ಸುದ್ದಿಮೂಲ ವಾರ್ತೆ
31:ತಮಿಳುನಾಡಿನಿಂದ ಆನೇಕಲ್ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಹರಿದು 13 ಕುರಿಗಳು ಅಸುನೀಗಿರುವ ಘಟನೆ ಚೂಡೇನಹಳ್ಳಿ ಬಳಿ ನಡೆದಿದೆ. ಇಂದು ಬೆಳಗ್ಗೆ ಕುರಿಗಾಹಿ ಮೀಸೆ ತಿಮ್ಮಣ್ಣ, ಕುರಿಗಳನ್ನು ರಸ್ತೆ ದಾಟಿಸುವಾಗ ಘಟನೆ ನಡೆದಿದೆ. ಕೂಡಲೇ ಚಾಲಕ ಟಿಪ್ಪರ್ ನಿಲ್ಲಿಸಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕುರಿಗಾಹಿ ಮೀಸೆ ತಿಮ್ಮಣ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.