ಸುದ್ದಿಮೂಲ ವಾರ್ತೆ ಬೆಂಗಳೂರು, ಅ.03:
ಹಲವು ದಿನಗಳಿಂದ ಅನಾರೋಗ್ಯಕ್ಕೆೆ ತುತ್ತಾಾಗಿದ್ದ ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ (97) ಅವರು ಖಾಸಗಿ ಆಸ್ಪತ್ರೆೆಯಲ್ಲಿ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.
ಥೈಲ್ ಜಾಕೋಬ್ ಸೋನಿ ಜಾರ್ಜ್ ( ಟಿಜೆಎಸ್ ಜಾರ್ಜ್) ಎಂದೇ ಅವರು ಪತ್ರಿಿಕೋದ್ಯಮದಲ್ಲಿ ಚಿರಪರಿಚಿತರು.
ಕೆಲ ದಿನಗಳಿಂದ ಅನಾರೋಗ್ಯಕ್ಕೆೆ ಒಳಗಾಗಿದ್ದ ಅವರನ್ನು ಚಿಕಿತ್ಸೆೆಗಾಗಿ ಖಾಸಗಿ ಆಸ್ಪತ್ರೆೆಗೆ ದಾಖಲಿಸಲಾಗಿತ್ತು. ಜಾರ್ಜ್ ನಿಧನಕ್ಕೆೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಟಿಜೆಎಸ್ ಜಾರ್ಜ್ 1928 ಮೇ 7 ರಂದು ಕೇರಳದಲ್ಲಿ ಜನಿಸಿದ್ದರು. ಮದ್ರಾಾಸ್ ಕ್ರಿಿಶ್ಚಿಿಯನ್ ಕಾಲೇಜಿನಿಂದ ಇಂಗ್ಲಿಿಷ್ ಸಾಹಿತ್ಯದಲ್ಲಿ ಪದವಿ ಪಡೆದುಕೊಂಡಿದ್ದರು. ನಂತರ ಮುಂಬೈನ ಫ್ರೀೀ ಪ್ರೆೆಸ್ ಜರ್ನಲ್ನಲ್ಲಿ ವೃತ್ತಿಿಜೀವನ ಆರಂಭಿಸಿದ್ದರು.
ಪದ್ಮ ವಿಭೂಷಣ ಪ್ರಶಸ್ತಿಿಗೆ ಭಾಜನ: ಜಾರ್ಜ್ ಅವರು ಸಾಮಾಜಿಕ ಅನ್ಯಾಾಯ, ಭ್ರಷ್ಟಾಾಚಾರ, ಧಾರ್ಮಿಕ ಅಸಹಿಷ್ಣುತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆೆ ಧ್ವನಿ ಎತ್ತಿಿದ್ದರು. ಪಾಯಿಂಟ್ ಆ್ ವ್ಯೂೆ’ ಎಂಬ ಸಾಪ್ತಾಾಹಿಕ ಅಂಕಣವನ್ನು 25 ವರ್ಷಗಳ ಕಾಲ ಬರೆದಿದ್ದರು.
ಭಾರತೀಯ ಪತ್ರಿಿಕೋದ್ಯಮ ಸೇರಿದಂತೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆೆ ನೀಡಿದ ಅತ್ಯುತ್ತಮ ಕೊಡುಗೆ ಹಿನ್ನಲೆ 2011ರಲ್ಲಿ ಪದ್ಮವಿಭೂಷಣ ಪ್ರಶಸ್ತಿಿಗೆ ಭಾಜನರಾಗಿದ್ದರು. 2019ರಲ್ಲಿ ಕೇರಳದ ಅತ್ಯುನ್ನತ ಮಾಧ್ಯಮದ ಸ್ವದೇಶಾಭಿಮಾನಿ ಕೇಸರಿ ಪ್ರಶಸ್ತಿಿಯನ್ನು ಸಹ ಪಡೆದಿದ್ದರು. ಅವರು ಹಾಂಗ್ ಕಾಂಗ್ನಲ್ಲಿ ಏಷ್ಯಾಾವೀಕ್ ಸಂಸ್ಥೆೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

