ಸುದ್ದಿಮೂಲ ವಾರ್ತೆ
ಆನೇಕಲ್, ಮಾ.28: ಶ್ರೀ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು. ಬಿಸಿಲಿನ ಬೇಗೆಯ ನಡುವೆಯೂ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿ ವೈಭವವನ್ನು ಕಣ್ತುಂಬಿಕೊಂಡರು. ಆನೇಕಲ್ನ ಸಹದೇವಪುರ ಕ್ಷೇತ್ರದಲ್ಲಿ ಉದ್ಭವ ಮೂರ್ತಿಯಾಗಿ ನೆಲೆಸಿರುವ ಶ್ರಿ ತಿಮ್ಮರಾಯಸ್ವಾಮಿ ಅಲಂಕೃತ ಉತ್ಸವ ಮೂರ್ತಿಯನ್ನು ಮಧ್ಯಾಹ್ನ ಒಂದು ಗಂಟೆಗೆ ಶುಭ ಶುಭ ಮಿಥುನ ಲಗ್ನದಲ್ಲಿ ರಥದಲ್ಲಿ ಕೂರಿಸಲಾಯಿತು. ಪ್ರಧಾನ ಅರ್ಚಕರು ರಾಮಚಂದ್ರ ಭಟ್ಟರು ಸಾಂಪ್ರದಾಯಕ ಪೂಜೆ ನಿರ್ವಹಿಸಿ ಕಲ್ಲುಗಾಳಿಗಳ ಪ್ರಾರಂಭಿಕ ರಥಕ್ಕೆ ಪೂಜೆ ಸಲ್ಲಿಸಿದರು. ದೇವರ ಉತ್ಸವ ಮೂರ್ತಿಯನ್ನು ಕೊರಿಸುತ್ತಿದ್ದಂತೆ ನೆರೆದಿದ್ದ ಭಕ್ತರು ಕಬ್ಬಿಣದ ಸರಪಳಿ ಹಾಗೂ ಹಗ್ಗಗಳಿಂದ ರಥವನ್ನು ಎಳೆದು ದೇವಾಲಯದ ಮುಂಭಾಗಕ್ಕೆ ತಂದರು ದೇವಾಲಯದ ಮುಂಭಾಗಕ್ಕೆ ಬರುತ್ತಿದ್ದಂತೆ ಭಕ್ತರು ದವನ ಚುಚ್ಚಿದ ಬಾಳೆಹಣ್ಣನ್ನು ತೇರಿಗೆ ಎಸೆಯಲು ಮೂಲಕ ಭಕ್ತಿ ಸಮರ್ಪಿಸಿದರು. ಅಪಾರ ಜನಸ್ತೋಮ ಗೋವಿಂದ ಗೋವಿಂದ ಎಂದು ಜಯ ಘೋಷ ಮಾಡಿದರು. ಸ್ವಾಮಿಗೆ ಅಭಿಷೇಕ ವಿಶೇಷ ಅಲಂಕಾರ ಮಾಡಲಾಗಿತ್ತು. ಹಲಗೆ ಉತ್ಸವ, ಗರುಡೋತ್ಸವ, ಕಲ್ಯಾಣೋತ್ಸವ, ಸೂರ್ಯ ಮಂಡಲ ಉತ್ಸವ. ಶೇಷ ವಾಹನೋತ್ಸವ. ಸೇರಿದಂತೆ ವಿವಿಧ ಉತ್ಸವಗಳು ನಡೆದವು. ಆನೇಕಲ್ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ತಮಿಳುನಾಡಿನ ಹಲವು ಗ್ರಾಮಗಳ ಜನರು ಭಾಗವಹಿಸಿದ್ದರು. ಭಕ್ತರಿಗಾಗಿ ಅರವಂಟಿಗೆಗಳನ್ನು ಸ್ಥಾಪಿಸಿ ಪಾನಕ ನೀರು ಮಜ್ಜಿಗೆ ಕೋಸಂಬರ ಹಂಚಲಾಗುತ್ತಿತ್ತು