ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.11:ರಾಜ್ಯದಲ್ಲಿ ಶೇ 1 ಕ್ಕಿಂತ ಹೆಚ್ಚು ಜನ ವಿಶ್ವಕರ್ಮ ಜನರಿದ್ದಾರೆ. ದೇಶದಲ್ಲಿ 10 ಕೋಟಿ ಜನರಿದ್ದಾರೆ.
ವಿಶ್ವಕರ್ಮರು ರೈತರಿಗೆ ನಾಗರಿಕರಿಗೆ ಬೆನ್ನಲುಬಾಗಿ ನಿಂತಿದೆ. ಪ್ರತಿ ಸಮಾಜಕ್ಕೆ ಸಂವಿದಾನ ಬದ್ದವಾಗಿ ಸಿಗಬೇಕಾದರೆ ಅವರಿಗೆ ಮೀಸಲಾತಿ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಕೆ ಪಿ ನಂಜುಂಡಿ ಹೇಳಿದರು.
ಅವರು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು, ಕಾಯಕ ಸಮಾಜದ ನಿರ್ಲಕ್ಷಿತರಿಗೆ ಸಂವಿದಾನದಲ್ಲಿ ಮೀಸಲಾತಿ ನೀಡಬೇಕು. ಸರಕಾರ ಸೌಲಭ್ಯ ನೀಡುವ ಆಶೀರ್ವಾದವಿಲ್ಲ. ಸಮಾಜವು ನಿಂತ ನೀರಾಗಿದೆ. ಸಮಾಜದಿಂದ ಹೋರಾಟ ಫಲವಾಗಿ ಜಯಂತಿಗಳನ್ನು ಆಚರಿಸಲು ಸಾಧ್ಯವಾಗಿದೆ.
ರಾಜ್ಯದಲ್ಲಿ ಬೆಳೆದಿರುವ ಸಮಾಜಗಳೇ ಬೆಳೆದಿವೆ. ಆದರೆ ಕುಲಕಸಬು ಮಾಡುವ ಅಲ್ಲಿಯೇ ಉಳಿದಿವೆ. ದೇವರಾಜ್ ಕಾಲದಲ್ಲಿ ನಿರ್ಲಕ್ಷ್ಯಕ್ಕೊಳಗಾದವರು ಮೀಸಲಾತಿ ನೀಡಬೇಕು. ಆದರೆ ವಿಶ್ವಕರ್ಮ ಸಮಾಜವು ಹಿಂದುಳಿದ ಆಯೋಗದ ಮುಂದೆ ಮಾಹಿತಿ ನೀಡಲು ವಿಫಲವಾಗಿದೆ. ಹಿಂದುಳಿದ ವರ್ಗಗಳಲ್ಲಿ ಎಂತೆಂಥ ಸಿಂಹ ಹುಲಿಗಳ ಸಮಾಜದವರು ಇದ್ದಾರೆ. ನಮಗೆ ಮೀಸಲಾತಿ ಕೇಳುವ ಶಕ್ತಿ ಇದ್ದಿಲ್ಲ ಎಂದರು.
ದೇವರುಗಳನ್ನು ಮಾಡುವ ಸಮಾಜದವರು ಈಗ ಹೊಟೆಲ್ ಗಾರೆ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಶಕ್ತಿ ಇಲ್ಲದೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಈ ಸರಕಾರದಲ್ಲಿಯೂ ಕುಲಶಾಸ್ತ್ರ ಅಧ್ಯಯನದ ವರದಿಯ ನಂತರ ಮೀಸಲಾತಿ ನೀಡುವ ಭರವಸೆ ಇದೆ.
ಮೀಸಲಾತಿ ನೀಡುವಾಗ ಸಮಾಜದವರು ತಮ್ಮ ನೈಜತೆಯ ಜೀವನದ ಬಗ್ಗೆ ಹೇಳಲಿ. ಇನ್ನೂ ಐದು ವರ್ಷದಲ್ಲಿ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವ ಭರವಸೆ ಇದೆ. ಕುಲಕಸಬುಗಳಿಗೆ ಪ್ರೋತ್ಸಾಹ ನೀಡಬೇಕು. ಈ ಕುರಿತು ರಾಜ್ಯಾದಾದ್ಯಂತ ಹೊಬಳಿ ಮಟ್ಟದಲ್ಲಿ ಸಮಾಜದ ಸಮಾವೇಶ ಮಾಡಲಾಗುತ್ತಿದೆ ಎಂದರು.
ರಾಜಕೀಯ ಬಲಿಷ್ಠವಾಗಿರುತ್ತೊ ಅಲ್ಲಿ ಅವರ ಮಾತುಗಳನ್ನು ಸರಕಾರ ಕೇಳುತ್ತಿವೆ. ಆದರೆ ಸಣ್ಣ ಸಮಾಜಗಳಿಗೆ ಧ್ವನಿಗಳಿಲ್ಲದೆ ಸರಕಾರ ಮಾತನಾಡುತ್ತಿಲ್ಲ. ಸಮಾಜಕ್ಕಾಗಿ ನಾನು ಸದನದಲ್ಲಿ ಗಟ್ಟಿಯಾಗಿ ಮಾತನಾಡುತ್ತೇನೆ ಆದರೆ ಸಂಬಂಧಿಸಿದ ಮಂತ್ರಿಗಳನ್ನು ಅಲ್ಲಿ ಮೊಟುಕುಗೊಳಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಕಾಶ ಮಂಗಳೂರು ಜಿಲ್ಲಾ ಗೌರವಾಧ್ಯಕ್ಷ, ಜಯರಾಂ ಪತ್ತಾರ, ಮೌನೇಶ. ಮಂಜುಳಾ ಜಿಲ್ಲಾ ಮಹಿಳಾ ಅಧ್ಯಕ್ಷೆ