ಸುದ್ದಿಮೂಲ ವಾರ್ತೆ ಸಿಂಧನೂರು, ಜ.13:
ಪ್ರಜಾತಂತ್ರ ವ್ಯವಸ್ಥೆೆಯಲ್ಲಿ ಮತದಾನ ಮೂಲಭೂತ ಹಕ್ಕು. ದೇಶದ ಭದ್ರತೆ ದೃಷ್ಠಿಿಯಿಂದ ಮತದಾರರನ್ನು ಗುರುತಿಸುವದು ಅನಿವಾರ್ಯವಾಗಿದ್ದು, ಮತದಾರರ ಪರಿಷ್ಕರಣೆ ವಿರೋಧಿಸುವವರು ಪ್ರಜಾಪ್ರಭುತ್ವದ ವಿರೋಧಿಗಳಾಗಿದ್ದಾಾರೆ ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಿಯಲ್ಲಿ ಅವರು ಮಾತನಾಡಿದರು. ಭಾರತಕ್ಕೆೆ ಸ್ವಾಾತಂತ್ರ ಬಂದು 78 ವರ್ಷಗಳು ಕಳೆದಿವೆ. ನಿಜವಾಗಿಯೂ ಮತದಾನದ ಹಕ್ಕು ಸಿಕ್ಕಿಿದೆಯಾ? ಬೊಗಸ್ ಮತದಾನ ಎಲ್ಲಾಾ ಕ್ಷೇತ್ರಗಳಲ್ಲೂ ಇದೆ. ಗ್ರಾಾಮೀಣ ಭಾಗದ ಅನೇಕರು ಸಿಂಧನೂರು ನಗರದಲ್ಲಿ ವಾಸಿಸುತ್ತಿಿದ್ದಾಾರೆ. ಎರಡು ಕಡೆಯೂ ಮತದಾನದ ಹಕ್ಕು ಹೊಂದಿದ್ದಾಾರೆ. ನಮ್ಮ ಸುಕಾಲಪೇಟೆಯ ಅನೇಕರು ಸುಕಾಲಪೇಟೆ ಹಾಗೂ ಆರ್.ಹೆಚ್.ನಂ-1, ಈರಣ್ಣ ಕ್ಯಾಾಂಪ್ಗಳಲ್ಲೂ ಹೊಂದಿದ್ದಾಾರೆ. ತಾಲೂಕಿನಲ್ಲಿ ಹಿಂದೆ ನಡೆದ ಚುನಾವಣೆಗಳಲ್ಲಿ ದೌರ್ಜಜ್ಯ, ಖೊಟ್ಟಿಿ, ಬೋಗಸ್ ಮತದಾರರಿಂದಲೇ ಕೆಲವು ಬಾರಿ ನಾನು ಸೋತಿದ್ದೇನೆ. ಮತ ಹಾಕಿಸಿಕೊಳ್ಳದೇ ಸೋತಿಲ್ಲ. ಖೊಟ್ಟಿಿ, ಬೋಗಸ್ ಮತದಾರರನ್ನು ತೆಗೆದು ಹಾಕಲೇಬೇಕು ಎಂದರು.
ದೇಶದ ಭದ್ರತೆ ದೃಷ್ಠಿಿಯಿಂದ ಮತದಾರರ ಪರಿಷ್ಕರಣೆ ಅನಿವಾರ್ಯ. ವಿಪಕ್ಷಗಳಿಗೆ ದೇಶದ ಹಿತ, ಕಾಳಜಿಯಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆೆ ಉಳಿಬೇಕಾದರೆ ಅನ್ಯದೇಶದವರನ್ನು ಹೊರಹಾಕಲೇಬೇಕು. ಕಮ್ಯುನಿಷ್ಟ ಪಕ್ಷಗಳಿಗೆ ಯಾವ ದೇಶದ ಬಗ್ಗೆೆ ಅಭಿಮಾನ, ಭಕ್ತಿಿಯಿದೆ. ಚೀನಾ, ರಷ್ಯಾಾ ಬಗ್ಗೆೆ ನಿಷ್ಟೆೆಯಿದೆ. ಭಾರತದ ಬಗ್ಗೆೆ ಏಕಿಲ್ಲ. ಕೇಂದ್ರ ಸರಕಾರ ಮತದಾನದ ಚೀಟಿಗೆ ಆಧಾರ ಲಿಂಕ್ ಮಾಡಿದರೆ ಸ್ಪಷ್ಟವಾದ ಮತದಾರರು ಸಿಗಲಿದ್ದಾಾರೆ. ಕಾಂಗ್ರೆೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಯಾಕೆ ಇದನ್ನು ವಿರೋಧಿಸುತ್ತಿಿದೆ? ಬಿಜೆಪಿಯವರು ನಮ್ಮ ಮತದಾರರನ್ನು ತೆಗೆದು ಹಾಕುತ್ತಿಿದೆ ಎಂದು ಹೇಳುತ್ತಿಿದ್ದಾಾರೆ. ದೇಶದ ಮತದಾರರನ್ನು ತಮ್ಮ ಪಕ್ಷದವರು ಎಂದು ಹೇಗೆ ಗುರುತಿಸುತ್ತಾಾರೆ. ಭಾರತೀಯ ಮತದಾರರ ಮೇಲೆ ವಿಶ್ವಾಾಸವಿಲ್ಲವೆ? ಮತದಾರರನ್ನು ಮೂರ್ಖರನ್ನಾಾಗಿ ಮಾಡುವ ಪ್ರಯತ್ನ ನಡೆದಿದೆ. ಮತದಾರರು ಯಾವ ಪಕ್ಷದ ಗುಲಾಮರಲ್ಲ. ಯಾವ ಪಕ್ಷಕ್ಕೆೆ ಸಿಮೀತವಾಗಿಲ್ಲ. ಅರ್ಹರೆಲ್ಲರೂ ಸೇರ್ಪಡೆಗೆ ಅವಕಾಶವಿದೆ. ಕೌಟುಂಬಿಕ ಪಕ್ಷಗಳಾದ ಹಿನ್ನಲೆಯಲ್ಲಿ ಹಿಡಿತ ತಪ್ಪಬಾರದು ಎಂದು ವಿರೋಧಿಸುತ್ತಿಿವೆ. ಪ್ರತಿಯೊಬ್ಬರಿಗೂ ಸ್ವಾಾತಂತ್ರ, ತಿಳುವಳಿಕೆಯಿದೆ. ಮತದಾರರು ಪ್ರಬುದ್ಧರಾಗಿದ್ದಾಾರೆ. ಪಕ್ಷ, ವ್ಯಕ್ತಿಿ ನೋಡಿ ನಿರ್ಧರಿಸುತ್ತಾಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ ರಾಮತ್ನಾಾಳ, ನಗರ ಮಂಡಲದ ಅಧ್ಯಕ್ಷ ಸಿದ್ರಾಾಮೇಶ ಮನ್ನಾಾಪುರ, ಲಿಂಗರಾಜ ಹೂಗಾರ ಇದ್ದರು.
ಮತದಾರರ ಪರಿಷ್ಕರಣೆ ವಿರೋಧಿಸುವವರು ಪ್ರಜಾಪ್ರಭುತ್ವದ ವಿರೋಧಿಗಳು- ಕೆ.ವಿರೂಪಾಕ್ಷಪ್ಪ

