ಸುದ್ದಿಮೂಲ ವಾರ್ತೆ ದೇವದುರ್ಗ, ನ.30:
ವಿವಿಧ ಸಂಘಟನೆ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಏರ್ಪಡಿಸಲಾಗಿದೆ. ಪಟ್ಟಣದ ಡಾ.ಬಿಆರ್ ಅಂಬೇಡ್ಕರ್ ವೃತ್ತದಿಂದ ಸಂವಿಧಾನ ಜಾಥಾ ಪ್ರಮುಖ ರಸ್ತೆೆ ಮಾರ್ಗವಾಗಿ, ಗಾಂಧಿ ವೃತ್ತ, ಬಸವೇಶ್ವರ ವೃತ್ತ ಮೂಲಕ ವೇದಿಕೆ ಕಾರ್ಯಕ್ರಮ ಸಾರ್ವಜನಿಕ ಕ್ಲಬ್ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಕಾಲ್ನಡಿಗೆ ಜಾಥಾ ಜರುಗುವ ಮಾರ್ಗದಲ್ಲಿ ಎಲ್ಲೆಂದರಲ್ಲಿ ನೀಲಿ ಧ್ವಜಗಳು ರಾರಾಜಿಸುತ್ತಿಿವೆ. ಅದರಲ್ಲಿ ಜೆಪಿ ವೃತ್ತದಿಂದ ಬಸ್ ನಿಲ್ದಾಾಣ ಮಾರ್ಗವಾಗಿ ಡಾ.ಬಿಆರ್ ಅಂಬೇಡ್ಕರ್ ವೃತ್ತವರೆಗೆ ಎಲ್ಲೆಂದರಲ್ಲಿ ನೀಲಿ ಧ್ವಜಗಳು ಸಾರ್ವಜನಿಕ ಗಮನಸೆಳೆದಿವೆ. ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲು ಕಳೆದ ತಿಂಗಳಿಂದ ವಿವಿಧ ಸಂಘಟನೆಯ ಮುಖಂಡರು ಸಕಲ ಸಿದ್ದತೆ ನಡೆಸಿದ್ದಾರೆ. ಸಂವಿಧಾನ ಸಂರಕ್ಷಣಾ ಪಡೆ ದೇವದುರ್ಗ ವತಿಯಿಂದ ಲಾಠಿ ಬಿಡಿ, ಶಿಕ್ಷಣ ಪಡಿ ಬೃಹತ್ ಮಟ್ಟದ ಕಾಲ್ನಡಿಗೆ ಜಾಥಾ ಆಯೋಜಿಸಿದ್ದು, ಕಾರ್ಯಕ್ರಮಕ್ಕೆೆ ಮುಖ್ಯ ಭಾಷಣಕಾರರಾಗಿ ಪ್ರಗತಿಪರ ಚಿಂತಕರು ಕೆ.ನೀಲಾ ಕಲಬುರಗಿ ಆಗಮಿಸುತ್ತಿಿದ್ದಾರೆ. ಕಾಲ್ನಡಿಗೆ ಜಾಥಾದಲ್ಲಿ ಸಾವಿರಾರು ಸಂಖ್ಯೆೆಯಲ್ಲಿ ಭಾಗವಹಿಸುವ ಹಿನ್ನೆೆಲೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಯ ಮುಖಂಡರು ಪ್ರಗತಿಪರ ಚಿಂತಕರು ಪಾಲ್ಗೊೊಳ್ಳಲಿದ್ದಾರೆ. ಸೋಮವಾರ ಮಧ್ಯಾಾಹ್ನ ಸಾರ್ವಜನಿಕ ಕ್ಲಬ್ ಆವರಣದಲ್ಲಿ ಬೃಹತ್ ಸಮಾವೇಶ ಜರುಗಲಿದೆ ಎಂದು ವಿಶ್ವನಾಥ್ ಬಲ್ಲಿದವ್ ತಿಳಿಸಿದರು.
ಏನಿದು ಸಮಾವೇಶ : ಪಟ್ಟಣದ ಸಾರ್ವಜನಿಕ ಕ್ಲಬ್ ಆವರಣದಲ್ಲಿ ಸೋಮವಾರ ಸಂವಿಧಾನ ಸಂರಕ್ಷಣಾ ಪಡೆ ದೇವದುರ್ಗ ಆಯೋಜಿಸಿದ್ದ ಬೃಹತ್ ಮಟ್ಟದ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಉದ್ದೇಶ ಲಾಠಿ ಬಿಡಿ, ಶಿಕ್ಷಣ ಪಡಿ ಎಂಬ ಸಂದೇಶ ಮೂಲಕ ಕಾರ್ಯಕ್ರಮ ರೂಪಿಸಲಾಗಿದೆ. ಈಗಿನ ಪೀಳಿಗೆಗೆ ಡಾ.ಬಿಆರ್ ಅಂಬೇಡ್ಕರ್ ದೇಶಕ್ಕೆೆ ಕೊಟ್ಟಿಿರುವ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಹಿನ್ನೆೆಲೆ ವಿವಿಧ ದಲಿತ ಪರ ಸಂಘಟನೆಗಳು ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೋಹನ್ ಬಲ್ಲಿದವ್ ತಿಳಿಸಿದರು.
ರಾರಾಜಿಸುತ್ತಿಿವೆ ನೀಲಿ ಧ್ವಜಗಳು : ಪಟ್ಟಣದಲ್ಲಿ ಸೋಮವಾರ ನಡೆಯಲಿರುವ ಸಂವಿಧಾನ ಜಾಗೃತೆ ಜಾಥಾ ಕಾರ್ಯಕ್ರಮ ಹಿನ್ನೆೆಲೆಯಲ್ಲಿ ಎಲ್ಲೆಂದರಲ್ಲಿ ನೀಲಿ ಧ್ವಜಗಳು ರಾರಾಜಿಸುತ್ತಿಿವೆ. ಅದರಲ್ಲಿ ಜೆಪಿ ವೃತ್ತದಿಂದ ಡಾ.ಬಿಆರ್ ಅಂಬೇಡ್ಕರ್ ವೃತ್ತವರೆಗೆ ಒಂದು ಕಿಮೀವರೆಗೆ ನೀಲಿ ಧ್ವಜಗಳು ಸಾರ್ವಜನಿಕ ಗಮನಸೆಳೆದಿವೆ.
ಕಾರ್ಯಕ್ರಮ ಯಶಸ್ವಿಿಗೊಳಿಸಲು ದಲಿತ ಪರ ಸಂಘಟನೆಗಳ ಮುಖಂಡರು ತಿಂಗಳಿಂದ ಹಲವು ಹಂತದ ಪೂರ್ವಭಾವಿ ಸಭೆಗಳು ಮಾಡುವ ಮೂಲಕ ಸಿದ್ದತೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಮುನ್ನೆೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ತ್ ನಿಯೋಜನೆ ಮಾಡಲಾಗಿದೆ ಎಂದು ಪಿಐ ಎಸ್.ಮಂಜುನಾಥ ತಿಳಿಸಿದರು.
ಇಂದು ಸಂವಿಧಾನ ಜಾಗೃತಿ ಜಾಥಾ : ಎಲ್ಲೆಡೆ ರಾರಾಜಿಸುತ್ತಿರುವ ನೀಲಿ ಧ್ವಜಗಳು

