ುದ್ದಿಮೂಲ ವಾರ್ತೆ ರಾಯಚೂರು ಡಿ.19
ರಾಯಚೂರಿನ ಜೋಡು ವೀರಾಂಜನೇಯ್ಯ ದೇವಸ್ಥಾನದಲ್ಲಿ ಸಂಜೆ 4.30ರಿಂದ ಬನ್ನಂಜೆ ವಿಶ್ವ ನಮನ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ.
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬೆಂಗಳೂರು, ಜನಸೇವಾ ಪ್ರತಿಷ್ಠಾನ, ಶೃತಿ ಸಾಹಿತ್ಯ ಮೇಳ ರಾಯಚೂರು ಸಂಯುಕ್ತಾಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಅಧ್ಯಾಾತ್ಮ ಚಿಂತಕಿ, ವಾಗ್ಮಿಗಳಾದ ಡಾ. ವೀಣಾ ಬನ್ನಂಜೆ ಅವರು ಆಗಮಿಸಿ ಉಪನ್ಯಾಾಸ ನೀಡಲಿದ್ದಾರೆ.
ವಿದ್ವಾಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ರೋಹಿತ್ ಚಕ್ರವರ್ತಿ, ಸಿ. ಜೆ ವಿಜಯ ಸಿಂಹಾಚಾರ್ಯ , ವಾಸುದೇವ ರಮೇಶ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ.
ಖ್ಯಾತ ಸಂಗೀತಗಾರರಾದ ಸುಮಾ ಶಾಸಿ ಹಾಗೂ ಕವಿತಾ ಉಡುಪ ಅವರಿಂದ ದಾಸವಾಣಿ ಕಾರ್ಯಕ್ರಮ ಜರಗಲಿದೆ. ಈ ಸಂದರ್ಭದಲ್ಲಿ ಬನ್ನಂಜೆ ಆಚಾರ್ಯರ ಜೊತೆಗೆ ಒಡನಾಟ ಹೊಂದಿದ ಶಂಕರ ನಾರಾಯಣ ಕೇಕುಡ, ಬಿ ನರಸಿಂಗ ರಾವ್, ನರಸಿಂಗರಾವ ದೇಶಪಾಂಡೆ, ಬಂಡುರಾವ್ ಚಾಗಿ ಅವರನ್ನು ಸನ್ಮಾನಿಸಲಾಗುತ್ತಿದೆ.
ಈ ಕಾರ್ಯಕ್ರಮವನ್ನು ಸಚಿವ ಎನ್.ಎಸ್.ಬೋಸರಾಜ್ ಉದ್ಘಾಟಿಸಲಿದ್ದಾಾರೆ ಎಂದು ಆಯೋಜಕ ವಸುಧೇಂದ್ರ ಸಿರವಾರ ತಿಳಿಸಿದ್ದಾರೆ.

