ಸುದ್ದಿಮೂಲವಾರ್ತೆ
ಕೊಪ್ಪಳ ಆ 14: ವಿದ್ಯುತ್ ಪರಿವರ್ತಕದ ತಂತಿ ಹಾಗು ಎಣ್ಣೆ ಕದಿಯುತ್ತಿದ್ದವರ ಕೊಪ್ಪಳ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಸುಮಾರು 1.18 ಕೋಟಿ ರೂಪಾಯಿ ಕಳ್ಳತನ ಮಾಡಿದ್ದರು.
ಈ ಕುರಿತು ಇಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಮಾಹಿತಿ ನೀಡಿದ್ದು ಕೊಪ್ಪಳ ಜಿಲ್ಲಾ ಪೊಲೀಸರ ಕಾರ್ಯಾಚರಣೆ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಒಟ್ಟು 1.18 ಕೋಟಿ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ ಪತ್ತೆ ಮಾಡಿದ್ದಾರೆ ಅವರಿಗೆ ಹಿರಿಯ ಅಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ ಎಂದರು.
ಕೊಪ್ಪಳ ಏತ ನೀರಾವರಿ ಯೋಜನೆಗಾಗಿ ಅಳವಡಿಸಿರುವ ಟ್ರಾನ್ಸಫಾರ್ಮರ್ ನಲ್ಲಿ ಕಾಪರ, ಹಾಗು ಆಯಿಲ್ ನ್ನು 2021 ಜೂನ 26 ರಿಂದ 2023 ಆ 8 ಮಧ್ಯೆ ಆಗಿರುವ ಕಳ್ಳತನ ಮಾಡಿರುವ ಮಾಹಿತಿ ಇದೆ. ಮಹಾರಾಷ್ಟ್ರದ ಪರಬನಿಯ ಶೇಖ ಜಾಹೀರ. ಮಾಲೋಜಿ ಬೋಸ್ಲೆ ಹಾಗು ನಾನಾಸಾಹೇಬರ ಬಂಧಿಸಿದ್ದಾರೆ.ಇದರಲ್ಲಿ ಮಹಾರಾಷ್ಟ್ರ ಸರಕಾರದ ಪಿಎಸ್ಐ ಪರೀಕ್ಷೆಯಲ್ಲಿ ಪಾಸಾಗಿದ್ದವರು ಇದ್ದಾರೆ ಎಂಬ ಮಾಹಿತಿ ಇದೆ.
ಕೆಬಿಜಿಎನ್ ಎಲ್ ಅಧಿಕಾರಿಗಳು ಇತ್ತೀಚಿಗೆ ಕೃಷ್ಣಾ ಬಿ ಸ್ಕೀಂ ನಲ್ಲಿ ಕೆರೆ ತುಂಬಿಸುವ ಯೋಜನೆ ಚಾಲನೆ ನೀಡಲು ಹೋದಾಗ ಇಲ್ಲಿಯ ಟ್ರಾನ್ಸಪಾರ್ಮರ್ ಗಳಲ್ಲಿ ತಾಮ್ರ ಹಾಗು ಬೆಲೆಬಾಳುವ ಆಯಿಲ್ವಕಳ್ಳತನವಾಗಿರುವುದು ಬಯಲಾಗಿದೆ.
ಈ ಕುರಿತು ಕೆಬಿಜಿಎನ್ ಎಲ್ ಅಧಿಕಾರಿಗಳು ಜೂ 21 ರಂದು ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಈ ಪ್ರಕರಣದ ತನಿಖೆ ಪೊಲೀಸರು
ಈ ತಂಡ ತೆಲಂಗಾಣದಲ್ಲಿ ಇರುವಾಗ ಪತ್ತೆ ಮಾಡಿ ಬಂಧಿಸಿದ್ದಾರೆ.ಈ ತಂಡ ಮಹಾರಾಷ್ಟ್ರ, ತೆಲಂಗಾಣ ಹಾಗು ಕರ್ನಾಟಕ ಕಳ್ಳತನ ಮಾಡುತ್ತಿದ್ದರು.ಬಂಧಿತರಿಂದ 8 ಲಕ್ಷ ರೂಪಾಯಿ ನಗದು, 3 ಕ್ವಿಂಟಾಲ್ ಕಾಪರ್, ಕಾರು,ಒಂದು ಐಷರ್ ವಾಹನ ಜಪ್ತಿ ಮಾಡಲಾಗಿದೆ. ಇದೇ ತಂಡ ಕಲಬುರಗಿ ಜಿಲ್ಲೆಯಲ್ಲಿಯೂ ಕಳ್ಳತನ ಮಾಡಿರುವ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.