ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 14: ವಿಧಾನಸಭಾ ಚುನಾವಣೆ ಈ ಫಲಿತಾಂಶವನ್ನು ಎಲ್ಲರೂ ಸ್ವಾಗತಿಸೋಣ. ಇದು ಸೋಲಲ್ಲ ನನ್ನ ಮೊದಲ ಗೆಲುವು ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಹೇಳಿದರು.
ಭಾನುವಾರ ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಮತದಾನ ಮಗಿದು ಚುನಾವಣಾ ಫಲಿತಾಂಶ ನಿರೀಕ್ಷೆ ಮೀರಿ ಬಂದಿದೆ. ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಇತರೆ ಯಾರೇ ಇರಬಹುದು. ಅಚ್ಚರಿಯ ಫಲಿತಾಂಶವೇ ಬಂದಿದೆ. ಇದು ರಾಜ್ಯದ ಮತಬಾಂಧವರ ತೀರ್ಮಾನ. ಅವರ ಹಕ್ಕು. ಯಾರಿಗೆ ಬೆಂಬಲ ಕೊಡಬೇಕು ಎಂಬುವುದು ಅವರ ಸ್ವ ಇಚ್ಚೆಗೆ ಬಿಟ್ಟದ್ದು. ಇದನ್ನು ಎಲ್ಲರೂ ಸ್ವಾಗತಿಸಬೇಕು. ಎಂದರು.
ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರ ಬಿಜೆಪಿ ಪಕ್ಷದಿಂದ ಅವಕಾಶ ಒಂದು ಅವಕಾಶ ಮಾಡಿಕೊಟ್ಟಿದ್ದರು. ತುಂಬಾ ಕಡಿಮೆ ಅವಧಿಯಲ್ಲಿ ಅಂದರೆ ಮಾ.9ಕ್ಕೆ ಪಕ್ಷಕ್ಕೆ ಸೇರ್ಪಡೆಯಾದೆ. ಮೇ 9ನೇ ತಾರೀಕು ಪ್ರಚಾರಕ್ಕೆ ಕೊನೆ ದಿನ. ಅಂದರೆ ಕೇವಲ ಎರಡು ತಿಂಗಳಲ್ಲಿ ಬಿಜೆಪಿ ಪಕ್ಷದ ನೆಲೆಯೇ ಇಲ್ಲ ಎಂದು ಹೇಳುತ್ತಿದ್ದ ಶಿಡ್ಲಘಟ್ಟ ಕ್ಷೇತ್ರದಲ್ಲಿ ನಮಗೆ ಅಪಾರ ಬೆಂಬಲ ಕೊಟ್ಟು ಸುಮಾರು 15 ರಿಂದ 16 ಸಾವಿರ ಮತಗಳನ್ನು ಕೊಟ್ಟಿದ್ದಾರೆ. ಇದು ಸೋತರೂ ಗೆಲುವಿನ ಸಂತೋಷ ನೀಡಿದೆ ಎಂದು ಹೇಳಿದರು.
ಮುಂದಿನ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದೆ. ಮುಂದಿನ ಐದು ವರ್ಷ ಸತತವಾಗಿ ಸೇವೆ ಮಾಡಿ, ಪಕ್ಷ ಕಟ್ಟುವಂತಹ ಕೆಲಸ ಮಾಡುತ್ತೇವೆ. ಮುಂದೆ ಶಿಡ್ಲಘಟ್ಟದಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಸೀಕಲ್ ರಾಮಚಂದ್ರಗೌಡ ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಂ. ರಾಜಣ್ಣ ಮತ್ತು ಸೀಕಲ್ ಆನಂದ ಗೌಡರು ಜೊತೆಯಲ್ಲಿದ್ದರು.