ಸುದ್ದಿಮೂಲ ವಾರ್ತೆ ಬಳ್ಳಾರಿ, (ತೋರಣಗಲ್ಲು), ಜ.19:
ವಿದ್ಯಾಾರ್ಥಿ ಜೀವನದಲ್ಲಿ ಸೋಲು ಗೆಲುವು ಎರಡನ್ನೂ ಮೆಟ್ಟಿಿನಿಂತು ಜೀವನದ ಗುರಿ ಸಾಧಿಸಿಕೊಳ್ಳಬೇಕು ಎಂದು ಸಂಸದ ಈ. ತುಕಾರಾಂ ಅವರು ತಿಳಿಸಿದ್ದಾಾರೆ.
ತೋರಣಗಲ್ಲು ಜಿಂದಾಲ್ನ ಆದರ್ಶ ವಿದ್ಯಾಾಲಯದಲ್ಲಿ ಭಾರತ್ ಸ್ಕೌೌಟ್ ಮತ್ತು ಗೈಡ್ಸ್ ಮತ್ತು ಜಿಂದಾಲ್ ಆದರ್ಶ ವಿದ್ಯಾಾಲಯದ ಜಂಟಿ ಆಶ್ರಯದಲ್ಲಿ ನಡೆದ ಕಬ್ಸ್, ಬುಲ್ ಬುಲ್ಸ್, ಸ್ಕೌೌಟ್ ಗೈಡ್ಸ್ ಮತ್ತು ರೋವರ್ಸ್ ಅಂಡ್ ರೇಂಜರ್ಸ್ ಹಾಗೂ ದಳ ನಾಯಕರುಗಳ ರಾಜ್ಯಮಟ್ಟದ ಗೀತ ಗಾಯನ ಸ್ಪರ್ಧೆ ಉದ್ಘಾಾಟಿಸಿ ಅವರು ಮಾತನಾಡಿದರು.
ವಿದ್ಯಾಾರ್ಥಿಗಳು ಶಿಸ್ತು ಮತ್ತು ಸಂಯಮ ಅಳವಡಿಸಿಕೊಳ್ಳಬೇಕು. ವಿದ್ಯಾಾರ್ಥಿ ಜೀವನವನ್ನು ಶಿಸ್ತುಬದ್ಧವಾಗಿ ರೂಪಿಸುವಲ್ಲಿ ಭಾರತ್ ಸ್ಕೌೌಟ್ ಅಂಡ್ ಗೈಡ್ ಸಂಸ್ಥೆೆ ತನ್ನದೇ ಆದ ಕೊಡುಗೆ ನೀಡುತ್ತದೆ ಎಂದರು.
ಭಾರತ್ ಸ್ಕೌೌಟ್ಸ್ ಮತ್ತು ಗೈಡ್ ಸಂಸ್ಥೆೆಯ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾಾ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಕರ್ನಾಟಕದಲ್ಲಿ ಪ್ರಸ್ತುತ 7.84 ಲಕ್ಷ ಬನ್ನೀಸ್, ಕಬ್ಸ್, ಬುಲ್ ಬುಲ್, ಸ್ಕೌೌಟ್, ಗೈಡ್, ರೋವರ್, ರೇಂಜರ್ ವಿದ್ಯಾಾರ್ಥಿಗಳಿದ್ದಾಾರೆ ಎಂದರು.
ಜಿಲ್ಲಾಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ, ಮಕ್ಕಳನ್ನು ಶಿಕ್ಷಣದಿಂದ ವಂಚಿಸಬೇಡಿ. ಶಿಕ್ಷಣದ ಜೊತೆಗೆ ವಿದ್ಯಾಾರ್ಥಿಗಳ ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಿಗಾಗಿ ಭಾರತ ಸ್ಕೌೌಟ್ಸ್ ಮತ್ತು ಗೈಡ್ ಸಂಸ್ಥೆೆಯ ಶಿಬಿರಗಳಲ್ಲಿ ಪಾಲ್ಗೊೊಳ್ಳಬೇಕು ಎಂದರು.
ಕಲ್ಯಾಾಣ ಕರ್ನಾಟಕ ಉಸ್ತುವಾರಿಗಳಾದ ಮಲ್ಲೇಶ್ವರಿ ಜುಜಾರೆ ಅವರು ಪ್ರಾಾಸ್ತಾಾವಿಕ ಭಾಷಣ ಮಾಡಿದರು. ಅಖಂಡ ಬಳ್ಳಾಾರಿ ಜಿಲ್ಲೆೆಯಲ್ಲಿ ಭಾರತ ಸ್ಕೌೌಟ್ ಮತ್ತು ಗೈಡ್ಸ್ ಸಂಸ್ಥೆೆಯು ಸುಮಾರು 75 ವರ್ಷದ ಹಿಂದೆ ವೆಂಕಣ್ಣ ಮತ್ತು ಗುರುರಾಜರಾವ್, ಮಲ್ಲಿಕಾರ್ಜುನಯ್ಯ ನೇತೃತ್ವವಹಿಸಿದ್ದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಉಮಾದೇವಿ, ಹಂಪಿ ಕನ್ನಡ ವಿಶ್ವವಿದ್ಯಾಾಲಯದ ರಿಜಿಸ್ಟ್ರಾಾರ್ ವಿರೂಪಾಕ್ಷಿ ಪೂಜಾರಹಳ್ಳಿಿ, ಆದರ್ಶ ವಿದ್ಯಾಾಲಯದ ಕುಮಾರಸ್ವಾಾಮಿ ಬಳಿಗಾರ, ತೋರಣಗಲ್ ಗ್ರಾಾಮ ಪಂಚಾಯತಿ ಅಧ್ಯಕ್ಷರಾದ ಅರಳಾಪುರ ವೀರೇಶಪ್ಪ, ಭಾರತ ಸ್ಕೌೌಟ್ಸ್ ಮತ್ತು ಗೈಡ್ ಸಂಸ್ಥೆೆಯ ಉಪಾಧ್ಯಕ್ಷ ಮಲ್ಲೇಶಪ್ಪ, ಜಿಲ್ಲಾಾ ಕಾರ್ಯದರ್ಶಿ ವಿಜಯ ಸಿಂಹ ಸಂಡೂರು ತಾಲೂಕಿನ ಕಾರ್ಯದರ್ಶಿ ಸೋಮಪ್ಪ ಸೇರಿ ಅನೇಕರು ಈ ಸಂದರ್ಭದಲ್ಲಿದ್ದರು.
ಜೀವನದಲ್ಲಿ ಸೋಲೇ ಗೆಲುವಿನ ಮೆಟ್ಟಿಲು : ಸಂಸದ ಈ. ತುಕಾರಾಂ

