ಸುದ್ದಿಮೂಲ ವಾರ್ತೆ ರಾಯಚೂರು, ಡಿ.21:
ಒಂದು ಕಾಲಕ್ಕೆೆ ಶ್ರೀಮಂತರ ಖಾಯಿಲೆ ಎನ್ನುತ್ತಿಿದ್ದ ಮಧುಮೇಹ ಇಂದು ಹಳ್ಳಿಿಗಳಲ್ಲಿ ಹೆಚ್ಚುತ್ತಿಿದೆ ಎಂದು ಕರ್ನಾಟಕ ರಾಜ್ಯ ಮಧುಮೇಹ ಸಂಶೋಧನಾ ಸೊಸೈಟಿ ರಾಜ್ಯಾಧ್ಯಕ್ಷರಾದ ಡಾ.ಅನೂಜ್ ಮಹೇಶ್ವರಿ ಕಳವಳ ವ್ಯಕ್ತಪಡಿಸಿದರು.
ನವೋದಯ ಮೆಡಿಕಲ್ ಕಾಲೇಜಿನ ಎಸ್ ಆರ್ ಹೆಗಡೆ ಸಭಾಂಗಣದಲ್ಲಿ ಕರ್ನಾಟಕ ಮಧುಮೇಹ ಸಂಶೋಧನಾ ಸೊಸೈಟಿ, ರಾಯಚೂರಿನ ಅಸೋಸಿಯೇಷನ್ ಆ್ ಫಿಜಿಷಿಯನ್ ಆ್ ಇಂಡಿಯಾ, ನವೋದಯ ಮೆಡಿಕಲ್ ಕಾಲೇಜಿನ ಮೆಡಿಷಿನ್ ವಿಭಾಗ ಮತ್ತು ರಿಮ್ಸ್ ನ ಮೆಡಿಷಿನ್ ವಿಭಾಗದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಮಧುಮೇಹ ಸಂಶೋಧನೆ, ಜಾಗೃತಿ ಮತ್ತು ತಡೆಗಟ್ಟುವ ವಿಷಯಕ್ಕೆೆ ಸಂಬಂಧಿಸಿದಂತೆ ಮೂರು ದಿನಗಳ ಸಮ್ಮೇಳನದಲ್ಲಿ ಮಾತನಾಡಿದರು. ಗ್ರಾಾಮಾಂತರ ಪ್ರದೇಶದಲ್ಲಿ ಮಧುಮೇಹ ಶೇ 68 ರಷ್ಟಿಿದ್ದು, ಹಳ್ಳಿಿಗಳಲ್ಲಿ ಸಕ್ಕರೆ ರೋಗಿಗಳಲ್ಲಿ ಜಾಗೃತಿ ಮೂಡಿಸಿ, ನಿಯಂತ್ರಿಿಸಿದರೆ ರಾಷ್ಟ್ರಮಟ್ಟದಲ್ಲಿ ರೋಗಿಗಳ ಸಂಖ್ಯೆೆ ಕಡಿಮೆ ಮಾಡಬಹುದಾಗಿದೆ ಎಂದರು.
ಮಕ್ಕಳಲ್ಲಿ ಬರುವ ಸಕ್ಕರೆ ಖಾಯಿಲೆ ತಡೆಗಟ್ಟುವ ನಿಟ್ಟಿಿನಲ್ಲಿ ನಾವು ಸಂಶೋಧನೆ ಮಾಡಿ ಜಾಗೃತಿ ಮೂಡಿಸಿ ನಮ್ಮ ಸಂಸ್ಥೆೆಯಿಂದ ಉಚಿತ ತಪಾಸಣೆ ಮತ್ತು ಔಷಧಿ ವಿತರಣೆ ಮಾಡಲಾಗುತ್ತಿಿದೆ. ಮುಂದುವರೆದು ಹಳ್ಳಿಿಗಳನ್ನ ದತ್ತು ಪಡೆದು ಉಚಿತ ಚಿಕಿತ್ಸೆೆ ನೀಡುವ ಕಾರ್ಯ ಈಗಾಗಲೇ ಆರಂಭಿಸಿದ್ದು, ರಾಯಚೂರು ತಾಲೂಕಿನ ಜೇಗರಕಲ್ ಸೇರಿ ದೇಶದದ್ಯಾಾಂತ 12 ಗ್ರಾಾಮಗಳನ್ನ ದತ್ತು ಪಡೆಯಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ನವೋದಯ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಎಸ್ ಆರ್ ರಡ್ಡಿಿ ಸಕ್ಕರೆ ಖಾಯಿಲೆ ನಿಯಂತ್ರಣದ ಬಗ್ಗೆೆ ಸಂಶೋಧನೆ ಮತ್ತು ಜಾಗೃತಿ ಮೂಡಿಸುವ ಇಂತಹ ಕಾರ್ಯಗಾರಗಳು ಹೆಚ್ಚು ಹೆಚ್ಚಾಾಗಿ ನಡೆಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ರೋಗಗಳ ಸಂಶೋಧನೆ ಮತ್ತು ಜಾಗೃತಿಯಂತ ಸಮ್ಮೇಳನಗಳಿಗೆ ತಮ್ಮ ಶಿಕ್ಷಣ ಸಂಸ್ಥೆೆಯ ಸಹಾಯ ಸದಾ ಇರಲಿದೆ ಎಂದರು.
ಸಮ್ಮೇಳನದಲ್ಲಿ ಮಧುಮೇಹ ಕುರಿತ ಮಧುಸಿರಿ-2025 ಎಂಬ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಡಾ.ಎಂ.ಬಸವರಾಜ ಪಾಟೀಲ ಡಾ.ಎಂ.ಆರ್.ರಾಮಕೃಷ್ಣ, ಡಾ.ಟಿ ಶ್ರೀನಿವಾಸ್, ಡಾ.ಕಾರ್ತಿಕ್ ಮುನಿಚೂಡಪ್ಪ ಡಾ.ಕೆ.ವಿಜಯಕುಮಾರ, ಡಾ.ಕೆ.ಶ್ರೀಧರ, ಡಾ.ಕಲ್ಲಪ್ಪ ಹೆರಕಲ್ ಸೇರಿದಂತೆ ಹಲವು ವೈದ್ಯರು ಉಪಸ್ಥಿಿತರಿದ್ದರು.
ಮೂರು ದಿನಗಳ ಮಧುಮೇಹ ಸಂಶೋಧನೆ, ಜಾಗೃತಿ ಕಾರ್ಯಾಗಾರ ಹಳ್ಳಿಯ ಶೇ.63ರಷ್ಟು ಜನರಿಗೆ ಮಧುಮೇಹ ; ಜಾಗೃತಿ ಅಗತ್ಯ – ಡಾ.ಅನೂಜ್

