ಸುದ್ದಿಮೂಲ ವಾರ್ತೆ ಬೆಂಗಳೂರು, ಸೆ.25:
ಸರ್ಕಾರಿ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ನಿರಂತರವಾಗಿ ಅಭಿವೃದ್ಧಿಿಗೊಳಿಸುವ, ತರಬೇತಿ ಪಡೆಯುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಮುಂಬಡ್ತಿಿಗಾಗಿ ಕಡ್ಡಾಾಯ ತರಬೇತಿ) ನಿಯಮಗಳು, 2025ಕ್ಕೆೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ಸರ್ಕಾರಿ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ನಿರಂತರವಾಗಿ ಅಭಿವೃದ್ಧಿಿಗೊಳಿಸಲು ಉದ್ದೇಶಿಸಲಾಗಿದೆ. ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿಗಳು ಮುಂಬಡ್ತಿಿ ಹೊಂದಬೇಕಾದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಸಂಸ್ಥೆೆಗಳಲ್ಲಿ ತರಬೇತಿ ಪಡೆಯುವುದು ಕಡ್ಡಾಾಯ. ಇದೇ ರೀತಿಯಲ್ಲಿಯೇ ರಾಜ್ಯದ ಎಲ್ಲಾ ಸಿಬ್ಬಂದಿಗಳಿಗೂ ಸಹ ತರಬೇತಿಯನ್ನು ಕಡ್ಡಾಾಯಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
ಇದಲ್ಲದೇ ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿಿ ನೀತಿ-2025-32, ಶ್ರೀ ಮಲೈ ಮಹದೇಶ್ವರಸ್ವಾಾಮಿ ಕ್ಷೇತ್ರ ಅಭಿವೃದ್ಧಿಿ ಪ್ರಾಾಧಿಕಾರ (ತಿದ್ದುಪಡಿ) ವಿಧೇಯಕ, 2025 ಮತ್ತು ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ, 2025ಕ್ಕೆೆ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಇಲಾಖೆಯಡಿ ಸಮಗ್ರ ವಿಶ್ವವಿದ್ಯಾಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಾಂಶ 2ನೇ ಆವೃತ್ತಿಿಯನ್ನು ರೂ.40.29 ಕೋಟಿ ಮೊತ್ತದಲ್ಲಿ ಅಭಿವೃದ್ಧಿಿಪಡಿಸಿ ಅನುಷ್ಠಾಾನಗೊಳಿಸುವ ಮತ್ತು ಕರ್ನಾಟಕ ರಾಜ್ಯ ರಸ್ತೆೆ ಸುರಕ್ಷತಾ ನಿಧಿಯಡಿಯಲ್ಲಿ 110 ಜಂಕ್ಷನ್ ಗಳಲ್ಲಿ ಬೆಂಗಳೂರು ನಗರಕ್ಕೆೆ ಅವಶ್ಯಕವಿರುವ ಟ್ರಾಾಫಿಕ್ ಸಿಗ್ನಲ್ ಗಳನ್ನು ರೂ. 56.45 ಕೋಟಿಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾಾನಗೊಳಿಸಲು ಅನುಮತಿಯನ್ನು ಸಚಿವ ಸಂಪುಟ ನೀಡಿದೆ ಎಂದರು.
ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯನ್ನು ನಗರಸಭೆಯನ್ನಾಾಗಿ ಮೇಲ್ದರ್ಜೆಗೇರಿಸುವ, ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪ್ರಸ್ತುತ ಇರುವ 60 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆೆಯನ್ನು ಮೊದಲನೇ ಹಂತದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆೆಯನ್ನಾಾಗಿ ರೂ.95.60 ಕೋಟಿ ಅಂದಾಜು ಮೊತ್ತದಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದರು.
ಬೆಳಗಾವಿ ಜಿಲ್ಲೆಯ ಚಿಕ್ಕೋೋಡಿಯಲ್ಲಿ ನಿರ್ಮಿಸಲು ಮಂಜೂರಾಗಿರುವ 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕವನ್ನು (ಸಿಸಿಬಿ) ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕು ಆಸ್ಪತ್ರೆೆಗೆ ಸ್ಥಳಾಂತರಿಸಿ, ಅಂದಾಜು ಮೊತ್ತ ರೂ.23.75 ಕೋಟಿ ಗಳಲ್ಲಿ (ಕಟ್ಟಡ + ವೈದ್ಯಕೀಯ ಉಪಕರಣ) ನಿರ್ಮಿಸಲು ಅನುಮೋದನೆ ನೀಡಿದೆ.
ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಯೋಜನೆಯಡಿ ರಾಜ್ಯ ಅಗ್ನಿಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ವಿಸ್ತರಣೆ ಹಾಗೂ ಆಧುನೀಕರಣದ ರೂ.329.00 ಕೋಟಿಗಳ ಪರಿಷ್ಕೃತ ಕ್ರಿಿಯಾ ಯೋಜನೆ ಮತ್ತು ಚಿಕ್ಕಮಗಳೂರು ಜಿಲ್ಲೆಯ. ಕಡೂರು ತಾಲ್ಲೂಕಿನಲ್ಲಿ ಹೊಸದಾಗಿ ತಾಲ್ಲೂಕು ಪ್ರಜಾಸೌಧ ಕಟ್ಟಡವನ್ನು ರೂ.16 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರಕ್ಕೆೆ 2ನೇ ಹಂತದ ಒಳಚರಂಡಿ ವ್ಯವಸ್ಥೆೆ ಒದಗಿಸುವ ಯೋಜನೆಯ ರೂ.128.74 ಕೋಟಿ ವಿಸ್ತೃತ ಯೋಜನಾ ವರದಿಗೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಘಟಕದ ಅಧೀನದಲ್ಲಿ ಹೊಸದಾಗಿ ಸ್ಥಾಾಪಿಸಿರುವ ಎರಡು ಐ.ಆರ್.ಬಿ ಪಡೆಗಳಿಗೆ ಅವಶ್ಯಕವಿರುವ ಮೂಲಭೂತ ವಸತಿ, ವಸತಿಯೇತರ ಸೌಕರ್ಯಗಳನ್ನು ರೂ.60 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಲ್ಪಿಿಸಲಾಗುವುದು.
ಇನ್ಸ್ಟಿಿಟ್ಯೂಟ್ ಆ್ ಗ್ಯಾಾಸ್ಟ್ರೋೋಎಂಟ್ರಾಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾಾನ್ಸ್ಪ್ಲಾಾಂಟ್, ಬೆಂಗಳೂರು ಸಂಸ್ಥೆೆಗೆ ಅವಶ್ಯವಿರುವ ರೋಬೋಟಿಕ್ ವೈದ್ಯಕೀಯ ಉಪಕರಣವನ್ನು ರೂ.20 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಾಲಯ ಹಾಗೂ ಸಂಶೋಧನಾ ಸಂಸ್ಥೆೆ ಬಾಗಲಕೋಟೆ ಇಲ್ಲಿ 150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಪ್ರಾಾರಂಭಿಸಲು ಅವಶ್ಯವಿರುವ ವೈದ್ಯಕೀಯ ಕಾಲೇಜು ಕಟ್ಟಡ, ಬಾಲಕ, ಬಾಲಕಿಯರ ಹಾಸ್ಟೆೆಲ್ಗಳು, ಬೋಧಕ ಸಿಬ್ಬಂದಿಗಳ ವಸತಿಗೃಹಗಳು ಹಾಗೂ ಇತರೆ ಪೂರಕವಾದ ಕಾಮಗಾರಿಗಳಿಗೆ ಅವಶ್ಯವಿರುವ ರೂ.450 ಕೋಟಿಗಳ ಅಂದಾಜು ಪಟ್ಟಿಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಗ್ರೇೇರ್ಟ ಬೆಂಗಳೂರು ಪ್ರಾಾಧಿಕಾರದ ವ್ಯಾಾಪ್ತಿಿಯಲ್ಲಿ ಗ್ರೇೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಕಲಂ 241(7) ಅವಕಾಶದಡಿ 1200 ಚದರ ಅಡಿಗಳಿಗಿಂತ ಹೆಚ್ಚಿಿನ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಸ್ವಾಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡುವ ಜೊತೆಗೆ ಪ್ರಾಾಧಿಕಾರದ ವ್ಯಾಾಪ್ತಿಿಯಲ್ಲಿ ಪಿಪಿಪಿ ಮಾದರಿಯಲ್ಲಿ ಪ್ರತಿನಿತ್ಯ 1750 ಮೆ. ಟನ್ ಕಟ್ಟಡಗಳ ಹಾಗೂ ನಿರ್ಮಾಣ ಸಾಮಗ್ರಿಿಗಳ ಭಗ್ನಾಾವಶೇಷ ತ್ಯಾಾಜ್ಯದ ಸಂಗ್ರಹಣೆ ಮತ್ತು ವಿಲೇವಾರಿ ಮಾಡುವ (750 ಟಿಪಿಡಿಯ ಒಂದು ಪ್ಯಾಾಕೇಜ್ ಹಾಗೂ 500 ಟಿಪಿಡಿಯ ಎರಡು ಪ್ಯಾಾಕೇಜ್) ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.