ಸುದ್ದಿಮೂಲ ವಾರ್ತೆ ನವದೆಹಲಿ, ಡಿ.26:
ಬಾಂಗ್ಲಾಾ ದೇಶದಲ್ಲಿ ಹಿಂದೂಗಳ ಹತ್ಯೆೆಯಲ್ಲಿ ಪಾಲ್ಗೊೊಂಡಿರುವವರನ್ನು ಹುಡುಕಿ ಅವರಿಗೆ ಆ ದೇಶದ ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡಲಿದೆ ಎನ್ನುವ ನಿರೀಕ್ಷೆಯನ್ನು ಭಾರತ ಹೊಂದಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಕುರಿತು ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾಾರ ರಣಧೀರ್ ಜೈಸ್ವಾಾಲ್ ಅವರು ಕಳೆದ ವಾರ ಬಾಂಗ್ಲಾಾ ದೇಶದಲ್ಲಿ ದೀಪು ದಾಸ್ ಎಂಬುವವರನ್ನು ಬರ್ಬರವಾಗಿ ಹತ್ಯೆೆ ಮಾಡಲಾಗಿತ್ತು. ಬಳಿಕ ಮೃತ ದೇಹಕ್ಕೆೆ ಬೆಂಕಿ ಹಚ್ಚಲಾಗಿತ್ತು. ಮೊನ್ನೆೆ ಬುಧವಾರ ಅಮೃತ್ ಮಂಡಲ್ ಎಂಬ ಮತ್ತೊೊಬ್ಬ ಹಿಂದೂ ವ್ಯಕ್ತಿಿಯನ್ನು ಹತ್ಯೆೆ ಮಾಡಲಾಗಿದೆ. ಈ ರೀತಿಯ ಹತ್ಯೆೆಗಳು ನಿರಂತರವಾಗಿ ನಡೆಯುತ್ತಿಿದ್ದು ಅಪರಾಧಿಗಳನ್ನು ಪತ್ತೆೆ ಮಾಡಿ ಅವರಿಗೆ ಶಿಕ್ಷೆ ನೀಡಲಿ ಎಂದರು.
ಮೃತ ವ್ಯಕ್ತಿಿ ಅಮೃತ್ ಕಾಳಿಮೊಹರ್ ಬಳಿಯ ಹೊಸೇನ್ದಾಂಗಾ ಗ್ರಾಾಮದವನಾಗಿದ್ದು ಆತ ಸಾಮ್ರಾಾಟ್ ವಾಹಿನಿ ಎಂಬ ಸುಲಿಗೆಕೋರರ ತಂಡಕ್ಕೆೆ ನಾಯಕನಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಶೇಖ್ ಸೀನಾ ಅವರ ಸರ್ಕಾರ ಪತನವಾದ ಬಳಿಕ ಅಮೃತ್ ದೇಶ ತೊರೆದಿದ್ದ. ಇತ್ತೀಚೆಗಷ್ಟೇ ಆತ ಗ್ರಾಾಮಕ್ಕೆೆ ಹಿಂತಿರುಗಿದ್ದ ಎಂದು ಅವರು ಹೇಳಿದರು.
ದೀಪು ಹತ್ಯೆೆಗೆ ಸಂಬಂಧಿಸಿದಂತೆ ಈವರೆಗೆ 12 ಮಂದಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಆತನ ಹತ್ಯೆೆಯಿಂದ ವಿದ್ಯಾಾರ್ಥಿಗಳು, ಬಲಪಂಥೀಯರ ಬೀದಿಗಿಳಿದು ಪ್ರತಿಭಟಿಸಿದ್ದರು. ಬಾಂಗ್ಲಾಾ ದೇಶದ ಹೈಕಮಿಷನ್ ಕಚೇರಿ ಎದುರು ಹಾಗೂ ಪ್ರಮುಖ ರಸ್ತೆೆಗಳಲ್ಲಿ ಪ್ರತಿಭಟನೆ ನಡೆದಿತ್ತು.
ಮೃತಪಟ್ಟ ದೀಪು ಅವರ ಮಕ್ಕಳು ಪತ್ನಿಿ ಮತ್ತು ಪೋಷಕರನ್ನು ನೋಡಿಕೊಳ್ಳುವುದಾಗಿ ಬಾಂಗ್ಲಾಾ ಮಧ್ಯಂತರ ಸರ್ಕಾರ ಭಾರತಕ್ಕೆೆ ಭರವಸೆ ನೀಡಿದೆ ಎಂದು ರಣಧೀರ್ ಜೈಸ್ವಾಾಲ್ ಹೇಳಿದ್ದಾರೆ.

