ಸುದ್ದಿಮೂಲ ವಾರ್ತೆ ಮೈಸೂರು, ಅ.03:
ಬಿಹಾರ ರಾಜ್ಯದ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಜಿಎಸ್ಟಿಿ ಇಳಿಕೆ ಮಾಡಲಾಗಿದೆ. ಇದೊಂದು ಕೇಂದ್ರ ಸರ್ಕಾರದ ಹೊಸ ನಾಟಕ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ವಾಗ್ದಾಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್ಟಿಿಯನ್ನು ಅವರೇ ಏರಿಸುತ್ತಾಾರೆ, ಅವರೇ ಇಳಿಸುತ್ತಾಾರೆ. ಇದನ್ನ ಸಂಭ್ರಮಪಡಿ ಅಂತ ಕೂಡ ಹೇಳುತ್ತಾಾರೆ. ಕಳೆದ ಎಂಟು ವರ್ಷಗಳ ತೆರಿಗೆ ಹೆಚ್ಚಳ ಹಣ ಕೊಡ್ತಾಾರಾ? ಚುನಾವಣೆ ಬಂದ ತಕ್ಷಣ ಇಂತಹ ಡ್ರಾಾಮಾ ಮಾಡುತ್ತಾಾರೆ ಎಂದು ತೀಕ್ಷ್ಣವಾಗಿ ಟೀಕಿಸಿದರು.
ಜನರನ್ನು ಬಿಜೆಪಿ ದಿಕ್ಕು ತಪ್ಪಿಿಸುವ ಕೆಲಸ ಮಾಡುತ್ತಿಿದೆ. ನಮಗೆ ಕೊಡುವ ಪಾಲನ್ನು ನೀಡಲು ನಿರಾಕರಿಸುತ್ತಾಾರೆ. ಕೇವಲ ಚುನಾವಣಾ ರಾಜಕೀಯಕ್ಕಾಾಗಿ ಈ ರೀತಿ ಸಂಚು ರೂಪಿಸುತ್ತಾಾರೆ. ಇದೆಲ್ಲ ಕೇಂದ್ರ ಸರ್ಕಾರದ ಗಿಮಿಕ್ ಎಂದು ಟೀಕಿಸಿದರು.
ಅಗತ್ಯವಾದರೆ ನ್ಯಾಾಯಾಲಯದ ಮೊರೆ :
ರಾಜ್ಯಕ್ಕೆೆ ಮೊದಲಿನಿಂದಲೂ ಕೇಂದ್ರದಿಂದ ಅನ್ಯಾಾಯವಾಗುತ್ತಿಿದೆ. ನಾವು ಕೊಟ್ಟಿಿದ್ದನ್ನು ನ್ಯಾಾಯ ಸಮ್ಮತವಾಗಿ ನಮಗೆ ವಾಪಸ್ ಕೊಡಿ ಎಂದು ಕೇಳುವುದು ತಪ್ಪಾಾ? ಉದ್ದೇಶ ಪೂರ್ವಕವಾಗಿಯೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆೆ ತಾರತಮ್ಯ ಮಾಡುತ್ತಿಿದೆ. ಅಗತ್ಯವಾದರೆ ನ್ಯಾಾಯಾಲಯದ ಮೆಟ್ಟಿಿಲೇರಿ ನಮ್ಮ ಪಾಲು ನಾವು ಪಡೆಯಲಾಗುವುದು ಎಂದರು.
ಮೋದಿ ಮುಂದೆ ಬಿಜೆಪಿ ಸಂಸದರು ತುಟಿಕ್ಪಿಟಿಕ್ ಎನ್ನಲ್ಲ. ಅವರಿಗೆ, ಮೋದಿಯನ್ನು ಹೊಗುಳುವುದಷ್ಟೇ ಕೆಲಸ ಎಂದು ಕಿಡಿಕಾರಿದರು.
ಜಾತಿಗಣತಿ ಅಗತ್ಯ ಬಿದ್ದರೆ ವಿಸ್ತರಣೆ
ಜಾತಿ ಜನಗಣತಿ ಸಮೀಕ್ಷೆ ಮೂರು ದಿನಗಳಲ್ಲಿ ಮುಗಿಸಲಾಗುವುದು. ಪೂರ್ಣಗೊಳ್ಳದಿದ್ದರೆ ದಿನಾಂಕ ವಿಸ್ತರಣೆ ಮಾಡಲಾಗುವುದು. ಈವರೆಗೆ ಮೂರು ಕೋಟಿ ಜನರ ಸಮೀಕ್ಷೆ ಮುಗಿದಿದೆ. ಸುಮಾರು 80 ಲಕ್ಷ ಮನೆಗಳ ಸರ್ವೆ ಕಾರ್ಯ ಪೂರ್ಣವಾಗಿದೆ ಎಂದು ತಿಳಿಸಿದರು.
ಇದು ಕೇವಲ ಜಾತಿ ಗಣತಿ ಅಲ್ಲ. ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿ. ಸ್ವಾಾತಂತ್ರ್ಯ ಬಂದ ಮೇಲೆ ಜನರ ಜೀವನ ಮಟ್ಟ ಹೇಗಿದೆ ಎಂಬುದರ ಕುರಿತು ವರದಿ ಸಿದ್ಧಪಡಿಸಲಾಗುವುದು. ಈ ಅಂಕಿ ಅಂಶಗಳ ಆಧಾರದ ಮೇಲೆ ಸರ್ಕಾರ ಯೋಜನೆ ರೂಪಿಸಲು ಸಹಕಾರಿ ಆಗುತ್ತದೆ ಎಂದರು.
