಅರಿವು ಮೂಡಿಸುವ ಜಾಥಾವು ನೋಡುಗರ ಗಮನ ಸೆಳೆಯಿತು. ಜಾಥಾವು ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ಕಚೇರಿ ಮುಂಭಾಗದಿಂದ ಆರಂಭಗೊಂಡು ಸಂಗಂ ವೃತ್ತ- ರಾಘವೇಂದ್ರ ಸಿನಿಮಾ ಮಂದಿರ ರಸ್ತೆೆ- ಕೆ.ಸಿ.ರಸ್ತೆೆ- ಮೀನಾಕ್ಷಿ ವೃತ್ತದ ಮೂಲಕ ಹಳೆಯ ಜಿಲ್ಲಾಾಧಿಕಾರಿಗಳ ಕಚೇರಿ ಮುಂಭಾಗದಿಂದ ಗಡಿಗಿ ಚೆನ್ನಪ್ಪ ವೃತ್ತ- ಸಂಗಂ ವೃತ್ತದ ಮಾರ್ಗವಾಗಿ ಮರಳಿ ಜಿಲ್ಲಾಾ ಆಸ್ಪತ್ರೆೆಯ ಆವರಣಕ್ಕೆೆ ತಲುಪಿ ಅಂತ್ಯಗೊಂಡಿತು.
ಈ ವೇಳೆ ವಿದ್ಯಾಾರ್ಥಿಗಳು, ಸ್ವಯಂ ಸೇವಾ ಸಂಸ್ಥೆೆಗಳ ಸದಸ್ಯರು, ಕಾರ್ಯಕರ್ತರು ಸಾರ್ವಜನಿಕರು ಏಡ್ಸ್ ಕಾಯಿಲೆಯ ವಿರುದ್ದ ಜಾಗೃತಿ ಮೂಡಿಸುವ ಲಕಗಳನ್ನು ಹಾಗೂ ಬ್ಯಾಾನರ್ ಗಳನ್ನು ಪ್ರದರ್ಶಿಸಿದರು. ಈ ವೇಳೆ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ, ಜಾಗೃತಿ ಮೂಡಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ 13,692 ಏಡ್ಸ್ ಸೋಂಕಿತರಿದ್ದಾರೆ

