ವಾಲ್ಮೀಕಿ ನಿಗಮ ಅಕ್ರಮದ ಬಗ್ಗೆೆ ಪರಿಷತ್ತಿನಲ್ಲಿ ಉತ್ತರ: ಪ್ರತಿಪಕ್ಷ ಅಡ್ಡಿ- ಲಿಖಿತ ಉತ್ತರ ಮಂಡನೆ
ಸುದ್ದಿಮೂಲ ವಾರ್ತೆ ಬೆಂಗಳೂರು, ಜು.22:
ಮಹರ್ಷಿ ವಾಲ್ಮೀಕಿ ಅಭಿವೃದ್ಧಿಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಹಾಗಿದ್ದ ಮೇಲೆ ನಾನೇಕೆ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಪ್ರತಿಪಕ್ಷದ ವಿರುದ್ಧವೇ ಮುಗಿಬಿದ್ದರು.
ವಿಧಾನ ಪರಿಷತ್ನಲ್ಲಿಂದು ನಿಯಮ 68 ರಡಿ ಬಿಜೆಪಿ ಮತ್ತು ಜೆಡಿಎಸ್ ಮಂಡಿಸಿದ್ದ ನಿಲುವಳಿ ಸೂಚನೆ ಮೇಲೆ ಸುದೀರ್ಘ ಉತ್ತರ ನೀಡಿದ ಮುಖ್ಯಮಂತ್ರಿಿ ಸಿದ್ದರಾಮಯ್ಯ, ವಾಲ್ಮೀಕಿ ಹಗರಣದಲ್ಲಿ ಹಗರಣ ನಡೆದೇ ಇಲ್ಲ ಎಂದು ನಾನು ಹೇಳುತ್ತಿಿಲ್ಲ. ಹಗರಣ ಆಗಿದೆ. ಈಗಾಗಲೇ ತನಿಖೆಯೂ ನಡೆಯುತ್ತಿಿದೆ. ತಪ್ಪಿಿತಸ್ಥರಿಗೆ ಶಿಕ್ಷೆ ಕೊಡಿಸುವುದರಲ್ಲಿ ಯಾವುದೇ ರಾಜೀ ಇಲ್ಲ. ಆದರೆ, ಈ ಹಗರಣಕ್ಕೂ ನನಗೂ, ಕಾಂಗ್ರೆೆಸ್ ಪಕ್ಷಕ್ಕೂ ಸಂಬಂಧ ಇಲ್ಲ. ಹೀಗಾಗಿ ರಾಜೀನಾಮೆ ಕೊಡುವ ಪ್ರಶ್ನೆೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಿಗಳ ಉತ್ತರಕ್ಕೆೆ ಸಿಡಿಮಿಡಿಗೊಂಡ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು, ಅವರ ಉತ್ತರಕ್ಕೆೆ ಅಡ್ಡಿಿಪಡಿಸಿದ್ದರಿಂದ ಸದನದಲ್ಲಿ ಕೋಲಾಹಲ, ಗದ್ದಲ, ಮಾತಿನ ಚಕಮಕಿ, ಆರೋಪ, ಪ್ರತ್ಯಾಾರೋಪ ನಡೆಯಿತು.
ಈ ವೇಳೆ ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿ, ಹಗರಣ ನಡೆದಿರುವುದು ಸುಳ್ಳಾಾದರೆ ಮಾಜಿ ಸಚಿವ ಬಿ.ನಾಗೇಂದ್ರ ತಮ್ಮ ಸ್ಥಾಾನಕ್ಕೆೆ ರಾಜೀನಾಮೆ ನೀಡಿದ್ದು ಏಕೆ? ಶಾಸಕ ಬಸನಗೌಡ ದದ್ದಲ್ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿಿರುವುದು ಏಕೆ ಎಂದು ಪ್ರಶ್ನಿಿಸಿದರು. ಇದಕ್ಕೆೆ ದನಿಗೂಡಿಸಿದ ಬಿಜೆಪಿಯ ಎನ್.ರವಿಕುಮಾರ್, ಮುಖ್ಯಮಂತ್ರಿಿಗಳು ಹಗರಣ ನಡೆದಿಲ್ಲ ಎಂದು ಸದನಕ್ಕೆೆ ಸುಳ್ಳು ಹೇಳುತ್ತಿಿದ್ದಾರೆ ಎಂದರು. ಇದಕ್ಕೆೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ನನ್ನನ್ನು ದಾರಿ ತಪ್ಪಿಿಸಲೆಂದೇ ಬಿಜೆಪಿಯವರು ಷಡ್ಯಂತ್ರ ಮಾಡುತ್ತಿಿದ್ದಾರೆ ಎಂದು ಹೇಳಿದರು.
