ಸುದ್ದಿಮೂಲ ವಾರ್ತೆ ರಾಯಚೂರು,ಸೆ.29:
ಮುನ್ನೂರು ಕಾಪು ಸಮಾಜ ಸಾಂಸ್ಕೃತಿಕ ಪರಂಪರೆ ರಕ್ಷಣೆ ಮಾಡುವುದರ ಮೂಲಕ ಎಲ್ಲ ರಂಗಗಳಲ್ಲಿ ಮುಂಚೂಣತ್ವ ವಹಿಸಿಕೊಳ್ಳುತ್ತದೆ ಎಂದು ಸುದ್ದಿಮೂಲ ಪತ್ರಿಿಕೆಯ ಸಂಪಾದಕರಾದ ಬಸವರಾಜ ಸ್ವಾಾಮಿ ಅವರು ಹೇಳಿದರು.
ಅವರಿಂದು ನಗರದ ಗದ್ವಾಾಲ್ ರಸ್ತೆೆಯಲ್ಲಿರುವ ಶ್ರೀಮಾತಾ ಲಕ್ಷ್ಮಮ್ಮ ದೇವಿ ಹಾಗೂ ಶ್ರೀಕಾಳಿಕಾದೇವಿಯ ದೇವಸ್ಥಾಾನದಲ್ಲಿ ಮುನ್ನೂರು ಕಾಪು ಸಮಾಜ ಹಮ್ಮಿಿಕೊಂಡಿರುವ ನವರಾತ್ರಿಿ ಉತ್ಸವದ ಆರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಮಾತನಾಡಿದರು. ಮುನ್ನೂರು ಕಾಪು ಸಮಾಜ ಶೈಕ್ಷಣಿಕ, ಆರ್ಥಿಕ ರಾಜಕೀಯವಾಗಿ ಬಲಿಷ್ಠವಾಗಿದೆ ಎಂದರು.
ಭಾರತ ಸಂಸ್ಕೃತಿ ಪರಂಪರೆ ಹೊಂದಿದ ದೇಶ ನಮ್ಮ ಸಾಂಸ್ಕೃತಿಕ ಪರಂಪರೆ ರಕ್ಷಣೆಯಲ್ಲಿ ಮುನ್ನೂರು ಕಾಪು ಮುಂಚೂಣಿಯಲ್ಲಿದೆ ಎಂದರು.
ಮಾಜಿ ಶಾಸಕ ಎ. ಪಾಪಾರೆಡ್ಡಿಿ ಅವರ ನೇತೃತ್ವದಲ್ಲಿ ಮುನ್ನೂರುಕಾಪು ಸಮಾಜದ ಸಮಸ್ತ ನಾಯರರು ಸಾಂಸ್ಕೃತಿಕ ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನಿರಂತರ ಶ್ರಮ, ಇತರೆ ಸಮಾಜಗಳಿಗೆ ಮಾದರಿಯಾಗಿದೆ. ಮುನ್ನೂರು ಕಾಪು ಸಮಾಜ ಮಾಡುತ್ತಿಿರುವ ಕಾರ್ಯಗಳಿಂದ ಸಾಂಸ್ಕೃತಿಕ ಪ್ರತಿನಿಧಿಗೆ ವೇದಿಕೆ ದೊರೆತಂತಾಗಿದೆ.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ಎ.ಪಾಪಾರೆಡ್ಡಿಿ ಅವರು ಮಾತನಾಡುತ್ತಾಾ, ಜಿಲ್ಲೆಯಲ್ಲಿ ಕಲೆಯ ಸಂಸ್ಕೃತಿ ಇನ್ನೂ ಹೆಚ್ಚಿಿನ ರೀತಿಯಲ್ಲಿ ಬೆಳೆಯಬೇಕಾಗಿದೆ. ಇದಕ್ಕೆೆ ಎಲ್ಲಾ ಸಮುದಾಯದ ಬಾಂಧವರು ಕೈಜೋಡಿಸಿದಾಗ ಮಾತ್ರ ಸಾಧ್ಯ ಎಂದರು.
