ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ಅಧಿಕಾರ, ಅವಕಾಶ ಮತ್ತು ಹಣದ ಸಮಾನ ಹಂಚಿಕೆಯಾಗಬೇಕು ಎನ್ನುವುದು ಸೀವಾದಿ ಆಡಳಿತದ ಮಾದರಿ. ಇದು ಜಾರಿಯಾದರೆ ಮಹಿಳಾ ತಾರತಮ್ಯವಿಲ್ಲದ, ವೈಶಿಷ್ಟ ್ಯಪೂರ್ಣ ಸಮಾಜ ನಿರ್ಮಾಣವಾಗುವುದು ಎಂದು ಶಿವಮೊಗ್ಗದ ಚಿಂತಕಿ ಡಾ. ಸಬಿತಾ ಬನ್ನಾಾಡಿ ಅಭಿಪ್ರಾಾಯಪಟ್ಟರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಸಭಾಂಗಣದಲ್ಲಿ ಮಹಿಳಾ ಅಧ್ಯಯನ ವಿಭಾಗ ಮತ್ತು ಸಮಾಜಶಾಸ ವಿಭಾಗಗಳು ಸೋಮವಾರ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಾಸ ಕಾರ್ಯಕ್ರಮದಲ್ಲಿ ಮಹಿಳೆ : ಸಾಮಾಜಿಕ ಸ್ತರವಿನ್ಯಾಾಸ ಕುರಿತು ವಿಷಯ ಮಂಡಿಸಿ ಮಾತನಾಡಿದರು.
ಸೀವಾದಿ ಗಂಡಸುತನ ಅಪೂರ್ವವಾದುದು. ಆಡಳಿತ, ಅಧಿಕಾರ ಬಿಟ್ಟುಕೊಟ್ಟು ಸಂಬಂಧವನ್ನು ಉಳಿಸಿಕೊಳ್ಳಲು ಅದು ಪ್ರೇೇರೇಪಿಸುತ್ತದೆ. ಪುರುಷರು ಮತ್ತು ಮಹಿಳೆಯರು ಕುಟುಂಬ, ಸಮಾಜದಿಂದ ಈಗಾಗಲೇ ಹಂಚಿಕೆಯಾದ ಕೆಲಸಗಳನ್ನು ಬಿಟ್ಟು, ಅವುಗಳನ್ನು ತಮಗೆ ಬೇಕಾದಂತೆ ಮರು ಹಂಚಿಕೆ ಮಾಡಿಕೊಂಡು ಅಹಂನ್ನು ತ್ಯಜಿಸಬೇಕು. ಆಗ ಪ್ರೀೀತಿಯನ್ನು ಆಧರಿಸಿದ ಸ್ವಗೌರವದ ಬದುಕು ಎಲ್ಲರದೂ ಆಗುತ್ತದೆ ಎಂದರು.
ಪಿತೃಪ್ರಧಾನ ವ್ಯವಸ್ಥೆೆ ಮಹಿಳೆಯರನ್ನು ಹಲವು ವಿಧಗಳಲ್ಲಿ ನಿಯಂತ್ರಿಿಸುತ್ತದೆ. ಮುಖ್ಯವಾಗಿ ಮಹಿಳೆಯ ಚಲನೆ, ದುಡಿಮೆಯ ಗಳಿಕೆ ಮೇಲೆ ನಿಯಂತ್ರಣ, ಲೈಂಗಿಕತೆಯ ಮೇಲೆ ನಿಯಂತ್ರಣ ಮಾಡುತ್ತದೆ. ಈ ರೀತಿಯ ನಿಯಂತ್ರಣಗಳ ಹೇರುವ ಮೂಲಕ ಅಧಿಕಾರ ಉಳಿಸಿಕೊಳ್ಳಲು ಸಂಚು ಮಾಡುತ್ತದೆ ಎಂದು ವಿಶ್ಲೇಷಿಸಿದರು.
