ಸುದ್ದಿಮೂಲ ವಾರ್ತೆ ಮೈಸೂರು, ನ.20:
ಯಾವ ಕ್ರಾಾಂತಿಯೂ ಇಲ್ಲ, ಭ್ರಾಾಂತಿಯೂ ಇಲ್ಲ. ಜನಾಶೀರ್ವಾದ ಇರುವವರೆಗೂ ನಾನೇ ಸಿಎಂ. ನನ್ನ ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ತಮ್ಮ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ಸ್ವಪಕ್ಷದವರಿಗೆ ಮಾತ್ರವೇ ಅಲ್ಲ, ವಿಪಕ್ಷದವರಿಗೂ ರವಾನಿಸಿದ್ದಾರೆ
ಚಾಮರಾಜನಗರದ ಹೆಲಿಪ್ಯಾಾಡ್ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಾಂತಿಯಾಗುತ್ತದೆ. ನಾಯಕತ್ವ ಬದಲಾವಣೆ ಆಗಲಿದೆ ಎಂದು ಪದೇ ಪದೆ ಹೇಳಿಕೆ ನೀಡುತ್ತಿಿದ್ದ ಬಿಜೆಪಿ ನಾಯಕರಿಗೆ ಮತ್ತು ಪರೋಕ್ಷವಾಗಿ ನಾಯಕತ್ವ ಬದಲಾವಣೆ ಬಯಸುತ್ತಿಿದ್ದ ಸ್ವಪಕ್ಷಿಗರಿಗೂ ತಿರುಗೇಟು ನೀಡಿದರು.
ಸದ್ಯಕ್ಕೆೆ ಸಚಿವ ಸಂಪುಟ ಪುನಾರಚನೆ ಇಲ್ಲ
ನವೆಂಬರ್ ಕ್ರಾಾಂತಿಯ ಬಗ್ಗೆೆ ಅನಾವಶ್ಯಕ ಚರ್ಚೆ ನಡೆಯುತ್ತಿಿದೆ. 5 ವರ್ಷಗಳ ನಂತರ ಚುನಾವಣೆ ನಡೆಯುತ್ತದೆ. ಆಗಲೂ ಮತ್ತೆೆ ನಾವೇ ಅಧಿಕಾರಕ್ಕೆೆ ಬರುತ್ತೇವೆ ಎಂಬ ಅದಮ್ಯ ವಿಶ್ವಾಾಸ ವ್ಯಕ್ತಪಡಿಸಿದ ಸಿಎಂ, ಸದ್ಯಕ್ಕೆೆ ಸಚಿವ ಸಂಪುಟ ಪುನಾರಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಒಟ್ಟು 34 ಸಚಿವರ ಸ್ಥಾಾನವಿದ್ದು, ಅದರಲ್ಲಿ ಎರಡು ಸ್ಥಾಾನಗಳು ಖಾಲಿಯಿದೆ. ಸಂಪುಟ ಪುನಾರಚನೆ ಸಂದರ್ಭದಲ್ಲಿ ಈ ಖಾಲಿ ಸಚಿವ ಸ್ಥಾಾನಗಳನ್ನು ಭರ್ತಿ ಮಾಡಲಾಗುವುದು. ಸಂಪುಟ ಪುನಾರಚನೆ ಬಗ್ಗೆೆ ಹೈಕಮಾಂಡ್ ಬಳಿ ಇನ್ನೂ ಚರ್ಚಿಸಬೇಕು. ಆದರೆ ಸದ್ಯಕ್ಕಂತೂ ಸಚಿವ ಸಂಪುಟ ಪುನಾರಚನೆ ಕುರಿತು ಪ್ರಸ್ತಾಾಪ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಚಾಮರಾಜನಗರಕ್ಕೆೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾಾರೆ ಎಂಬುದು ಮೂಢನಂಬಿಕೆ. ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ನಂಬುವುದಿಲ್ಲ. ಆದ್ದರಿಂದ ಚಾಮರಾಜನಗರಕ್ಕೆೆ ಭೇಟಿ ನೀಡುತ್ತಿಿರುವೆ. ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಮಾನವಾಗಿ ಕಂಡು, ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳುತ್ತಲೇ, ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ ಎಂದು ಪ್ರತಿಪಾದನೆ ಮಾಡಿದರು.
