ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಕಡ್ಡಾಾಯವಾಗಿ ನಿರ್ವಹಣೆ ಆಗಲೇಬೇಕಾದ ನೌಕರರ ಹಾಜರಾತಿ ವಹಿ, ಚಲನವಹಿ, ನಗದು ವಹಿಗಳನ್ನು ಸರಿಯಾಗಿ ನಿರ್ವಹಿಸದೇ ಲೋಪ ಎಸಗುತ್ತಿಿರುವುದರ ಕುರಿತು ಲೋಕಾ ತಂಡದ ಕಾರ್ಯಾಚರಣೆ ವೇಳೆ ಕಂಡು ಬಂದಿದೆ ಎಂದು ಕರ್ನಾಟಕ ಲೋಕಾಯುಕ್ತರ ಕಾರ್ಯದರ್ಶಿ ಕೆ.ಶ್ರೀನಾಥ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುತಿನ ಚೀಟಿ ಧರಿಸದೆ ಕೆಲಸ ನಿರ್ವಹಣೆ ಮಾಡುತ್ತಿಿದ್ದಾರೆ. ಗ್ರೂಪ್ ಡಿ ಸೇರಿದಂತೆ ಬೇರೆ ಬೇರೆ ಸಿಬ್ಬಂದಿಗೆ ನಿಗದಿಪಡಿಸಿದ ಡ್ರೆೆಸ್ ಕೋಡ್ ಪಾಲನೆಯಾಗಿಲ್ಲ. ಕಚೇರಿಗೆ ಹೋದಾಗ ಯಾರು ಏನು ಎಂದು ಏನೂ ತಿಳಿಯುವುದಿಲ್ಲ. ಬಹುತೇಕ ಕಚೇರಿಗಳಲ್ಲಿ ನೇಮ್ ಪ್ಲೇಟ್ ಕಾಣಿಸಲಿಲ್ಲ. ಇದು ಕೂಡಲೇ ಸರಿಯಾಗಬೇಕು.
ಈ ಬಗ್ಗೆೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು ಎಂದು ಅವರು ಕಟ್ಟುನಿಟ್ಟಿಿನ ನಿರ್ದೇಶನ ನೀಡಿದರು. ಸರ್ಕಾರಿ ನೌಕರರಿಗೆ ಅನ್ವಯಿಸುವ ಎಲ್ಲಾಾ ನಿಯಮಗಳು ಹೊರಗುತ್ತಿಿಗೆ ನೌಕರರಿಗೂ ಸಹ ಅನ್ವಯಿಸುತ್ತವೆ. ಆದಾಗ್ಯೂ ಹೊರಗುತ್ತಿಿಗೆ ನೌಕರರ ಹಾಜರಾತಿ ವಹಿ ಬಹುತೇಕ ಕಚೇರಿಗಳಲ್ಲಿ ನಿರ್ವಹಣೆ ಮಾಡಿಲ್ಲಾಾ ಎಂದು ಬೇಸರ ವ್ಯಕ್ತಪಡಿಸಿದರು.
ಬೇರೆ ಇಲಾಖೆಗಳಲ್ಲಿನ ಲೋಪದ ಬಗ್ಗೆೆ ಲೋಕಾಯುಕ್ತರು ನೀಡಿದ ಪಟ್ಟಿಿಯ ಮೇಲೆ ತಾವು ತಮ್ಮ ಹಂತದಲ್ಲಿ ಆಗುವುದನ್ನು ತ್ವರಿತವಾಗಿ ಸರಿಪಡಿಸುವುದಾಗಿ ಜಿಲ್ಲಾಧಿಕಾರಿ ನಿತೀಶ್ ಕೆ ಅವರು ತಿಳಿಸಿದರು. ಶುದ್ಧ ಕುಡಿವ ನೀರಿನ ಘಟಕಗಳ ದುರಸ್ಥಿಿಗೆ ಹೆಚ್ಚಿಿನ ಒತ್ತು ಕೊಡುವುದಾಗಿ ಅವರು ಹೇಳಿದರು. ಮುಂದಿನ ವಾರ ಎಲ್ಲ ಅಧಿಕಾರಿಗಳ ಸಭೆ ಕರೆದು ಪುನಃ ಚರ್ಚಿಸುವುದಾಗಿ ತಿಳಿಸಿದರು.
ಲೋಕಾಯುಕ್ತ ಭೇಟಿಯ ಬಿಸಿ ಇಲ್ಲಿಗೆ ಮುಗಿಯುವುದಿಲ್ಲ. ತಪ್ಪಿಿತಸ್ಥರಿಗೆ ಇನ್ನು ಮುಂದೆ ನೊಟೀಸ್ ಬರುತ್ತವೆ. ಅಧಿಕಾರಿಗಳು ನೊಟೀಸ್ಗಳ ಹಗುರವಾಗಿ ಪರಿಗಣಿಸದೇ ಕೂಡಲೇ ಉತ್ತರ ನೀಡಬೇಕು. ಪ್ರಕರಣ ಗಂಭೀರ ಸ್ವರೂಪ ಹೊಂದಿದ್ದಲ್ಲಿ ಕ್ರಿಿಮಿನಲ್ ಪ್ರಕರಣ ಎದುರಿಸಬೇಕು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕ ಎ.ವಿ.ಪಾಟೀಲ, ರಾಯಚೂರು ಜಿಲ್ಲಾ ಕರ್ನಾಟಕ ಲೋಕಾಯುಕ್ತದ ಅಧೀಕ್ಷಕ ಸತೀಶ್ ಎಸ್ ಚಿಟಗುಬ್ಬಿಿ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಕ್ಷಗಿರಿ, ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮಹೋಪಾತ್ರ, ಲೋಕಾಯುಕ್ತದ ಡಿವೈಎಸ್ಪಿಿ ರವಿ ಪುರುಷೋತ್ತಮ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿಿತರಿದ್ದರು.
ಅಧಿಕಾರಿ, ಸಿಬ್ಬಂದಿಗಳಲ್ಲಿ ಶಿಸ್ತೇ ಇಲ್ಲ – ಶ್ರೀನಾಥ ಅಸಮಾಧಾನ

