ಸುದ್ದಿಮೂಲ ವಾರ್ತೆ ನವದೆಹಲಿ, ಅ.02:
ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಯುತ್ತಿಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿ ಪಾಕಿಸ್ತಾಾನ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಗೆ 12 ಮಂದಿ ನಾಗರಿಕರು ಹಾಗೂ ಮೂವರು ಪೊಲೀಸರು ಮೃತಪಟ್ಟಿಿದ್ದಾರೆ.
ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಗುಂಡೇಟಿನಿಂದ ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಿಯಾ ಸಮಿತಿ (ಎಎಸಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿಿದೆ.
ಪಿಒಕೆಯಲ್ಲಿನ 12 ವಿಧಾನಸಭಾ ಸ್ಥಾಾನಗಳನ್ನು ರದ್ದುಗೊಳಿಸಿದ ಪಾಕಿಸ್ತಾಾನ ಆಡಳಿತದ ವಿರುದ್ಧ ಮೂರು ದಿನಗಳ ಹಿಂದೆ ಆರಂಭವಾದ ಆಂದೋಲನ ತೀವ್ರ ಸ್ವರೂಪ ಪಡೆದು ಹಲವು ಪ್ರದೇಶಗಳಿಗೆ ವಿಸ್ತರಣೆಯಾಗಿ ಹಿಂಸಾರೂಪಕ್ಕೆೆ ತಿರುಗಿತು. ಹೀಗಾಗಿ ಭದ್ರತಾ ಪಡೆಗಳು ಪರಿಸ್ಥಿಿತಿ ನಿಯಂತ್ರಿಿಸಲು ಗುಂಡಿನ ದಾಳಿ ನಡೆಸಿದರು ಎಂದು ತಿಳಿದು ಬಂದಿದೆ.
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ದಡಿಯಾಲ್ನಲ್ಲಿ ಮೊದಲು ಪ್ರತಿಭಟನಾಕಾರರು ಸೈನ್ಯದೊಂದಿಗೆ ಘರ್ಷಣೆ ಆರಂಭಿಸಿದರು. ಕಲ್ಲು ತೂರಾಟ ನಡೆಸಿದರು.ಬಳಿಕ ಹಿಂಸಾಚಾರ ಮುಜರಾಬಾದ್, ರಾವಲಕೋಟ್ ಹಾಗೂ ನೀಲಂ ಕಣಿವೆ ವಿಸ್ತರಿಸಿತು.
ಹಿಂಸಾಚಾರ ವ್ಯಾಾಪಾಕವಾಗಿ ವಿಸ್ತಾಾರಗೊಳ್ಳುತ್ತಿಿದ್ದ ಹಿನ್ನೆೆಲೆಯಲ್ಲಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದವು. ವರದಿಗಳ ಪ್ರಕಾರ, ಮುಜರಾಬಾದ್ನಲ್ಲಿ ಐದು, ಧೀರ್ಕೋಟ್ನಲ್ಲಿ ಐದು ಮತ್ತು ದಡಿಯಾಲ್ನಲ್ಲಿ ಇಬ್ಬರು ಪ್ರತಿಭಟನಾಕಾರರನ್ನು ಭದ್ರತಾಪಡೆ ಯೋಧರು ಗುಂಡಿಕ್ಕಿಿ ಕೊಂದಿದ್ದಾರೆ. ಕನಿಷ್ಠ ಮೂವರು ಪೊಲೀಸ್ ಸಿಬ್ಬಂದಿ ಕೂಡ ಸಾವನ್ನಪ್ಪಿಿದ್ದಾರೆ. ಇದಲ್ಲದೆ, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಹಲವರು ಗಂಭೀರ ಸ್ಥಿಿತಿಯಲ್ಲಿದ್ದಾರೆ, ಹೆಚ್ಚಿಿನವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ.
ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಅಶ್ರುವಾಯು ಸಿಡಿಸಿದರು. ಹೀಗಿದ್ದರೂ ಪ್ರತಿಭಟನಾಕಾರರು ಕಲ್ಲು ತೂರುತ್ತಿಿದ್ದ ಹಿನ್ನೆೆಲೆಯಲ್ಲಿ ಭದ್ರತಾಪಡೆಗಳು ಗುಂಡು ಹಾರಿಸಿದವು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆೆ ವರದಿ ಮಾಡಿದೆ.
ಪ್ರತಿಭಟನೆ ಹಿನ್ನೆೆಲೆಯಲ್ಲಿ ಪಾಕ್ ಆಕ್ರಮಿತ ಗಲಭೆ ಪ್ರದೇಶದಲ್ಲಿ ಮೊಬೈಲ್, ಇಂಟರ್ನೆಟ್ ಹಾಗೂ ಸ್ಥಿಿರ ದೂರವಾಣಿ ಸೇವೆಯನ್ನು ತಾತ್ಕಾಾಲಿಕವಾಗಿ ಕಡಿತಗೊಳಿಸಲಾಗಿದೆ. ಮಾರುಕಟ್ಟೆೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಕೋಟ್
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾಾನ ಹಸ್ತಕ್ಷೇಪ ಮಾಡುತ್ತಿಿದೆ. ಹೀಗಾಗಿ ವಿಶ್ವಸಂಸ್ಥೆೆ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆೆಗಳು ನಮ್ಮ ನೆರವಿಗೆ ಬರಬೇಕು.
ನಾಸಿರ್ ಅಜೀಜ್ ಖಾನ್, ಯುಕೆಪಿಎನ್ಪಿ ವಕ್ತಾಾರ.