ಜಾತಿ ಗಣತಿಗೆ ಕೇಂದ್ರ ಸಚಿವ ಪ್ರಲ್ಹಾಾದ್ ಜೋಶಿ ಟೀಕೆ ಬಗ್ಗೆೆ ಪ್ರತಿಕ್ರಿಿಯಿಸಿದ ಸಿಎಂ, ನಾವು ಜಾತಿಗಳನ್ನು ಎಲ್ಲಿ ಒಡೆಯುತ್ತಿಿದ್ದೇವೆಂದು ತೋರಿಸಲಿ. ಕ್ರಿಿಶ್ಚಿಿಯನ್ ಕುರುಬ ಲಿಂಗಾಯತ ದಲಿತ ಬ್ರಾಾಹ್ಮಣ ಕ್ರಿಿಶ್ಚಿಿಯನ್ ಎಂಬುದನ್ನು ಸೃಷ್ಟಿಿ ಮಾಡಿದ್ದು ನಾನಲ್ಲ. ಕಾಂತರಾಜು ವರದಿಯಲ್ಲಿ ಜನರೇ ಸ್ವಯಂಪ್ರೇೇರಿತರಾಗಿ ಅದನ್ನು ಬರೆಸಿದ್ದಾರೆ. ಅದಕ್ಕೆೆ ನಾನು ಏನು ಮಾಡಲು ಸಾಧ್ಯ. ಜನ ಮತಾಂತರವಾಗಿದ್ದರೆ ಅದನ್ನು ಬರೆಸುತ್ತಾಾರೆ. ಅದನ್ನು ಬರೆಸಬೇಡಿ ಎಂದು ಹೇಳಲು ನಾನು ಯಾರು? ಎಂದು ಪ್ರಶ್ನಿಿಸಿದರ್
ಆರ್.ಅಶೋಕ್ ಆರ್ಎಸ್ಎಸ್ನ ಕೈಗೊಂಬೆ
ಸಿಎಂಗೆ ರಾಜ್ಯದಲ್ಲಿ ರೈತರ ಸಮಸ್ಯೆೆ ಗೊತ್ತಿಿಲ್ಲ. ಸರ್ಕಾರ ಇದ್ದರೂ ಅಷ್ಟೇ, ಸತ್ತರೂ ಅಷ್ಟೇ ಎಂಬ ಆರ್. ಅಶೋಕ್ ಹೇಳಿಕೆಗೆ ಕಿಡಿ ಕಾರಿದ ಸಿಎಂ ಸಿದ್ದರಾಮಯ್ಯ, ಆರ್.ಅಶೋಕ್ ಆರ್ಎಸ್ಎಸ್ನ ಕೈಗೊಂಬೆ. ಆರ್ಎಸ್ಎಸ್ ಏನು ಹೇಳುತ್ತಾಾರೆ ಅದನ್ನು ಹೇಳುತ್ತಾಾನೆ. ಬೆಂಗಳೂರು ಸಿಟಿಯಲ್ಲಿ ಹುಟ್ಟಿಿದವರು. ಅವನು ರೈತನೂ ಅಲ್ಲ, ಅವನಿಗೆ ಏನೂ ಗೊತ್ತೂ ಇಲ್ಲ. ಅವನನ್ನ ಶ್ಯಾಾಡೋ ಸಿಎಂ ಅಂತಾರಲ್ಲ. ಅದನ್ನ ಅವನನ್ನೇ ಕೇಳಬೇಕು ಎಂದು ಏಕವಚನದಲ್ಲೇ ವಾಗ್ದಾಾಳಿ ನಡೆಸಿದರು.್
ಡಿಸೆಂಬರ್ನಲ್ಲಿ ಗೃಹ ಪ್ರವೇಶ
ಮೈಸೂರು ನಗರದಲ್ಲಿ ನಿರ್ಮಿಸುತ್ತಿಿರುವ ಹೊಸ ಮನೆ ಗೃಹ ಪ್ರವೇಶ ಡಿಸೆಂಬರ್ನಲ್ಲಿ ಮಾಡುತ್ತೇನೆ. ಯಾರನ್ನು ಗೃಹ ಪ್ರವೇಶಕ್ಕೆೆ ಆಹ್ವಾಾನಿಸುವುದಿಲ್ಲ. ಮಾಧ್ಯಮದವರನ್ನೂ ಆಹ್ವಾಾನಿಸುವುದಿಲ್ಲ. ನೀವು ಮಾಧ್ಯಮವರು ಬಂದರೂ ಬೇಡ ಎಂದು ಕಳುಹಿಸುತ್ತೇನೆ. ಬರೀ ಕುಟುಂಬಸ್ಥರು ಮಾತ್ರ ಗೃಹ ಪ್ರವೇಶ ಮಾಡಿಕೊಳ್ಳುತ್ತೇವೆ. ಮನೆಯ ಕೆಲಸ ಬಹುತೇಕ ಮುಕ್ತಾಾಯವಾಗಿದೆ. ನಾನು ಈಗ ಇರುವ ಮನೆ ನನ್ನದಲ್ಲ, ಮರಿಸ್ವಾಾಮಿ ಅವರದ್ದು. ಮರಿಸ್ವಾಾಮಿಯೇ ನನಗೆ ಹಾಗೂ ನನ್ನ ಮಗನಿಗೆ ಅನ್ನದಾತ. ಗೃಹ ಪ್ರವೇಶ ಆದ ಮೇಲೆ ಹೊಸ ಮನೆಗೆ ಹೋಗುತ್ತೇನೆ. ಮರಿಸ್ವಾಾಮಿ ಖಾಲಿ ಇಟ್ಟರೆ ಜನರನ್ನು ಭೇಟಿ ಮಾಡಲು, ಈ ಮನೆ ಬಳಸಿಕೊಳ್ಳುತ್ತೇವೆ ಎಂದು ಹೇಳಿದರು.