ತಪ್ಪಿಿತಸ್ಥರಿಗೆ ನಿಶ್ಚಿಿತವಾಗಿ ಶಿಕ್ಷೆ ಆಗಬೇಕು. ಇದರಲ್ಲಿ ಯಾವುದೇ ರೀತಿಯ ರಾಜಿ ಸಂದಾನ ನಮ್ಮ ಸರ್ಕಾರ ಮಾಡುವುದಿಲ್ಲ. ಉಪ್ಪುು ತಿಂದವರು ನೀರು ಕುಡಿಯಲೇ ಬೇಕು ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ತಿಳಿಸಿದರು.
ಆದರೆ, ಮುಖ್ಯಮಂತ್ರಿಿಗಳ ಮಾತಿನಿಂದ ತೃಪ್ತರಾಗದ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಭಾಪತಿ ಮುಂಭಾಗದಲ್ಲಿ ಬಂದು ಧರಣಿ ಆರಂಭಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗ ತಮ್ಮ ಮಾತಿಗೆ ಅಡ್ಡಿಿಯಾಗುತ್ತಿಿದ್ದಂತೆ ಮುಖ್ಯಮಂತ್ರಿಿ ಸಿದ್ದರಾಮಯ್ಯ, ತಾವು ತಂದಿದ್ದ ಲಿಖಿತ ಹೇಳಿಕೆಯನ್ನು ಸದನದಲ್ಲಿ ಓದಲು ಆರಂಭಿಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿಿ ನಿಗಮದಲ್ಲಿ 187 ಕೋಟಿ 33 ಲಕ್ಷ ಅಕ್ರಮ ನೆಡೆದಿದೆ ಎಂದು ವಿರೋಧಪಕ್ಷದವರು ಆರೋಪಿಸಿದ್ದಾರೆ. ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರ ವಿರುದ್ಧವಾಗಿದೆ ಎಂದು ಹೇಳಿ ಸತ್ಯಕ್ಕೆೆ ದೂರವಾದ ಆರೋಪ ಮಾಡಿದ್ದಾರೆ. ಆದರೆ ಅವರ ಆರೋಪದಲ್ಲಿ ಯಾವುದೇ ಸತ್ಯಾಾಂಶ ಇಲ್ಲ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿಿ ನಿಗಮದಲ್ಲಿ ನಡೆದಿರುವ ಅಕ್ರಮಕ್ಕೆೆ ಸರ್ಕಾರ ಆಗಲಿ, ಆರ್ಥಿಕ ಇಲಾಖೆಯಾಗಲಿ ಅಥವಾ ನನಗೆ ಯಾವುದೇ ರೀತಿಯ ಸಂಬಂಧ ಇಲ್ಲ. ಅಕ್ರಮ ನಡೆದಿರುವ ಬಗ್ಗೆೆ ತನಿಖೆ ಪ್ರಾಾರಂಭಿಸಲಾಗಿದೆ. ತಪ್ಪಿಿತಸ್ಥರು ಗೊತ್ತಾಾಗಬೇಕು, ತನಿಖೆ ಮುಗಿದ ಮೇಲೆ ಚಾರ್ಜ್ಶೀಟ್ ಆಗಬೇಕು ನಂತರ ಆರೋಪ ಸಾಬೀತಾಗ ಬೇಕು. ಆರೋಪ ಸಾಬೀತಾದ ನಂತರ ತಪ್ಪಿಿತಸ್ಥರಿಗೆ ಶಿಕ್ಷೆ ಆಗುತ್ತೆೆ. ಸರ್ಕಾರವು ಎಲ್ಲಿಯೂ ರಾಜಿ ಸಂದಾನಗಳನ್ನು ಮಾಡಿಕೊಳ್ಳದೇ ನ್ಯಾಾಯಾಲಯದ ಮೂಲಕ ಶಿಕ್ಷೆ ಕೊಡಿಸಲಾಗುವುದು ಎಂದು ತಿಳಿಸಿದರು.