ಬೆಂಗಳೂರು ಬ್ಯಾಾಂಕ್ ದರೋಡೆ
ಬೆಂಗಳೂರಿನಲ್ಲಿ ನಡೆದ ಬ್ಯಾಾಂಕ್ ದರೋಡೆ ಬಗ್ಗೆೆ ಪತ್ರಕರ್ತರ ಪ್ರಶ್ನೆೆಗೆ ಉತ್ತರಿಸುತ್ತಾಾ, ಕಳುವಿನ ಬಗ್ಗೆೆ ಸುಳಿವು ಸಿಕ್ಕಿಿದ್ದು, ಘಟನೆಗೆ ಬಳಸಿದ ಕಾರು ಪೊಲೀಸರಿಗೆ ದೊರಕಿದೆ. ಬ್ಯಾಾಂಕ್ ದರೋಡೆಯ ಅಪರಾಧಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದರು.
ಪ್ರಧಾನಿ ಮೋದಿ ಬಳಿ ಪರಿಹಾರಕ್ಕೆೆ ಮನವಿ
ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯ ವೇಳೆ ರಾಜ್ಯದಲ್ಲಿ ಮಳೆಯಿಂದ ಹಾನಿಗೆ ಪರಿಹಾರ ಕೇಳಲಾಗಿದೆ. ಕಬ್ಬು ಬೆಳೆಗಾರರ ಸಮಸ್ಯೆೆ ಹಾಗೂ ರೈತರು , ಕಾರ್ಖಾನೆ ಮಾಲಿಕರೊಂದಿಗೆ ನಡೆಸಿದ ಚರ್ಚೆಗಳ ಬಗ್ಗೆೆ ವಿವರಿಸಲಾಯಿತು ಎಂದು ತಿಳಿಸಿದರು.
ಡಿ.ಕೆ. ಸುರೇಶ್ ಹೇಳಿಕೆ ಪ್ರತಿಕ್ರಿಿಯಿಸಲು ನಕಾರ
ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವ ಬಗ್ಗೆೆ ಮಾಡಿದ ಹೇಳಿಕೆ ಬಗ್ಗೆೆ ಪ್ರತಿಕ್ರಿಿಯಿಸಲು ನಿರಾಕರಿಸಿದ ಸಿಎಂ, ರಾಜ್ಯದಲ್ಲಿ ಕಾಂಗ್ರೆೆಸ್ ಪಕ್ಷವು ಐದು ವರ್ಷ ಆಡಳಿತ ನಡೆಸಲು ಜನಾದೇಶ ಇದೆ. ನವೆಂಬರ್ ಕ್ರಾಾಂತಿ ಎಂಬ ವಿಷಯವನ್ನು ಮಾಧ್ಯಮದವರೇ ಸೃಷ್ಟಿಿಸಿದರು. ಜನರ ಆಸೆಯಂತೆ ಐದು ವರ್ಷ ಸರ್ಕಾರ ನಡೆಸಿ ನಂತರವೂ ಪುನ: ಕಾಂಗ್ರೆೆಸ್ ಪಕ್ಷವೇ ಆಯ್ಕೆೆಯಾಗಿ ಬರಲಿದೆ ಪ್ರತಿಪಾದಿಸಿದರು.
2028 ರಲ್ಲಿಯೂ ಸಿದ್ದರಾಮಯ್ಯನವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಾಗುವುದೇ ಎಂಬುದಕ್ಕೆೆ ಉತ್ತರಿಸಿ, ಈ ಬಗ್ಗೆೆ ಭವಿಷ್ಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಜನರು ಎಲ್ಲಿವರೆಗೆ ಅಪೇಕ್ಷಿಸುವರೋ, ಅಲ್ಲಿಯವೆಗೆ ನಾನೇ ಬಜೆಟ್ ಮಂಡಿಸುತ್ತೇನೆ ಎಂದು ತಿಳಿಸಿದರು.