ಹಂಪಿಯ ಕನ್ನಡ ವಿಶ್ವ ವಿದ್ಯಾಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಶೈಲಜ ಇಂ.ಹಿರೇಮಠ ಅವರು ವಸಾಹತುಶಾಹಿ ಭಾರತದಲ್ಲಿನ ಸುಧಾರಣಾವಾದ ಮತ್ತು ಮಹಿಳೆ ವಿಷಯ ಕುರಿತು ಉಪನ್ಯಾಾಸ ನೀಡಿ, ವಸಾಹತುಶಾಹಿ ಆಡಳಿತದ ಆರಂಭದ ದಿನಗಳಲ್ಲಿ ಮಹಿಳೆಯರಿಗೆ ಶಿಕ್ಷಣ ಕೊಡಿಸಬೇಕು ಎನ್ನುವ ಕಾಳಜಿಯ ಹಿಂದೆ ಪುರುಷ ಪ್ರಧಾನ ವ್ಯವಸ್ಥೆೆಯ ಸಂಚಿದೆ. ಆಧುನಿಕ ಭಾರತದ ಪುರುಷರಿಗೆ ಸುಧಾರಿತ ಹೆಂಡತಿಯನ್ನು ರೂಪಗೊಳಿಸುವ ಏಕಮಾತ್ರ ಉದ್ದೇಶವಿತ್ತು. ಈ ಸಮಾಜಕ್ಕೆೆ ಪ್ರಬುದ್ಧ ಮಹಿಳೆಯರು ಬೇಡವಾಗಿದೆ. ಪ್ರಜ್ಞಾಾವಂತ ಮಹಿಳೆಯರನ್ನು ಒಪ್ಪಿಿಕೊಳ್ಳುವುದಿಲ್ಲ. ಮಹಿಳೆಯ ಮೂಲಭೂತ ಹಕ್ಕುಗಳನ್ನು ಅದು ನಿಯಂತ್ರಿಿಸಿತು. ಈ ಸುಧಾರಣಾವಾದ ಮಹಿಳೆಯನ್ನು ದೇವಿಯಾಗಿ ಕಾಣುತ್ತದೆ. ಮಾತೃತ್ವ, ನಾರೀತನವನ್ನು ಪುನರುಜ್ಜೀವನಗೊಳಿಸುತ್ತ ಹೋಗುತ್ತದೆ. ಹಾಗಾಗಿ ಅದನ್ನು ಸಾಮಾಜಿಕ ಸಂಕಷ್ಟಗಳ ವಿಮೋಚನೆಯ ಹಾದಿ ಎಂದು ಭಾವಿಸಲಾಗದು. ಅದು ನವಪಿತೃತ್ವವನ್ನು ಸ್ಥಾಾಪಿಸಿತು ಎಂದು ಅಭಿಪ್ರಾಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಕುಲಪತಿ ಪ್ರೊೊ. ಶಿವಾನಂದ ಕೆಳಗಿನಮನಿ ಮಾತನಾಡಿ, ಮಹಿಳೆಯನ್ನು ರೂಪಿಸಲಾಗಿದೆ, ರಚಿಸಲಾಗಿದೆ. ಸ್ಮೃತಿಗಳು ಮಹಿಳೆಯರು ಹೇಗೆ ಜೀವಿಸಬೇಕು, ನಡೆದುಕೊಳ್ಳಬೇಕು ಎಂಬುದನ್ನು ಸೂಚಿಸುತ್ತವೆ. ಸಂಸ್ಕೃತಿಯ ಹೆಸರಿನಲ್ಲಿ ಆಕೆಯನ್ನು ಬಂಧನದಲ್ಲಿಡಲಾಗುತ್ತಿಿದೆ. ಕುಟುಂಬದ ನ್ಯಾಾಯಾಧೀಕರಣ, ಯಜಮಾನಿಕೆ ಈಗಲೂ ಪುರುಷರ ಕೈಯ್ಯಲ್ಲಿದೆ. ಹೆಣ್ಣು ಹುಟ್ಟಿಿದರೆ ದುಃಖಿಸುವ, ಗಂಡು ಹುಟ್ಟಿಿದರೆ ಸಂಭ್ರಮಿಸುವ ವಾತಾವರಣ ಇನ್ನೂ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಲಸಚಿವ (ಆಡಳಿತ) ಡಾ. ಎ.ಚೆನ್ನಪ್ಪ, ಸಮಾಜ ವಿಜ್ಞಾಾನಗಳ ನಿಕಾಯದ ಡೀನ್ ಡಾ.ಕೆ.ವೆಂಕಟೇಶ್, ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ ಉಪಸ್ಥಿಿತರಿದ್ದರು.
ಮಹಿಳಾ ಅಧ್ಯಯನ ಹಾಗೂ ಸಮಾಜಶಾಸ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್.ಲತಾ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಉಪನ್ಯಾಾಸಕರಾದ ಡಾ. ಮೇಘನ ಜಿ. ನಿರೂಪಿಸಿದರು. ಡಾ.ಭೀಮೇಶ ಮಾಚನೂರು ಸ್ವಾಾಗತಿಸಿದರು. ಡಾ.ಅನಿಲಕುಮಾರ ಎಂ. ವಂದಿಸಿದರು. ವಿದ್ಯಾಾರ್ಥಿನಿ ಸ್ನೇಹಾ ಪ್ರಾಾರ್ಥನೆ ಗೀತೆ ಹಾಡಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಉಪನ್ಯಾಸದಲ್ಲಿ ಚಿಂತಕಿ ಡಾ. ಸಬಿತಾ ಬನ್ನಾಡಿ ಅಭಿಮತ ಅಧಿಕಾರ, ಅವಕಾಶದ ಸಮಾನ ಹಂಚಿಕೆಯಾಗಲಿ

