ಸುದ್ದಿಮೂಲವಾರ್ತೆ
ಕೊಪ್ಪಳ ಜು 20:ಕೊಪ್ಪಳ ನಗರಸಭೆಗೆ ಬರುವ ಸಾರ್ವಜನಿಕರ ಅನುಕೂಲ ಹಾಗು ಸಿಬ್ಬಂದಿಗಳ ಅನುಕೂಲಕ್ಕಾಗಿ ನಗರಸಭೆ ನವೀಕರಣ ಮಾಡಲು ಸಿದ್ದತೆ ನಡೆಸಿದೆ. ಆದರೆ ಇದರಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಂದು ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ ತಿಳಿಸಿದ್ದಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಅಂದಾಜು 2.50 ಕೋಟಿ ರೂಪಾಯಿಯಲ್ಲಿ ನವೀಕರಣ ಮಾಡಲು ಯೋಜನೆ ಸಿದ್ದವಾಗಿದೆ. ಈ ಮುನ್ನ ಅಧ್ಯಕ್ಷ ವಿವೇಚನ ಬಳಸಿ 48 ಲಕ್ಷ ರೂಪಾಯಿಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಆದರೆ ಇಲ್ಲಿ ಯಾವುದೇ ಹಣ ವ್ಯವಾಹಾರವಾಗಿಲ್ಲ ಇನ್ನೂ ಅವ್ಯವಾಹಾರ ಹೇಗಾತ್ತೆ ಎಂದು ಪ್ರಶ್ನಿಸಿದರು.
ನಗರಸಭೆಗೆ ನಿತ್ಯ ಮಹಿಳೆಯರು ಬರುತ್ತಾರೆ. ಅವರಿಗೆ ಮೂಲಭೂತ ಒದಗಿಸಲು, ಮಹಿಳಾ ಸಿಬ್ಬಂದಿಗಳಿಗೆ ಶೌಚಾಲಯ. ರೆಸ್ಟ್ ರೂಮ್ ಸೇರಿದಂತೆ ಮೂಲಭೂತ ಸೌಲಭ್ಯ ನೀಡುವ ಉದ್ದೇಶದಿಂದ ನವೀಕರಣ ಮಾಡಲಾಗುತ್ತಿದೆ. ನವೀಕರಣಕ್ಕಾಗಿ ಸೋಮಣ್ಣ ಹಳ್ಳಿ ಹೊರತು ಪಡಿಸಿ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ನಗರಸಭೆಯ ಪೌರಾಯುಕ್ತರು ಮಾಹಿತಿ ನೀಡಬೇಕಾಗಿತ್ತು. ಅವರು ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಈ ಗೊಂದಲವಾಗಿದೆ. ನಗರಸಭೆಯ ಎಲ್ಲಾ ಪಕ್ಷದವರು ನಗರಸಭೆ ನವೀಕರಣಕ್ಕೆ ಒಪ್ಪಿಗೆ ಇದೆ. ಹೀಗಾಗಿ ನವೀಕರಣ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಹೇಂದ್ರ ಚೋಪ್ರಾ ಇದ್ದರು.