ಅಮರಾವತಿ, ೆ.08:
ತಿರುಮಲದ ಲಡ್ಡು ಪ್ರಸಾದದಲ್ಲಿ ಹಲವು ಕಲಬೆರಕೆ ರಾಸಾಯನಿಕಗಳನ್ನು ಬಳಸಲಾಗಿತ್ತು ಎಂಬ ಸತ್ಯವನ್ನು ತಿರುಮಲ ತಿರುಪತಿ ದೇವಸ್ಥಾಾನಂ (ಟಿಟಿಡಿ) ಮಂಡಳಿಯ ಮಾಜಿ ಅಧ್ಯಕ್ಷ ವೈ.ವಿ.ಸುಬ್ಬಾಾ ರೆಡ್ಡಿಿ ಒಪ್ಪಿಿಕೊಂಡಿದ್ದಾರೆ.
ಆಂಧ್ರದ ಮಾಜಿ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿಿ ಅವರ ಆಪ್ತ ಸಂಬಂಧಿಯೂ ಆಗಿರುವ ಸುಬ್ಬಾಾ ರೆಡ್ಡಿಿ, ಲಡ್ಡು ಮಾದರಿಗಳಲ್ಲಿ ರಾಸಾಯನಿಕಗಳು ಮತ್ತು ಇತರ ಪದಾರ್ಥಗಳಿವೆ ಎಂದು ವಿಶೇಷ ತನಿಖಾ ತಂಡ (ಎಸ್ಐಟಿ) ಸಲ್ಲಿಸಿದ ವರದಿಯನ್ನು ತಾವು ಒಪ್ಪುುವುದಾಗಿ ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಆದರೆ ಈ ಕೃತ್ಯದಲ್ಲಿ ತಮ್ಮ ಪಾಲ್ಗೊೊಳ್ಳುವಿಕೆಯನ್ನು ಅವರು ನಿರಾಕರಿಸಿದ್ದು, ಅಂತರ ಕಾಯ್ದುಕೊಂಡಿದ್ದಾರೆ.
ತುಪ್ಪದಲ್ಲಿ ಕಲಬೆರಕೆ ಆಗಿತ್ತು. ಎಸ್ಐಟಿ ವರದಿ ತುಪ್ಪವನ್ನು ತಾಳೆ ಎಣ್ಣೆೆ, ತಾಳೆ ಕರ್ನಲ್ ಎಣ್ಣೆೆ ಮತ್ತು ಇತರ ಕೆಲವು ವಸ್ತುಗಳೊಂದಿಗೆ ಕಲಬೆರಕೆ ಮಾಡಲಾಗಿದೆ ಎಂದು ಹೇಳಿದೆ. ಅನೇಕ ಜನರು, ಕೆಲವು ಅಧಿಕಾರಿಗಳು ಮತ್ತು ಮೂರನೇ ವ್ಯಕ್ತಿಿಗಳು (ಹೊರಗಿನವರು) ಕಲಬೆರಕೆ ತುಪ್ಪದ ಪೂರೈಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಅವರ ಹೆಸರುಗಳನ್ನು ಆರೋಪಪಟ್ಟಿಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ದೆಹಲಿ ಮೂಲದ ಸುದ್ದಿ ವಾಹಿನಿಯೊಂದಕ್ಕೆೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಟಿಟಿಡಿ ಮಾಜಿ ಅಧ್ಯಕ್ಷರು ತಮ್ಮ ಪಾಲ್ಗೊೊಳ್ಳುವಿಕೆಯನ್ನು ಅಲ್ಲಗಳೆದರೂ ಅವರ ಅಧಿಕಾರಾವಧಿಯಲ್ಲಿ ನಡೆದ ತಪ್ಪನ್ನು ಒಪ್ಪಿಿಕೊಂಡಿದ್ದಾರೆ. ಹಾಗಾಗಿ, ವೈಎಸ್ಆರ್ ಕಾಂಗ್ರೆೆಸ್ ಸರ್ಕಾರದ ಅಡಿಯಲ್ಲಿ ಹಿಂದಿನ ಮಂಡಳಿ ಈ ಅಜಾಗರೂಕತೆಗೆ ಹೇಗೆ ಅವಕಾಶ ನೀಡಿತು ಎಂಬುದು ಕುರಿತು ಇದೀಗ ಹೊಸ ಚರ್ಚೆ ಹುಟ್ಟುಹಾಕಿದೆ.
ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪದ ಬಗ್ಗೆೆ ಸಿಬಿಐ ಬಹಿರಂಗಪಡಿಸಿದ ನಂತರ, ಹಲವಾರು ಶ್ರೀಗಳು ತೀವ್ರವಾಗಿ ಖಂಡಿಸಿದ್ದಾರೆ.
ಪವಿತ್ರ ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸುವುದು ಹೇಯ ಕೃತ್ಯ. ಇಂತಹ ತಪ್ಪುುಗಳು ಮುಂದುವರಿದರೆ ಅದು ಜಗತ್ತಿಿನ ಕಲ್ಯಾಾಣಕ್ಕೆೆ ಹಾನಿ ಮಾಡುತ್ತದೆ ಎಂದು ತಮಿಳುನಾಡಿನ ಪೆರಂಬದೂರಿನ ಎಂಬಾರ್ ಜೀರ್ಯ ಸ್ವಾಾಮಿ ಆಕ್ರೋೋಶ ವ್ಯಕ್ತಪಡಿಸಿದ್ದಾರೆ. ಪ್ರಾಾಣಿಗಳ ಕೊಬ್ಬು ಮತ್ತು ರಾಸಾಯನಿಕಗಳಿಂದ ತಯಾರಿಸಿದ ಮಿಶ್ರಣವನ್ನು ಬಳಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಇದೇ ವೇಳೆ ಸರ್ಕಾರವನ್ನು ಒತ್ತಾಾಯಿಸಿದ್ದಾರೆ.
ತಮಿಳುನಾಡಿನ ಮನ್ನಾಾರ್ಗುಡಿ ಮಠದ ಮುಖ್ಯಸ್ಥ ಸಂಪತ್ಕುಮಾರ್ ರಾಮಾನುಜ ಜೀಯರ್ ಸ್ವಾಾಮೀಜಿ ಕೂಡ ಇಂಥದ್ದೇ ಅಭಿಪ್ರಾಾಯ ವ್ಯಕ್ತಪಡಿಸಿದ್ದಾರೆ. ಭಕ್ತಿಿಯಿಲ್ಲದ ಜನರ ಈ ಕೃತ್ಯದಿಂದಾಗಿ, ಪ್ರಸಾದವನ್ನು ಸೇವಿಸುವ ಲಕ್ಷಾಂತರ ಭಕ್ತರ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಬಹುದು ಮತ್ತು ಅವರ ಭಾವನೆಗಳಿಗೆ ಎಷ್ಟು ಆಳವಾಗಿ ನೋವುಂಟಾಗುತ್ತದೆ ಎಂಬುದನ್ನು ಪರಿಗಣಿಸಬೇಕು. ಇಂತಹ ಕಲಬೆರಕೆಯಲ್ಲಿ ಭಾಗಿಯಾಗಿರುವವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