ವಿರೋಧ ಪಕ್ಷದವರು ಗೋಬೆಲ್ಸ್ ಥಿಯರಿಯನ್ನು ಬಳಸುತ್ತಿಿದ್ದಾರೆ. ಗೊಬೆಲ್ಸ್ ಹಿಟ್ಲರ್ ಮಂತ್ರಿಿ ಮಂಡಲದಲ್ಲಿ ಮಂತ್ರಿಿಯಾಗಿದ್ದವರು, ಇವರನ್ನು ಸುಳ್ಳುಗಳನ್ನು ಹೇಳುವುದಕ್ಕಾಾಗಿಯೇ ಅವರ ಮಂತ್ರಿಿಮಂಡಲದಲ್ಲಿ ಇಟ್ಟುಕೊಂಡಿದ್ದರು. ಆ ತಂತ್ರಗಾರಿಕೆ ಬಳಸಿ ಸುಳ್ಳು ಆರೋಪಗಳನ್ನು ಮಾಡುತ್ತಿಿದ್ದಾರೆ. ಯಾವಾಗಲೂ ಸುಳ್ಳು ಆರೋಪ ಮಾಡಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದು ಇವರ ಜಾಯಮಾನ. ಸುಳ್ಳುಗಳನ್ನು ಸತ್ಯ ಮಾಡುವುದು ಕಷ್ಟ ಎಂದು ತಿಳಿಸಿದರು.
ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರ, ಅಲ್ಪಸಂಖ್ಯಾಾತರ, ರೈತರ, ಮಹಿಳೆಯರ ಮತ್ತು ಕಾರ್ಮಿಕರ ವಿರುದ್ದವಾಗಿದೆ ಎಂದು ವಿರೋಧ ಪಕ್ಷದವರು ಹೇಳುತ್ತಿಿರುವರು. ಅವರು ಯಾರೂ ಸಾಮಾಜಿಕ ನ್ಯಾಾಯದ ಪರವಾಗಿಲ್ಲ. ಸಂವಿಧಾನವನ್ನು ವಿರೋಧಿಸುವವರು ಅವರು. ಸಂವಿಧಾನವು ಎಲ್ಲರಿಗೂ ಜಾತಿ-ಭೇದ, ಭಾಷೆ ಪ್ರಾಾಂತ್ಯ ಎಲ್ಲವನ್ನು, ಎಲ್ಲರನ್ನೂ ಒಳಗೊಂಡಂತೆ ಸಮನಾದ ಅವಕಾಶಗಳನ್ನು ಕಲ್ಪಿಿಸಿಕೊಡುತ್ತದೆ. ಆದರೆ ವಿರೋಧ ಪಕ್ಷದವರಿಗೆ ಅದರಲ್ಲಿ ನಂಬಿಕೆ ಇಲ್ಲ. ಸಂವಿಧಾನವನ್ನೇ ತಿದ್ದಲು ಹೊರಟವರು. ಈ ಹಗರಣವನ್ನು ತೆಗೆದುಕೊಂಡು ಸರ್ಕಾರಕ್ಕೆೆ ಮಸಿ ಬಳಿಯುವ ಕೆಲಸ ಮಾಡಲು ಹೊರಟಿದ್ದಾರೆ. ಆದರೆ ನಮ್ಮ ಸರ್ಕಾರ ಸಂವಿಧಾನದಲ್ಲಿ ನಂಬಿಕೆ ಇಟ್ಟಿಿರುವ ಸರ್ಕಾರ. ದೀನ ದಲಿತರ, ಅಲ್ಪಸಂಖ್ಯಾಾತರ, ಮಹಿಳೆಯರ, ರೈತರ, ಕಾರ್ಮಿಕರ ಪರವಾದ ಸರ್ಕಾರ. ಎಲ್ಲರಿಗೂ ಸಮನಾದ ಅವಕಾಶಗಳನ್ನು ಕಲ್ಪಿಿಸಿಕೊಡುವ ಸರ್ಕಾರ. ಈ ಹಗರಣದಲ್ಲಿ ತಪ್ಪಿಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆ ಆಗುತ್ತದೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.
ಹೀಗೆ ಮುಖ್ಯಮಂತ್ರಿಿಗಳು ಸದನದಲ್ಲಿ ಲಿಖಿತ ಓದುತ್ತಿಿರುವಾಗಲೇ ಪ್ರತಿಪಕ್ಷದವರ ಹೋರಾಟ ತೀವ್ರವಾದ್ದರಿಂದ ಸಭಾಪತಿ ಬಸವರಾಜ ಹೊರಟ್ಟಿಿ ಅವರು ಮುಖ್ಯಮಂತ್ರಿಿಗಳನ್ನು ತಡೆದು ಲಿಖಿತ ಭಾಷಣ ಮಂಡನೆಯಾಗಿದೆ ಎಂದು ಸದನವನ್ನು ಮುಂದೂಡಿದರು.