ಸುದ್ದಿಮೂಲ ವಾರ್ತೆ ಸಿರುಗುಪ್ಪ, ಡಿ.24:
ತಮಿಳುನಾಡಿನ ವಿವಿಧ ದೇವಸ್ಥಾಾನಗಳಿಗೆ ಭೇಟಿ ನೀಡಿ ದರ್ಶನ ಪಡೆದು ಸ್ವಗ್ರಾಾಮಕ್ಕೆೆ ಕಾರಿನಲ್ಲಿ ಹಿಂದಿರುಗುತ್ತಿಿದ್ದಾಾಗ ದಟ್ಟವಾದ ಮಂಜಿನ ಕಾರಣ ರಸ್ತೆೆ ಕಾಣದೇ ತೆಕ್ಕಲಕೋಟೆ ಸಮೀಪ ರಸ್ತೆೆ ಬದಿಯ ಕಂದಕ್ಕೆೆ ಕಾರು ಬಿದ್ದ ಕಾರಣ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ.
ಮೃತರನ್ನು ನಿಟ್ಟೂರಿನ ಪ್ರಸಾದ್ ರಾವ್ (75) ಸಿರುಗುಪ್ಪ ನಿವಾಸಿಗಳಾದ ವಿಜಯ (70) ಹಾಗೂ ಸಂಧ್ಯಾಾ (35) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ನಿಟ್ಟೂರು ಗ್ರಾಾಮದ ಪದ್ಮ (70) ಹಾಗೂ ಸಿರುಗುಪ್ಪದ ಬ್ರಹ್ಮೆೆಶ್ವರರಾವ್ (45) ಇವರನ್ನು ಬಳ್ಳಾಾರಿಯ ಟ್ರಾಾಮಾ ಕೇರ್ ಸೆಂಟರ್ಗೆ ದಾಖಲಿಸಲಾಗಿದ್ದು, ಇವರ ಆರೋಗ್ಯ ಸ್ಥಿಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾಾರೆ.
ಬುಧವಾರ ನಸುಕಿನಲ್ಲಿ ದಟ್ಟವಾದ ಮಂಜು ಮುಸುಕಿದ್ದ ಕಾರಣ ಕಾರು ತೆಕ್ಕಲಕೋಟೆ ಸಮೀಪದ ದೇವೀನಗರದ ಸಮೀಪಕ್ಕೆೆ ಆಗಮಿಸುತ್ತಿಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿಿ, ರಸ್ತೆೆ ಪಕ್ಕದ ಕಂದಕಕ್ಕೆೆ ಬಿದ್ದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾಾರೆ.
ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

