ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ರಾಯಚೂರು ರಿಪೋರ್ಟ್ರ್ಸ್ ಗಿಲ್ಡ್ ಬೆಳ್ಳಿಿ ಮಹೋತ್ಸವದ ಹಿನ್ನೆೆಲೆಯಲ್ಲಿ ರಾಯಚೂರು ಜಿಲ್ಲೆ ಹಾಗೂ ರಾಜ್ಯದ ಎಲ್ಲ ಪತ್ರಕರ್ತರಿಂದ ಕಥೆ, ಕವನ, ಲೇಖನಗಳನ್ನು ಆಹ್ವಾಾನಿಸಿ ಮೂರು ಪುಸ್ತಕಗಳಾಗಿ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ವಿಜಯಕುಮಾರ ಜಾಗಟಗಲ್ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿ ಗೋಷ್ಠಿಿಯಲ್ಲಿ ಮಾತನಾಡಿ, ಪತ್ರಕರ್ತರಿಗಾಗಿ ರಾಜ್ಯಮಟ್ಟದ ಕವನ ಹಾಗೂ ಕಥಾ ಸ್ಪರ್ಧೆ, ರಾಯಚೂರು ಜಿಲ್ಲಾ ಪತ್ರಕರ್ತರಿಂದ ವೃತ್ತಿಿ ಅನುಭವದ ಲೇಖನಗಳ ಆಹ್ವಾಾನಿಸಲು ಸಮಿತಿ ನಿರ್ಧರಿಸಿದೆ. ಹೀಗಾಗಿ, ೆಬ್ರವರಿ 25ರೊಳಗೆ ಕವನ, ಕಥೆ, ಲೇಖನಗಳನ್ನು ಸ್ವೀಕರಿಸಲಾಗುವುದು ಎಂದರು.
ಕಥಾ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 10 ಸಾವಿರ ರೂ, ದ್ವಿಿತೀಯ 7 ಸಾವಿರ, ತೃತೀಯ 3 ಸಾವಿರ ನಗದು ಬಹುಮಾನ ನೀಡಲಾಗುವುದು. ಕವನ ಸ್ಪರ್ಧೆಯ ವಿಜೇತರಿಗೆ ಪ್ರಥಮ 5 ಸಾವಿರ, ದ್ವಿಿತೀಯ 3 ಸಾವಿರ, ತೃತೀಯ ಬಹುಮಾನವಾಗಿ 2 ಸಾವಿರ ಕೊಡಲಾಗುವುದು. ಸ್ಪರ್ಧೆಗೆ ಕಳುಹಿಸುವ ಕಥೆ, ಕವನ ಸ್ವರಚಿತವಾಗಿರಬೇಕಲ್ಲದೆ, ಯಾವುದೆ ಪುಸ್ತಕ, ಪತ್ರಿಿಕೆಗಳಲ್ಲಿ ಪ್ರಕಟವಾಗಿರಬಾರದು ಸ್ಪರ್ಧೆ ಯಲ್ಲಿ ಭಾಗವಹಿಸುವವರು ಕಡ್ಡಾಾಯವಾಗಿ ಪತ್ರಕರ್ತರಾಗಿರಬೇಕು. ಒಬ್ಬ ಪತ್ರಕರ್ತ ಎರಡೂ ವಿಭಾಗದಲ್ಲಿ ಸ್ಪರ್ಧಿಸಬಹುದು ಒಂದು ಕಥೆ, ಒಂದು ಕವನ ಮಾತ್ರ ಕಳುಹಿಸಬೇಕು. ಲೇಖನ, ಕಥೆ, ಕವನವನ್ನು ನುಡಿ/ಯೂನಿಕೋಡ್ ತಂತ್ರಾಾಂಶದಲ್ಲಿ ಸಿದ್ದಪಡಿಸಿ ಇ-ಮೇಲ್ ್ಟ್ಟಜ್ಟಜ್ಚಿ್ಠ್ಟಿಃಜಞಜ್ಝಿಿ.್ಚಟಞಗೆ ಕಳುಹಿಸಬೇಕು.
ರಾಯಚೂರಿನ ಪತ್ರಕರ್ತರು ಬರೆದ ಲೇಖನಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಲೇಖನಗಳಿಗೆ ಯಾವುದೇ ಬಹುಮಾನ ಇರುವುದಿಲ್ಲ. ಆಯ್ಕೆೆಗಾಗಿ ಲೇಖಕರು, ಕತೆಗಾರರು, ಸಾಹಿತಿಗಳನ್ನೊೊಳಗೊಂಡ ಸಮಿತಿ ತೀರ್ಮಾನವೇ ಅಂತಿಮವಾಗಿರಲಿದೆ ಎಂದು ಹೇಳಿದರು. ಹೆಚ್ಚಿಿನ ಮಾಹಿತಿಗಾಗಿ 9964804206/ 9739334156/ 8971451949/ 9902059734 ಸಂಪರ್ಕಿಸಬಹುದಾಗಿದೆ ಎಂದು ಕೋರಿದರು.
ಸುದ್ದಿಗೋಷ್ಠಿಿಯಲ್ಲಿ ಗಿಲ್ಡ್ ಕಾರ್ಯದರ್ಶಿ ವೆಂಕಟೇಶ ಹೂಗಾರ, ಜಂಟಿ ಕಾರ್ಯದರ್ಶಿ ಶ್ರೀಕಾಂತ ಸಾವೂರು, ಖಜಾಂಚಿ ಕೆ.ಸಣ್ಣ ಈರಣ್ಣಘಿ, ಸದಸ್ಯರಾದ ಚನ್ನಬಸವ ಬಾಗಲವಾಡ, ಖಾನ್ಸಾಬ್ ಮೋಮಿನ್ ಇತರರಿದ್ದರು.
ಮೂರು ಪುಸ್ತಕ ಪ್ರಕಟಣೆ, ನಗದು ಬಹುಮಾನ ವಿತರಣೆ ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಹಬ್ಬಕ್ಕೆ ಪತ್ರಕರ್ತರಿಂದ ಕಥೆ, ಕವನ ಲೇಖನಗಳ ಆಹ್ವಾನ – ಜಾಗಟಗಲ್

