ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.14: ಅಮ್ ಆದ್ಮಿ ಪಕ್ಷದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಕಾಳಪ್ಪ ಅವರು ಇಂದು ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಮತ್ತು ಬೆಂಗಳೂರಿನ ಸಜ್ಜನ್ ರಾವ್ ವೃತ್ತದಲ್ಲಿ ಪಕ್ಷದ ಕಛೇರಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು.
ಕಳೆದ ಎರಡು ದಿನಗಳಿಂದ ಬಿಜೆಪಿ ಪಕ್ಷದಿಂದ ಉದಯ್ ಗರುಡಾಚಾರ್ ಮತ್ತು ಕಾಂಗ್ರೆಸ್ ಪಕ್ಷದಿಂದ ಎರೆಡು ಅಭ್ಯರ್ಥಿಗಳು ಕಣಕ್ಕೆ ಇಳಿಸಿದ್ದಾರೆ. ಮೊದಲು ವಿಶ್ಲೇಷಕರು ಅಮ್ ಆದ್ಮಿ ಪಕ್ಷಕ್ಕೆ 20 ಸಾವಿರದಿಂದ 25 ಸಾವಿರ ಮತಗಳು ಬೀಳಬಹುದು ಎಂದು ಹೇಳುತ್ತಿದ್ದರು. ಆದರೆ ಈಗ ಕಳೆದ ಎರೆಡು – ಮೂರು ದಿನಗಳಿಂದ ಖುದ್ದು ವಿಶ್ಲೇಷಕರೇ 35 ಸಾವಿರದಿಂದ 40 ಸಾವಿರ ಬರುತ್ತವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಭಾವ ಬೀರಲಿದ್ದು ಚಿಕ್ಕಪೇಟೆ ಕ್ಷೇತ್ರದಲ್ಲಿ ಅಮ್ ಆದ್ಮಿ ಪಾರ್ಟಿ ಜಯಗಳಿಸಲಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಇಂದು ನಡೆದ ಬೈಕ್ ರ್ಯಾಲಿಯಲ್ಲೂ ಕೂಡ ಜನರಿಂದ ಅದ್ಭುತವಾದ ಪ್ರತಿಕ್ರಿಯೆ ಬಂದಿದೆ. ಜನರು ಸ್ವತಃ ಅವರೇ ಬಂದು ನಮಗೆ ಬದಲಾವಣೆ ಬೇಕಾಗಿದೆ ಎಂದು ಹೇಳುತ್ತಿದ್ದಾರೆ. ಯಾಕಂದರೆ ಈ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಚಾರ ತಾಂಡವವಾಡ್ತಾ ಇದೆ. ಯಾವುದೇ ಕಾಮಕಾರಿಗೆ ಹಣ ಬಿಡುಗಡೆ ಆಗಬೇಕು ಅಂದ್ರೆ ಕಾಂಗ್ರೆಸ್ ಪಕ್ಷದವರು 5 ಲಕ್ಷ ಕೇಳುತ್ತಿದ್ದರು. ಈಗ ಬಿಜೆಪಿ ಸರ್ಕಾರ 25 ಲಕ್ಷ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕ್ಷೇತ್ರದಲ್ಲಿ ಕುಡಿಯೋ ನೀರು ಕಲುಷಿತವಾಗುತ್ತಿದೆ. ಬೆಂಗಳೂರಿನ ಹೃದಯ ಭಾಗ ಅಂತ ಹೇಳ್ತಾರೆ ಆದ್ರೆ ಇಲ್ಲಿ ನೋಡಿದ್ರೆ ಒಂದು ಅಭಿವೃದ್ಧಿಯ ಕೆಲಸಗಳು ಆಗಿಲ್ಲ. ಹಾಗಾಗಿ ಈ ಬಾರೀ ಚುನಾವಣೆಯಲ್ಲಿ ಇಲ್ಲಿಯ ಮತದಾರರು ಬದಲಾವಣೆಯನ್ನ ಬಯಸುತ್ತಿದ್ದಾರೆ. ನಮ್ಮ ಪಕ್ಷವನ್ನ ಗೆಲ್ಲಿಸುತ್ತಾರೆ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದ್ದಾರೆ.