ಸುದ್ದಿಮೂಲ ವಾರ್ತೆ
ಮೈಸೂರು, ಜು.31 : ನಗರದಲ್ಲಿ ಸೋಮವಾರ ದಿಂದ 3 ದಿನಗಳ ಕಾಲಥ ಥಿಂಕ್ ಜಿ-20 ಶೃಂಗಸಭೆ ಪೂರ್ವ ಸಭೆ ಆರಂಭಗೊಂಡಿದೆ. 43 ರಾಷ್ಟ್ರಗಳ ಸದಸ್ಯರು ಭಾಗಿಯಾಗಿದ್ದು, 250ಕ್ಕೂ ಹೆಚ್ಚು ವಿದೇಶಿ ಗಣ್ಯರು ಆಗಮಿಸಿದ್ದಾರೆ.
ನಗರದ ರ್ಯಾಡಿಸನ್ ಹೋಟೆಲ್ನಲ್ಲಿ ಈ ಸಭೆ ನಡೆಯುತ್ತಿದ್ದು,. ಗಣ್ಯರ ವಾಸ್ತವ್ಯಕ್ಕೆ ಹೈವೇ ವೃತ್ತದ ಬಳಿ ಇರುವ ಗ್ರ್ಯಾಂಡ್ ಮರ್ಕ್ಯೂರಿ ಹೋಟೆಲ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಶೃಂಗಸಭೆಗೆ ಆಗಮಿಸಿದ ವಿದೇಶಿ ಪ್ರತಿನಿಧಿಗಳು ಅರಮನೆ, ಕೆಆರ್ಎಸ್, ಶ್ರೀರಂಗಪಟ್ಟಣ ಹಾಗೂ ಸೋಮನಾಥಪುರಕ್ಕೆ ಭೇಟಿ ನೀಡುವರು. ಸದಸ್ಯರಿಗೆ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ.
ಸಭೆ ಮಹಿಳೆಯರ ಸರ್ವತೋಮುಖ ಆಭಿವೃದ್ಥಿ, ಆರ್ಥಿಕ, ಸಾಮಾಜಿಕ ಮತ್ತು ಮೈಕ್ರೋ ಏಕಾನಾಮಿಕ್ಸ್ , ಡಿಜಿಟಲ್ ಕ್ಷೇತ್ರ ಸೇರಿದಂತೆ ಆನೇಕ ವಿಷಯಗಳ ಬಗ್ಗೆ ತಜ್ಷರೊಂದಿಗ ಸಮಾಲೋಚನೆ ನಡೆಸಿ, ಅದಕ್ಕೆ ಪೂರಕವಾದ ನೀತಿಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಗುತ್ತಿದೆ.