ಸುದ್ದಿಮೂಲ ವಾರ್ತೆ ರಾಯಚೂರು, ಡಿ.13
ಕಾರ್ತಿಕ ದೀಪೋತ್ಸವಕ್ಕೆೆ ಅನುಮತಿ ಕೊಟ್ಟ ನ್ಯಾಯ ಮೂರ್ತಿಯವರ ವಿರುದ್ಧ ಮಹಾಭಿಯೋಗಕ್ಕೆೆ ಸಹಿ ಹಾಕಿದ ಕರ್ನಾಟಕದ ಮೂವರು ಸಂಸದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆ ಜೋರಾಗಿ ಸಾಗಿದೆ.
ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲಿನ ದರ್ಗಾದ ಸಮೀಪದಲ್ಲಿರುವ ಸ್ಥಳದಲ್ಲಿ ಕಾರ್ತಿಕ ದೀಪ ಹಚ್ಚಲು ಅನುಮತಿ ಕೊಟ್ಟು ತೀರ್ಪು ಪ್ರಕಟಿಸಿದ್ದಕ್ಕೆೆ ಮದ್ರಾಾಸ್ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ 103 ಸಂಸದರು ವಾಗ್ದಂಡನೆಗೆ ಸಹಿ ಸಂಗ್ರಹಿಸಿದ್ದಾರೆ. ಇದರಲ್ಲಿ ಕರ್ನಾಟಕದ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಹಾಸನದ ಸಂಸದ ಶ್ರೇಯಸ್ ಪಟೇಲ್ ಹಾಗೂ ರಾಯಚೂರು ಸಂಸದ ಜಿ.ಕುಮಾರ ನಾಯಕರು ಕೂಡ ಮಹಾಭಿಯೋಗಕ್ಕೆೆ ಸಹಿ ಹಾಕಿದ್ದು ಇದೀಗ ಹಿಂದೂ ಸಮಾಜದ ಮುಖಂಡರು ರಾಜ್ಯದ ಈ ಮೂವರ ಸಂಸದರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋೋಶ ವ್ಯಕ್ತಪಡಿಸುತ್ತಿಿದ್ದಾರೆ.
ಇಂದು ತಮಿಳುನಾಡಿನ ದೇವಾಲಯದಲ್ಲಿ ಕಾರ್ತಿಕ ದೀಪ ಹಚ್ಚುವುದನ್ನು ವಿರೋಧಿಸಿರುವ ನಮ್ಮ ಕಾಂಗ್ರೆೆಸ್ ಸಂಸದ ಜಿ.ಕುಮಾರ ನಾಯಕ ನಾಳೆ ದೇವಸೂಗೂರು ಸೇರಿದಂತೆ ಜಿಲ್ಲೆಯ ದೇವಾಲಯಗಳಲ್ಲೂ ದೀಪ ಹಚ್ಚದಂತೆ ಕಾನೂನು ತಂದರೂ ಹಿಂದೂಗಳು ಆಶ್ಚರ್ಯ ಪಡಬೇಕಿಲ್ಲ. ನಾಳೆ ನಮ್ಮೂರಿನ ಹಿಂದೂಗಳ ಉತ್ಸವಕ್ಕೆೆ ನಮ್ಮ ಸಂಸದರು ಅಡ್ಡಿಿಪಡಿಸುವುದಿಲ್ಲ ಎಂದು ಏನು ಗ್ಯಾಾರೆಂಟಿ ಎಂಬಂತಹ ಪೋಸ್ಟ್ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಉಭಯ ಜಿಲ್ಲೆಯ ಜನ ಸಂಸದರ ಈ ನಡೆಗೆ ಆಕ್ರೋೋಶ ವ್ಯಕ್ತಪಡಿಸುತ್ತಿಿದ್ದಾರೆ.
ನ್ಯಾಯಮೂರ್ತಿಗಳ ಮಹಾಭಿಯೋಗಕ್ಕೆೆ ರಾಜ್ಯದ ಮೂವರು ಸಂಸದರ ಸಹಿ,ಟೀಕೆ