ಉಪನ್ಯಾಾಸಕರಾಗಿ ಆಗಮಿಸಿದಂತಹ ವಸುಂದರಾ ಪಾಟೀಲ್ ಮಾತನಾಡುತ್ತಾಾ, ರೂಪದ ಮದ, ಯೌವ್ವನದ ಮದ, ವಿದ್ಯೆೆಯ ಮದ ಈ ಮರಗಳೇ ಸಾಕು ಮನುಷ್ಯನ ಅವನತಿಗೆ ನಮ್ಮೊೊಳಗಿರುವ ರಾಕ್ಷಸರನ್ನು ಸಂಹಾರ ಮಾಡಿದರೆ ಅದೇ ವಿಜಯದಶಮಿ, ನಮ್ಮ ಬದುಕಿನ ವಿಜಯ ಸಾಧನೆ ಮನುಷ್ಯರನ್ನು ಸರಿದಾರಿಗೆ ತರುವುದೇ ವಿಜಯದಶಮಿಯ ವಿಶಿಷ್ಟತೆ ಮಾನವರ ಹಬ್ಬ ಮಾನವೀಯ ಹಬ್ಬ ಎಂದು ಹೇಳಿದರು. ಎಲ್ಲಾ ರಾಕ್ಷಸ ಗುಣಗಳು ನಮ್ಮಲ್ಲಿವೆ, ಅದನ್ನು ಸಂಹಾರ ಮಾಡಿದರೆ, ನಮ್ಮಬದುಕು ಸುಂದರವಾಗುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಒಟ್ಟು 8 ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಜಿಟಿ ಜಿಟಿ ಮಳೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊೊಂಡಿದ್ದ ಕಲಾ ತಂಡಗಳು ಅದ್ಬುತ ನೃತ್ಯ ಪ್ರದರ್ಶನ ಮಾಡುವ ಮೂಲಕ ಮುನ್ನೂರು ಕಾಪು ಸಮಾಜದ ಪ್ರಭಾಲ್ಯ ಪ್ರದಸಿರ್ಶಿತು ಕಲಾ ತಂಡಗಳು ಮಳೆಯಲ್ಲಿ ನೃತ್ಯ ಪ್ರದರ್ಶಿಸಿತು.ಮಾಡುವ ಪ್ರೇೇಕ್ಷಕರ ಗಮನ ಸೆಳೆದರು.ಈ ಸ್ಪರ್ಧೆಯ ನಿರ್ಣಯಕರಾಗಿ ವಿದ್ವಾಾಂಸರಾದ ಮಂಜುನಾಥ್ ಗೊರಕಲ್, ಡಾ. ಸುಸ್ಮಿಿತಾ ಕೃಷ್ಣ ಅವರು ವಹಿಸಿದ್ದರು.
ಶರಣಪ್ಪ ಗೋನಾಳ್ ಮತ್ತು ಪ್ರತಿಭಾ ಗೋನಾಳ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಜಿ. ಶೇಖರ್ರೆಡ್ಡಿಿ, ಪಿ. ರಾಘವೇಂದ್ರ ರೆಡ್ಡಿಿ, ಮುನ್ನೂರು ಕಾಪು ಸಮಾಜದ ಮುಖಂಡರು ಸೇರಿದಂತೆ ಉಪಸ್ಥಿಿತರಿದ್ದರು.
ಮುನ್ನೂರು ಕಾಪು ಸಮಾಜ: ಆರನೇ ದಿನದ ನವರಾತ್ರಿಿಯ ಸಾಂಸ್ಕೃತಿಕ ವೈಭವ ಮುನ್ನೂರು ಕಾಪು ಸಮಾಜ ಎಲ್ಲ ರಂಗಗಳಲ್ಲಿ ಮುಂಚೂಣಿ – ಬಸವರಾಜಸ್ವಾಾಮಿ
